Asianet Suvarna News Asianet Suvarna News

ಕೋಲಾರ: ಶಾಲೆಯ ಆವರಣದಲ್ಲಿ ಯುವಕನ ಬರ್ಬರ ಹತ್ಯೆ, ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ವಿಡಿಯೋ ವೈರಲ್

ಸರ್ಕಾರಿ ಶಾಲೆಯ ಆವರಣದಲ್ಲೇ ಪ್ರರ್ಥಮ ಪಿಯುಸಿ ವಿದ್ಯಾರ್ಥಿ ಕಾರ್ತಿಕ್ ಸಿಂಗ್ ಎಂಬುವನನ್ನು 6 ಜನರು ಯುವಕರ ಗುಂಪು ಕೊಲೆ ಮಾಡಿ ತಲೆ ಮರೆಸಿಕೊಂಡಿದೆ. ಕೊಲೆಯಾದ ಬಾಲಕನ ಮೈಮೇಲೆ ಲಾಂಗು ಮಚ್ಚು ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ.

Young Man Killed in Kolar grg
Author
First Published Nov 5, 2023, 10:51 PM IST

ಕೋಲಾರ(ನ.05):  ಕೋಲಾರದಲ್ಲಿನ ಸರಣಿ ಕೊಲೆಗಳ ಆಘಾತದಿಂದ ಜನತೆ ಚೇತರಿಸಿಕೊಳ್ಳುವ ಮುನ್ನವೆ ನಗರದಲ್ಲಿ ಶುಕ್ರವಾರ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ 17 ವರ್ಷದ ಬಾಲಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ನಗರದ ಪೇಟೆಚಾಮನಹಳ್ಳಿ ಬಡಾವಣೆಯ ಸರ್ಕಾರಿ ಶಾಲೆಯ ಆವರಣದಲ್ಲೇ ಪ್ರರ್ಥಮ ಪಿಯುಸಿ ವಿದ್ಯಾರ್ಥಿ ಕಾರ್ತಿಕ್ ಸಿಂಗ್ ಎಂಬುವನನ್ನು 6 ಜನರು ಯುವಕರ ಗುಂಪು ಕೊಲೆ ಮಾಡಿ ತಲೆ ಮರೆಸಿಕೊಂಡಿದೆ. ಕೊಲೆಯಾದ ಬಾಲಕನ ಮೈಮೇಲೆ ಲಾಂಗು ಮಚ್ಚು ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ.

ಅಪ್ಪ ಮಗನನ್ನ ಕೊಂದರೆ.. ಇಲ್ಲಿ ಮಗ ತಾಯಿಯನ್ನ ಮುಗಿಸಿದ..!

ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಹಾಗೂ ತನಿಖಾ ತಂಡ ಭೇಟಿ ನೀಡಿ ಪರಿಶೀಲಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನ ಆರೋಪಿಗಳನ್ನ ನಗರ ಠಾಣೆ ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿಗಳಿಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ನಮ್ಮ ಮಗನಿಗಾದ ಅನ್ಯಾಯ ಮತ್ಯಾರಿಗೂ ಆಗಬಾರದು ಎಂದು ಮೃತನ ಅಜ್ಜ ರಾಮಸಿಂಗ್ ಹಾಗೂ ದೊಡ್ಡಮ್ಮ ಕಮಲಾಬಾಯಿ ಒತ್ತಾಯಿಸಿದ್ದಾರೆ.

ಕಾರ್ತೀಕ್ ಸಿಂಗ್‌ಗೆ ಚಿತ್ರ ಹಿಂಸೆ ನೀಡಿ ಬರ್ಬರ ಹತ್ಯೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಬಾಲಕನ ಬಟ್ಟೆ ಬಿಚ್ಚಿಸಿ ಹೊಡೆದು ಕಿರುಕುಳ ಕೊಟ್ಟಿದ್ದಾರೆ. ಈ ಹಿಂದೆ ದಿಲೀಪ್ ಆಲಿಯಾಸ್ ಶೈನ್ ಹಾಗೂ ಗ್ಯಾಂಗ್ ಬರ್ತಡೇ ಕಾರ್ಯಕ್ರಮಕ್ಕೆ ಬರಲಿಲ್ಲ ಅನ್ನೋ ಕಾರಣಕ್ಕೆ ಕಾರ್ತಿಕ್‌ ಸಿಂಗ್‌ಗೆ ಬಟ್ಟೆ ಬಿಚ್ಚಿಸಿ ಹೊಡೆದಿದ್ದರು.

ಇದೇ ಗ್ಯಾಂಗ್ ಶುಕ್ರವಾರ ಮನೆಯಲ್ಲಿದ್ದ ಕಾರ್ತಿಕ್‌ನನ್ನು ಕರೆಸಿಕೊಂಡು ಬಟ್ಟೆ ಬಿಚ್ಚಿಸಿ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿದ್ದಾರೆ. ಈ ಹಿಂದೆ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದಿಲೀಪ್‌ಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ. ಈತನ ಜತೆಗೆ ಇನ್ನೂ ಆರು ಮಂದಿ ಇರುವ ಶಂಕೆ ವ್ಯಕ್ತವಾಗಿದೆ. ಈತ ಪೊಲೀಸ್ ಮುರುಗನ್ ಎಂಬುವರ ಪುತ್ರ ಎನ್ನಲಾಗಿದೆ.

Follow Us:
Download App:
  • android
  • ios