ಮೈಸೂರು(ಜೂ.22): ಹೊಟ್ಟೆನೋವು ತಡೆಯಲಾಗದೆ ಯುವತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ. 

ವಿದ್ಯಾನಗರದ ನಿವಾಸಿ ಸಂಜನಾ(21) ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ. ಎಂಸಿಎ ವ್ಯಾಸಂಗ ಮಾಡುತ್ತಿದ್ದ ಯುವತಿಗೆ ಪ್ರತಿ ತಿಂಗಳ ಋುತುಸ್ತ್ರಾವದ ವೇಳೆ ವಿಪರೀತ ಹೊಟ್ಟೆನೋವು ಬರುತ್ತಿತ್ತು. 

ಮಂಗಳಮುಖಿ ಎಂದು ಬಾಲಕನ ಅಣಕ, ನೊಂದವ ನೇಣಿಗೆ ಶರಣಾದ

ಈ ನೋವನ್ನು ತಡೆಯಲಾಗದ ಯುವತಿ ಶನಿವಾರ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ನಜರ್‌ಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.