ಆಡರ್ ರಿಪೇರ್ ಆಗಬೇಕೆಂದರೆ 5 ಲಕ್ಷ ರು.ಆಗುತ್ತದೆ. ಆದರೆ, ಕಂಪನಿಯವರು 2.50 ಲಕ್ಷ ಹಾಕುತ್ತಿದ್ದು, ನೀವು 2.50 ಲಕ್ಷ ಹಾಕಬೇಕೆಂದು ಹೇಳಿದಾಗ ನಿತೀನ್ ಆ ಹಣವನ್ನು ಹಾಕಿದ್ದಾರೆ. ಆನಂತರವೂ ಅಕೌಂಟ್ ಅಪ್ ಗ್ರೇಟ್ ಮಾಡಲು ವಂಚಕರು ಕೇಳಿದಂತೆ 2,20,225 ರು. ಪಾವತಿಸಿದ್ದಾರೆ. ಈ ರೀತಿ 11,94,225 ರು.ಹಣ ಕಳೆದುಕೊಂಡಿದ್ದಾರೆ. 

ರಾಮನಗರ(ಡಿ.01): ವಾಟ್ಸ್ ಆಪ್‌ ನಲ್ಲಿ ಬಂದ ಪಾರ್ಟ್ ಟೈಮ್ ಜಾಬ್‌ ಮೆಸೇಜ್ ಅನ್ನು ನಂಬಿ ಯುವಕನೊಬ್ಬ 11 ಲಕ್ಷ ರುಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ.

ಬಿಡದಿ ಹೋಬಳಿ ಬೈರಮಂಗಲ ಗ್ರಾಮದ ವಾಸಿ ಆರ್.ನಿತೀನ್ ಹಣ ಕಳೆದುಕೊಂಡ ಯುವಕ. ಕಳೆದ ನ.3ರಂದು ನಿತೀನ್‌ ರವರ ವಾಟ್ಸ್ ಆಪ್‌ ನಲ್ಲಿ ಪಾರ್ಟ್ ಟೈಮ್ ಜಾಬ್‌ ಅಂತ ಮೆಸೇಜ್‌ ಬಂದಿದ್ದು, ಅದರಲ್ಲಿ ಟೆಲಿಗ್ರಾಂನಲ್ಲಿ @WehMitra2 ಎಂಬ ಲಿಂಕ್‌ ನಲ್ಲಿ ಓಪನ್‌ ಮಾಡಿದಾಗ ಟಾಸ್ಕ್ ಕೊಟ್ಟು ಗೂಗಲ್‌ನಲ್ಲಿ ರೆಸ್ಟೋರೆಂಟ್‌ ಗಳಿಗೆ ರೇಟಿಂಗ್ಸ್ ಕೊಟ್ಟು ಸ್ಕ್ರೀನ್‌ ಶಾಟ್‌ ಮಾಡಿ ಟೆಲಿಗ್ರಾಂನಲ್ಲಿ ವಾಪಸ್‌ ಕಳುಹಿಸಿದಾಗ ಹಣವನ್ನು ಕಳುಹಿಸುತ್ತೇವೆ. 22 ಟಾಸ್ಕ್ ಮುಗಿಸಿದರೆ ಒಂದು ದಿನಕ್ಕೆ 7500 ರು. ನೀಡುತ್ತೇವೆಂದು ವಂಚಕರು ತಿಳಿಸಿದ್ದಾರೆ.

ಬೆಂಗಳೂರು: ಟೈರ್‌ ಪಂಕ್ಚರ್‌ ಮಾಡಿ 25 ಲಕ್ಷದ ಚಿನ್ನ ಎಗರಿಸಿದ ಖದೀಮನ ಬಂಧನ

ಇದನ್ನು ನಂಬಿ 1 ಟಾಸ್ಕ್ ಆಡಿದ್ದ ನಿತೀನ್ ಗೆ ನ.4ರಂದು 9ನೇ ಟಾಸ್ಕ್ ಆಡಲು 18 ಸಾವಿರ ರುಪಾಯಿ ಪಾವತಿಸುವಂತೆ ವಂಚಕರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆ ಸಂಖ್ಯೆ ಕೊಟ್ಟಿದ್ದಾರೆ. ಆ ಖಾತೆಗೆ ನಿತಿನ್ ತಾವು ಖಾತೆ ಹೊಂದಿರುವ ಐಸಿಐಸಿಐ ಬ್ಯಾಂಕಿನಿಂದ ಇಂಟರ್ ನೆಟ್ ಬ್ಯಾಂಕ್ ನಿಂದ ಹಣ ಕಳುಹಿಸಿದ್ದಾರೆ. ಅದೇ ದಿನ ಮತ್ತೆ ಪಂಜಾಬ್‌ ನ್ಯಾಷನಲ್ ಬ್ಯಾಂಕ್ ಖಾತೆಗೆ 58 ಸಾವಿರ, ಐಸಿಐಸಿಐ ಬ್ಯಾಂಕ್ ಖಾತೆಗೆ 98 ಸಾವಿರ ರು. ಪಾವತಿ ಮಾಡಿದ್ದಾರೆ. ಆ ಹಣವನ್ನು ವಿತ್ ಡ್ರಾ ಮಾಡುತ್ತೇವೆಂದು ನಿತೀನ್ ಖಾತೆಯ ವಿವರವನ್ನು ಪಡೆದು ಹಣವನ್ನು ವಾಪಸ್‌ ಕೊಡಬೇಕೆಂದು ಕೇಳಿದಾಗ ರಾಂಗ್ ಆರ್ಡರ್ ಪಾಸ್‌ ಆಗಿದೆ ಎಂದು ವಂಚಕರು ತಿಳಿಸಿದ್ದಾರೆ.

ಈ ಆಡರ್ ರಿಪೇರ್ ಆಗಬೇಕೆಂದರೆ 5 ಲಕ್ಷ ರು.ಆಗುತ್ತದೆ. ಆದರೆ, ಕಂಪನಿಯವರು 2.50 ಲಕ್ಷ ಹಾಕುತ್ತಿದ್ದು, ನೀವು 2.50 ಲಕ್ಷ ಹಾಕಬೇಕೆಂದು ಹೇಳಿದಾಗ ನಿತೀನ್ ಆ ಹಣವನ್ನು ಹಾಕಿದ್ದಾರೆ. ಆನಂತರವೂ ಅಕೌಂಟ್ ಅಪ್ ಗ್ರೇಟ್ ಮಾಡಲು ವಂಚಕರು ಕೇಳಿದಂತೆ 2,20,225 ರು. ಪಾವತಿಸಿದ್ದಾರೆ. ಈ ರೀತಿ 11,94,225 ರುಪಾಯಿಗಳನ್ನು ಕಳೆದುಕೊಂಡಿರುವ ನಿತೀನ್‌ ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.