Asianet Suvarna News Asianet Suvarna News

ಚಿಕ್ಕಮಗಳೂರು: ಕಾಂಗ್ರೆಸ್ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಗಲಾಟೆ, ಯುವಕನ ಕೊಲೆ

ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್‌ಪಿ ಉಮಾ ಪ್ರಶಾಂತ್. 

Young Man Killed in Chikkamagaluru grg
Author
First Published Jun 4, 2023, 8:27 AM IST

ಚಿಕ್ಕಮಗಳೂರು(ಜೂ.04):  ನೂತನ ಕಾಂಗ್ರೆಸ್ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಯುವಕನ ಕೊಲೆಯಾದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದಲ್ಲಿ ನಿನ್ನೆ(ಶನಿವಾರ) ನಡೆದಿದೆ. ವರುಣ್(28) ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದಾನೆ. 

ಜಿಲ್ಲೆಯ ತರೀಕೆರೆ ಶಾಸಕ ಶ್ರೀನಿವಾಸ್‌ ಅವರಿಗೆ ಅಭಿಮಾನಿಗಳು ಅಭಿನಂದನಾ ಸಮಾರಂಭವನ್ನ ಏರ್ಪಡಿಸಿದರು. ಈ ವೇಳೆ ಆರ್ಕೆಸ್ಟ್ರಾದಲ್ಲಿ ಹಾಡು ಬದಲಿಸುವ ವಿಚಾರದಲ್ಲಿ ಕಬಾಬ್ ಮೂರ್ತಿ ಹಾಗೂ ವರುಣ್ ಮಧ್ಯೆ ಗಲಾಟೆ ನಡೆದಿದೆ. 

ಅಕ್ರಮ ಸಂಬಂಧ ಗೊತ್ತಿದ್ರೂ ಸುಮ್ಮನಿದ್ದ ಗಂಡನನ್ನೇ ಕೊಲ್ಲಿಸಿದ ಪತ್ನಿ: ಜಾನಪದ ಕಲಾವಿದನ ಮಕ್ಕಳು ಅನಾಥ

ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಆರ್ಕೆಸ್ಟ್ರಾ ಮುಗಿಯುತ್ತಿದ್ದಂತೆ ಕಬಾಬ್ ಮೂರ್ತಿ ವರುಣ್‌ಗೆ ಡ್ರ್ಯಾಗರ್ ಹಾಕಿದ್ದಾನೆ. ವರುಣ್‌ ಹೊಟ್ಟೆ ಹಾಗೂ ಪಕ್ಕಕೆಗೆ ಚಾಕುವಿನಿಂದ ಇರಿದಿದ್ದಾನೆ ಕಬಾಬ್ ಮೂರ್ತಿ. ಕೂಡಲೇ ಶಿವಮೊಗ್ಗಕ್ಕೆ ಕೊಂಡೊಯ್ದರು ವರುಣ್ ಸಾವನ್ನಪ್ಪಿದ್ದಾನೆ. ಮಂಜು ಹಾಗೂ ಸಂಜು ಕೈ ಹಾಗೂ ಕಾಲಿಗೆ ಚಾಕು ಇರಿತವಾಗಿದೆ. 

ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಎಸ್‌ಪಿ ಉಮಾ ಪ್ರಶಾಂತ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Follow Us:
Download App:
  • android
  • ios