ಕೋಲಾರ: ದಯವಿಟ್ಟು ಯಾರು ಲವ್ ಮಾಡಬೇಡಿ ಅಂತ ಸ್ಟೇಟಸ್ ಹಾಕಿ ಆತ್ಮಹತ್ಯೆ
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಹೈದಲಾಪುರ ಗ್ರಾಮದಲ್ಲಿ ನಡೆದ ಘಟನೆ
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ(ಅ.06): ಪ್ರೀತಿ ಮಾಯೆ ಹುಷಾರು, ಕಣ್ಣೀರು ಮಾರೋ ಬಜಾರು ಅನ್ನೋ ದುನಿಯಾ ಸಿನಿಮಾದ ಹಾಡಿನ ಸಾಲುಗಳು ಒಮೊಮ್ಮೆ ನಿಜ ಆಗಿಬಿಡುತ್ತೆ. ಯಾಕಂದ್ರೆ ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ಲವ್ ಮಾಡೋದು, ಬ್ರೇಕಪ್ ಮಾಡಿಕೊಳ್ಳೋದು ಸಹಜ ಆಗಿಬಿಟ್ಟಿದೆ. ಬ್ರೇಕಪ್ ಆದ್ರು ಸಹ ಕೆಲ ಯುವಕ ಯುವತಿಯರಂತೂ ತಮ್ಮ ಪೋಷಕರ ಬಗ್ಗೆ ಯೋಚನೆ ಸಹ ಮಾಡದೇ ಊಟ ನಿದ್ದೆ ಬಿಟ್ಟು ಸಾಯೋವರೆಗೂ ಯೋಚನೆ ಮಾಡ್ತಾರೆ.ಕೆಲವರು ಆತ್ಮಹತ್ಯೆ ಒಂದೇ ದಾರಿ ಅಂತ ತೀರ್ಮಾನ ಮಾಡ್ಕೊಂಡು ಸತ್ತೇ ಹೋಗ್ತಾರೆ. ಇದಕ್ಕೆ ತಾಜಾ ಉದಾಹರಣೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಹೈದಲಾಪುರ ಗ್ರಾಮದಲ್ಲಿ ನಡೆದಿರುವ ಈ ಯುವಕನ ಸಾವು.
ಹೌದು, ಪ್ರಾಣಕ್ಕೆ ಪ್ರಾಣ ಕೊಟ್ಟು ಪ್ರೀತಿಸುತ್ತಿದ್ದ ತನ್ನ ಪ್ರೇಯಸಿ ಕೈಕೊಟ್ಟಳು ಅನ್ನೋ ಒಂದೇ ಕಾರಣಕ್ಕೆ ಹೇಮಂತರೆಡ್ಡಿ ಅನ್ನೋ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಹೈದಲಾಪುರ ಗ್ರಾಮದಲ್ಲೇ ಹೇಮಂತರೆಡ್ಡಿ ಆತ್ಮಹತ್ಯೆಗೆ ಶರಣಾಗಿದ್ದು, ತಾನು ಸಾಯುವ ಮುನ್ನ ನನ್ನ ಪ್ರೇಯಸಿ ಕೈಕೊಟ್ಟಿದ್ದಾಳೆ ಅಂತ ವಾಟ್ಸಪ್ ಸ್ಟೇಟಸ್ ನಲ್ಲಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಿರುತೆರೆ ನಟ ಲೋಕೇಶ್ ರಾಜೇಂದ್ರ ಆತ್ಮಹತ್ಯೆ; ದಾಂಪತ್ಯದಲ್ಲಿ ಬಿರುಕು?
ನಾನು ಯಾರಿಗೂ ಹೆದರಿ ಸಾಯುತ್ತಿಲ್ಲ ನನಗೆ ನನ್ನ ಪ್ರೇಯಸಿ ಸಿಕ್ಕಿಲ್ಲ ಅಂತ ಸಾಯುತ್ತಿದ್ದೇನೆ,. ದಯವಿಟ್ಟು ಯಾರು ಲವ್ ಮಾಡಬೇಡಿ ಮಾಡಿದ್ರೆ ನನ್ನ ಲೈಫ್ ತರ ಆಗುತ್ತೆ, sorry ನಿನ್ನ ಲೈಫ್ ನಲ್ಲಿ ಬಂದಿದಕ್ಕೆ ನೀನು ಎಲ್ಲೇ ಇರು ಹೇಗೆ ಇರು ಚೆನ್ನಾಗಿರು ಎಂದು ಆತ್ಮಹತ್ಯೆ ಮಾಡಿಕೊಂಡಿರುವ ಹೇಮಂತರೆಡ್ಡಿ ತನ್ನ ಸ್ಟೇಟಸ್ ಗೆ ಹಾಕಿಕೊಂಡಿದ್ದಾನೆ. ಇನ್ನು ಮಗನ ಸಾವಿನಿಂದ ಪೋಷಕರ ಆಕ್ರೋಶ ಮುಗಿಲುಮುಟ್ಟಿದ್ದು ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.