ಹುಬ್ಬಳ್ಳಿ(ಫೆ.11): ಯುವತಿಯ ಜತೆ ಸಲುಗೆಯಿಂದ ಇದ್ದುಕೊಂಡೇ ಆಕೆಯ ಅಶ್ಲೀಲ ಚಿತ್ರ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಆರೋಪಿಯನ್ನು ಹು-ಧಾ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಕಲಬುರ್ಗಿ ಜಿಲ್ಲೆಯ ಸಚಿನ್‌ ಕಾರಣಿಕ (26) ಬಂಧಿತ ಆರೋಪಿ. ಸಚಿನ್‌ ಈ ಮೊದಲು ಹುಬ್ಬಳ್ಳಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಈ ವೇಳೆ ಅದೇ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವತಿ ಪರಿಚಯವಾಗಿದ್ದಳು. ಅಲ್ಲದೇ, ಆಕೆಯನ್ನು ಪ್ರೀತಿಸುತ್ತಿದ್ದನು. ಇದೇ ಸಲುಗೆಯಿಂದ ಮುಂದುವರಿದ ಯುವತಿ ಆತನೊಂದಿಗೆ ವಿಡಿಯೋ ಕಾಲ್‌ನಲ್ಲಿ ಖಾಸಗಿ ಚಿತ್ರಗಳನ್ನು ಹಂಚಿಕೊಂಡಿದ್ದಳು.

ಅಶ್ಲೀಲ ವೆಬ್‌ಸೈಟ್‌ಗಳಿಗೆ ವಿದ್ಯಾರ್ಥಿನಿಯರ ಫೋಟೋ ಅಪ್‌ಲೋಡ್‌: ಇಬ್ಬರ ಬಂಧನ

ಯುವತಿ ತಾನು ಕರೆದಲ್ಲಿ ಬರುತ್ತಿಲ್ಲ ಎಂಬ ಕಾರಣಕ್ಕೆ ಆಕೆಯ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣ ಹಾಗೂ ಫ್ರೆಂಡ್ಸ್‌ ಗ್ರೂಪ್‌ಗೆ ಹರಿಬಿಟ್ಟಿದ್ದಾನೆ. ಈ ಬಗ್ಗೆ ಯುವತಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಇದನ್ನು ಗಂಭೀರವಾಗಿ ಪರಿಗಣಿಸಿದ ಸೈಬರ್‌ ಕ್ರೈಂ ಠಾಣೆ ಪಿಐ ಎಸ್‌.ಬಿ. ಮಾಳಗೊಂಡ ನೇತೃತ್ವದ ತಂಡ ಆತನನ್ನು ಬೆಂಗಳೂರಿನಲ್ಲಿ ಬಂಧಿಸಿ ಕರೆತಂದಿದ್ದಾರೆ.