Asianet Suvarna News Asianet Suvarna News

Vijayapura Crime: ಬಲವಂತದ ಮದುವೆ ಒಲ್ಲೆನೆಂದು ಗೋಳಗುಮ್ಮಟದಿಂದ ಹಾರಿ ಪ್ರಾಣಬಿಟ್ಟ ಯುವತಿ

ಪ್ರಸಿದ್ಧ ಪ್ರವಾಸಿ ತಾಣವಾಗಿರುವ ವಿಜಯಪುರದ ಗೋಳಗುಮ್ಮಟವು ಈಗ ಆತ್ಮಹತ್ಯಾ ತಾಣವಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಕಳೆದೆರಡು ತಿಂಗಳ ಹಿಂದೆ ವಯಸ್ಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದ ಬೆನ್ನಲ್ಲೇ ಈಗ 20 ವರ್ಷದ ಯುವತಿಯೊಬ್ಬಳು ಗುಮ್ಮಟದ ಮೇಲಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ನಡೆದಿದೆ.

Young woman died by jumping from the Gol Gumbaz of a forced marriage sat
Author
First Published Dec 21, 2022, 7:45 PM IST

ವಿಜಯಪುರ (ಡಿ.21): ನಾಡಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ವಿಜಯಪುರದ ಗೋಳಗುಮ್ಮಟವು ಈಗ ಆತ್ಮಹತ್ಯಾ ತಾಣವಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಎರಡು ತಿಂಗಳ ಹಿಂದೆ ವಯಸ್ಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದ ಬೆನ್ನಲ್ಲೇ ಈಗ 20 ವರ್ಷದ ಯುವತಿಯೊಬ್ಬಳು ಗುಮ್ಮಟದ ಮೇಲಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ನಡೆದಿದೆ.

ಗೋಳಗುಮ್ಮಟ ಮೇಲಿಂದ ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸೌಂದರ್ಯ ಬೆಂಗಳೂರು (20) ಆತ್ಮಹತ್ಯೆಗೆ ಎಂದು ಗುರುತಿಸಲಾಗಿದೆ. ವಿಜಯಪುರ ನಗರದ ರಾಣಿಬಗಿಚ್ ನಿವಾಸಿ ಆಗಿದ್ದಾರೆ. ಇನ್ನು ಈ ಯುವತಿಗೆ ಮನೆಯಲ್ಲಿ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು. ಇತ್ತೀಚೆಗೆ ಎಂಗೆಜ್ಮೆಂಟ್ ಕೂಡ ಆಗಿತ್ತು. ಆದರೆ, ಮದುವೆ ಆಗುವುದಿಲ್ಲ ಎಂದು ಮನೆಯವರ ಮುಂದೆ ಮದುವೆಯನ್ನು ನಿರಾಕರಿಸಿದ್ದಳು. ಮನೆಯವರ ಮದುವೆಯ ಒತ್ತಡದಿಂದಾಗಿಯೇ ಆತ್ಮಹತ್ಯೆಗೆ ಶರಣಾಗಿದ್ದಾಳೆಯೇ ಎಂಬ ಅನುಮಾನ ಕಾಡುತ್ತಿದೆ.

ಗೋಳಗುಮ್ಮಟ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ತಿರುವು?

ಇನ್ನೊಬ್ಬ ಯುವಕನೊಂದಿಗೆ ಪ್ರೇಮ:  ಇನ್ನು ಸಾವನ್ನಪ್ಪಿದ ಯುವತಿ ಮತ್ತೊಬ್ಬ ಯುವಕನನ್ನು ಪ್ರೀತಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮದುವೆಗೆ ನಿರಾಕರಣೆ ಮಾಡಿದ್ದಳು ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಗೋಳಗುಮ್ಮಟ ಪೊಲೀಸರ ಆಗಮಿಸಿದ್ದು, ಇನ್ನಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಸ್ಥಳಕ್ಕೆ ಸಿಪಿಐ ಮಠಪತಿ ಹಾಗೂ ಐಪಿಎಸ್ ಸೀತಾರಾಮ್ ಅವರು ಆಗಮಿಸಿದ್ದರು. 

ಭಾರತಕ್ಕೆ ಜಿ20 ಶೃಂಗಸಭೆ ಅಧ್ಯಕ್ಷತೆ; ಐತಿಹಾಸಿಕ ಗೋಳಗುಮ್ಮಟಕ್ಕೆ ದೀಪಾಲಂಕಾರ

ಪ್ರವಾಸಿ ತಾಣಕ್ಕೆ ಬರಲು ಭಯ: ನಾಡಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ವಿಜಯಪುರದ ಗೋಳಗುಮ್ಮಟ ನೋಡಲು ಪ್ರತಿನಿತ್ಯ ಸಾವಿರಾರು ಜನರು ಆಗಮಿಸುತ್ತಾರೆ. ಇನ್ನು ಚಳಿಗಾಲ ಆಗಿದ್ದರಿಂದ ಶಾಲಾ ಮಕ್ಕಳು ಸೇರಿದಂತೆ ದೇಶ- ವಿದೇಶಗಳಿಂದ ಪ್ರವಾಸಕ್ಕೆ ಬರುವವರ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಇಂತಹ ವೇಳೆಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗಿ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಗೋಳಗುಮ್ಮಟ ನೋಡಲು ಬರುವ ಪ್ರವಾಸಿಗರಿಗೆ ಸಮಸ್ಯೆ ಆಗಲಿದೆ. ಜೊತೆಗೆ, ಇಲ್ಲಿಗೆ ಬರುವವರ ಸಂಖ್ಯೆಯೂ ಕಡಿಮೆ ಆಗಲಿದೆ ಎಂಬ ಅನುಮಾನ ಕಾಡುತ್ತಿದೆ.

Follow Us:
Download App:
  • android
  • ios