Bengaluru Accident: ಪ್ರಾರ್ಥನೆಗಾಗಿ ಚರ್ಚ್‌ಗೆ ಹೊರಟ ಯುವಕ ಮಸಣ ಸೇರಿದ: ಫುಟ್‌ಪಾತ್ ಗೋಡೆಗೆ ಬೈಕ್ ಗುದ್ದಿ ಸಾವು
ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಬೆಳಗ್ಗೆ ಪ್ರಾರ್ಥನೆಗೆಂದು ಚರ್ಚ್‌ಗೆ ಹೊರಟಿದ್ದ ಇಬ್ಬರು ಯುವಕರ ಬೈಕ್ ಗೋಪಾಲಗೌಡ ಜಂಕ್ಷನ್ ಬಳಿ ರಸ್ತೆ ಬದಿಯಲ್ಲಿರುವ ಪುಟ್ ಪಾತ್ ತಡೆಗೋಡೆಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಬೆಂಗಳೂರು (ಡಿ.25): ನಗರದ ಗೋಪಾಲಗೌಡ ಜಂಕ್ಷನ್ ಬಳಿ ರಸ್ತೆ ಬದಿಯಲ್ಲಿರುವ ಪುಟ್ ಪಾತ್ ತಡೆಗೋಡೆಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಇನ್ನು ಯುವಕ ವೇಗವಾಗಿ ಜಲಿಸುತ್ತಿದ್ದು, ಪಾದಚಾರಿ ಮಾರ್ಗದ ತಡೆಗೋಡೆಗೆ ಗುದ್ದಿದ ತಕ್ಷಣ ಬಿದ್ದಿದ್ದು, ಒಬ್ಬ ಯುವಕ ತಲೆಗೆ ತೀವ್ರ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಇನ್ನು ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ಯುವಕನನ್ನು ರಾಜಾಜಿನಗರ ನಿವಾಸಿ ಅಲೆಕ್ಸ್ (25) ಎಂದು ಗುರುತಿಸಲಾಗಿದೆ. ನಗರದ ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ಗೋಪಾಲಗೌಡ ಜಂಕ್ಷನ್ ಬಳಿ ಘಟನೆ ನಡೆದಿದೆ. ಗೋಪಾಲಗೌಡ ಜಂಕ್ಷನ್ ಬಳಿ ಬೆಳಗಿನ ಜಾವ 3.30 ಕ್ಕೆ ಘಟನೆ ನಡೆದಿತ್ತು. ಅತಿವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಚಲಾವಣೆ ಮಾಡಿ ಡಿಕ್ಕಿಯಾಗಿದೆ ಎಂದು ಕಂಡುಬರುತ್ತಿದೆ. ಬೈಕನಲ್ಲಿ ಕುಂತಿದ್ದ ಹಿಂಬದಿ ಸಾವರ ಸತೀಶಗೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
Bengaluru: ರಸ್ತೆ ಬದಿ ಬೈಕ್ ನಿಲ್ಲಿಸುವ ವಾಹನ ಸವಾರರೇ ಎಚ್ಚರ: ನಂಬರ್ ಪ್ಲೇಟ್ ಸರಿಯಿಲ್ಲದಿದ್ದರೆ ಬೈಲ್ ಲಾಕ್
ಪ್ರಾರ್ಥನೆಗೆ ಹೊರಟಿದ್ದ ಯುವಕರು: ಕ್ರಿಸ್ ಮಸ್ ಹಿನ್ನಲೆಯಲ್ಲಿ ಇಬ್ಬರು ಯುವಕರು ಪ್ರಾರ್ಥನೆಗೆಂದು ಬೆಳ್ಳಂಬೆಳಗ್ಗೆ ಚರ್ಚ್‌ಗೆ ತೆರಳುತ್ತಿದ್ದರು. ರಾಜಾಜಿನಗರದಿಂದ ಶಿವಾಜಿನಗರದಲ್ಲಿರುವ ಸೆಂಟ್ ಪ್ಯಾಟ್ರಿಕಾ ಡೆಸಿಲಿಕಾ ಚರ್ಚ್ ಗೆ ತೆರಳುತ್ತಿದ್ದರು. ಈ ವೇಳೆ ಗೋಪಾಲಗೌಡ ಜಂಕ್ಷನ್‌ನಲ್ಲಿ ಈ ದುರ್ಘಟನೆ ನಡೆದಿದೆ. ಇನ್ನು ಪ್ರಾರ್ಥನೆಗೆಂದು ಮನೆಯಿಂದ ಹೊರಟ ಯುವಕ ಮಸಣ ಸೇರಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಹೊಸ ಬೈಕ್‌ಗೆ ಪೂಜೆ ಮಾಡಿಸಿದ್ದನು: ಇನ್ನು ಹೊಸ ಯಮಹಾ ಬೈಕ್ ಅನ್ನು ವಾಶಿಂಗ್ ಮಾಡಿಸಿ ಅದಕ್ಕೆ ಪೂಜೆಯನ್ನೂ ಮಾಡಿಸಿ ಹೂವಿನ ಹಾರವನ್ನು ಹಾಕಿ ಸಿಂಗಾರ ಮಾಡಿದ್ದನು. ಬೆಳಗ್ಗೆಯೇ ಪ್ರಾರ್ಥನೆ ಮಾಡಿ ಜೀವನದಲ್ಲಿ ದೊಡ್ಡ ಸಾಧನೆ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದನು. ಆದರೆ, ಜವರಾಯನ ಅಟ್ಟಹಾಸದಿಂದ ನಡು ರಸ್ತೆಯಲ್ಲಿಯೇ ಬೈಕ್ ಅಪಘಾತವಾಗಿ ಪ್ರಾಣಪಕ್ಷಿ ಹಾರಿಹೋಗಿದೆ. ಬೈಕ್ ಇನ್ನೂ ಗೋಪಾಲಗೌಡ ವೃತ್ತದ ಬಳಿಯೇ ನಿಲ್ಲಿಸಲಾಗಿದ್ದು, ಪೊಲೀಸರು ನಂತರ ಠಾಣೆಗೆ ತೆಗೆದುಕೊಂಡು ಹೋಗಲಿದ್ದಾರೆ.