ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿ ಇಂದು ನಡೆದಿದೆ. 

ಮಂಡ್ಯ(ಆ.06): ಫ್ರೆಂಡ್‌ಶಿಪ್‌ಗಾಗಿ ಪ್ರಾಣಕ್ಕೆ ಪ್ರಾಣ ಕೊಡೋ ಸ್ನೇಹಿತರನ್ನ ನಾವು, ನೀವು ಕಂಡಿದ್ದೇವೆ, ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಫ್ರೆಂಡ್‌ ತನ್ನ ಸ್ನೇಹಿತನನ್ನ ಕೊಲೆ ಮಾಡಿ ಸುದ್ದಿಯಾಗಿದ್ದಾನೆ. ಅದು ಕೂಡ ಸ್ನೇಹಿತರ ದಿನದಂದೇ ಘಟನೆ ನಡೆದಿದ್ದು ಮಾತ್ರ ವಿಪರ್ಯಾಸ. 

ಹೌದು, ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. 

ಕುಡಿದ ಮತ್ತಿನಲ್ಲಿ ಶಿವನ ಅವತಾರವಾಗಿ ಬದಲಾದ ಅಜ್ಜ, 85ರ ವೃದ್ಧೆಯನ್ನು ಛತ್ರಿಯಿಂದ ಬಡಿದು ಕೊಲೆ!

ಸ್ನೇಹಿತರ ದಿನದಂದು ಚಾಕು ಇರಿದು ಸ್ನೇಹಿತನನನ್ನ ಕೊಲೆ ಮಾಡಲಾಗಿದೆ. ಜಯಂತ್ ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದಾನೆ. ಜಯಂತ್‌ನನ್ನು ಸ್ನೇಹಿತ ಕೀರ್ತಿ ಎಂಬಾತನೇ ಹತ್ಯೆ ಮಾಡಿದ್ದಾನೆ. 

ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು ಮಾತ್ರ ದೊಡ್ಡ ದುರಂತವಾಗಿದೆ. ಚಾಕು ಇರಿದಿದ್ದರಿಂದ ಸ್ಥಳದಲ್ಲೇ ಜಯಂತ್ ಅಸುನೀಗಿದ್ದಾನೆ ಎಂದು ತಿಳಿದು ಬಂದಿದೆ. ಕೆರೆಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.