ಕೆರೆ ಕೋಡಿಲ್ಲಿ ಕೊಚ್ಚಿಹೋದ ಪ್ರಕರಣ; ಸಾವನ್ನೇ ಗೆದ್ದು ಬಂದ ಯುವತಿ!
ಸೆಲ್ಫಿ ಹುಚ್ಚಿಗೆ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದ ಯುವತಿ ಅಗ್ನಿಶಾಮಕದಳದ ಸತತ 12 ಗಂಟೆಗಳ ಪ್ರಯತ್ನದಿಂದ ಸಾವನ್ನೇ ಗೆದ್ದು ಬಂದಿದ್ದಾಳೆ.
ತುಮಕೂರು (ಅ.28) ಸೆಲ್ಫಿ ಹುಚ್ಚಿಗೆ ಕಾಲು ಜಾರಿ ಬಿದ್ದು ನಾಪತ್ತೆಯಾದ ಘಟನೆ ತುಮಕೂರು ತಾಲೂಕಿನ ಮೈದಾಳ ಕೆರೆ ಕೋಡಿ ಬಳಿ ನಡೆದಿದ್ದು. ಅದೃಷ್ಟವಶಾತ್ ಅಗ್ನಿಶಾಮಕ ದಳದ ಸತತ 12 ಗಂಟೆ ಕಾರ್ಯಾಚರಣೆಯಿಂದ ಯುವತಿ ಸಾವನ್ನೇ ಗೆದ್ದು ಬಂದಿದ್ದಾಳೆ.
ಹಂಸ (19), ಕೊಚ್ಚಿಹೋಗಿದ್ದ ಯುವತಿ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಶಿವರಾಂಪುರ ಗ್ರಾಮದ ಸೋಮನಾಥ್ ಎಂಬುವವರ ಮಗಳಾದ ಹಂಸ. ನಿನ್ನೆ ರಜೆ ಹಿನ್ನೆಲೆ ಸ್ನೇಹಿತರ ಜೊತೆ ಮಂದಾರಗಿರಿ ಬೆಟ್ಟಕ್ಕೆ ಬಂದಿದ್ದಿಳು. ಈ ವೇಳೆ ಅಲ್ಲೆ ಸಮೀಪದಲ್ಲಿರುವ ಮೈದಾಳ ಕೆರೆ ಕೋಡಿ ಹರಿಯುವ ಸುದ್ದಿ ಕೇಳಿ ನೋಡಲು ಕೆರೆ ಬಳಿ ಹೋಗಿದ್ದರು.
ಆಸ್ತಿಗಾಗಿ 2ನೇ ಗಂಡನಿಗೆ ಇಟ್ಲು ಮುಹೂರ್ತ: ತೆಲಂಗಾಣದಲ್ಲಿ ಹತ್ಯೆ ಮಾಡಿ ಕೊಡಗಿನಲ್ಲಿ ಸುಟ್ಟುಹಾಕಿದ್ದ ಸುಪನಾತಿ
ಕೆರೆ ಕೋಡಿ ಬಳಿ ತೆರಳಿರುವ ಯುವರಿ ರಭಸವಾಗಿ ಹರಿಯುವ ನೀರಿನೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಈ ವೇಳೆ ಆಯಾತಪ್ಪಿ ಕಾಲು ಜಾರಿ ಪೊಟರೆಯೊಳಗೆ ಬಿದ್ದಿರುವ ರಭಸವಾಗಿ ಹರಿಯುವ ನೀರಿನಲ್ಲಿ ಕೊಚ್ಚಿಹೋಗಿದ್ದಾಳೆ. ಘಟನೆ ನಿನ್ನೆ ಸಂಜೆ ನಡೆದಿದ್ದರೂ ಈವರೆಗೆ ಪತ್ತೆಯಾಗಿಲ್ಲ. ನಿನ್ನೆಯಿಂದಲೇ ನಿರಂತರವಾಗಿ ಅಗ್ನಿಶಾಮಕ ದಳದ ಅಧಿಕಾರಿ ಸಿಬ್ಬಂದಿ ಹಾಗೂ ಪೊಲೀಸರು ಯುವತಿ ಮೃತದೇಹ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೈ ಮೇಲೆ ಮಷಿನ್ ಬಿದ್ದು ಅಸ್ಸಾಂ ಕಾರ್ಮಿಕ ಸಾವು
ದಾಬಸ್‌ಪೇಟೆ: ಕಂಪನಿಯಲ್ಲಿ ಮಷಿನ್ ಹಾಗೂ ಸರಕುಗಳನ್ನು ಪರಿಶೀಲಿಸುವಾಗ ಎಂ.ಎಸ್.ಮೆಟೀರಿಯಲ್ ಕಾರ್ಮಿಕನ ಮೇಲೆ ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದ ಮೈತ್ರಿ ಮೆಟಲಿಜಿಂಗ್ ಖಾಸಗಿ ಕಂಪನಿಯಲ್ಲಿ ನಡೆದಿದೆ.
ಕೇವಲ 25 ದಿನದಲ್ಲಿ ವಾಡಿಕೆಗಿಂತ ಶೇ.58ರಷ್ಟು ಹೆಚ್ಚು ಸುರಿದ ಹಿಂಗಾರು ಮಳೆ: 25 ಮಂದಿ ಸಾವು!
ಅಸ್ಸಾಂ ಮೂಲದ ಜ್ಯೂಲಿಯಸ್ ಹಂಸೆ (30) ಮೃತ ಕಾರ್ಮಿಕ. ಬೆಂಗಳೂರಿನ ಪೀಣ್ಯದಲ್ಲಿರುವ ಕರೋಷನ್ ಪ್ರೋಟೆಕ್ಷನ್ ಇಂಜಿನಿಯರ್ ಇಂಡಿಯಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಹಂಸೆ ಅವರನ್ನು ಕಂಪನಿಯವರು ಮೈತ್ರಿ ಮೆಟಲಿಜಿಂಗ್ ಕಂಪನಿಯ ಕೆಲವು ಮಷಿನ್‌ಗಳನ್ನು ಪರಿಶೀಲಿಸಲು ಕಳಿಸಿದಾಗ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ ಪಿ.ಜಗದೀಶ್ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.