ಬಾಗಲಕೋಟೆ: ಯುವತಿ ಹತ್ಯೆಗೆ ಕಾರಣವಾಯ್ತಾ ಲವ್ ಜಿಹಾದ್?
ಘಟಪ್ರಭಾ ಸೇತುವೆ ಬಳಿ ಯುತಿಯ ಶವ ಪತ್ತೆ| ನಾಪತ್ತೆಯಾಗಿದ್ದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ಯುವತಿ| ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆಂಬ ಶಂಕೆ ಮೇಲೆ ಅನ್ಯ ಕೋಮಿನ ಭಗ್ನ ಪ್ರೇಮಿಯೊಬ್ಬ ಯುವತಿ ಕತ್ತು ಹಿಸುಕಿ ಹತ್ಯೆ|
ಬಾಗಲಕೋಟೆ(ಫೆ.18): ಫೆ.13ರಿಂದ ನಾಪತ್ತೆಯಾಗಿದ್ದ ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ಯುವತಿಯ ಶವ ಕಲಾದಗಿಯ ಕಾತರಗಿ ಬಳಿಯ ಘಟಪ್ರಭಾ ಸೇತುವೆ ಬಳಿ ಪತ್ತೆಯಾಗಿದ್ದು, ಲವ್ ಜಿಹಾದ್ ಆರೋಪ ಕೇಳಿಬಂದಿದೆ.
ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆಂಬ ಶಂಕೆ ಮೇಲೆ ಅನ್ಯ ಕೋಮಿನ ಭಗ್ನ ಪ್ರೇಮಿಯೊಬ್ಬ ಯುವತಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿ ಘಟಪ್ರಭಾ ನದಿಗೆ ಎಸೆದಿದ್ದಾನೆ ಎಂದು ದೂರಲಾಗಿದೆ. ವಜ್ರಮಟ್ಟಿ ಗ್ರಾಮದ ಜ್ಯೋತಿ ಬಾಗವ್ವಗೋಳ (22) ಹತ್ಯೆಯಾದ ಯುವತಿ.
ಯು.ಪಿ ಲವ್ ಜಿಹಾದ್ ಕೇಸಲ್ಲಿ ಕರ್ನಾಟಕದ ಮುಸ್ಲಿಂ ವ್ಯಕ್ತಿ ಬಂಧನ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ತಾಲೂಕಿನ ಕಲಾದಗಿಯ ಹನೀಫ್ ಅಬ್ದುಲ್ ರಜಾಕ್ ಬೀಳಗಿ(22) ಎಂಬ ಯುವಕನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಯುವತಿಯ ಕುಟುಂಬಸ್ಥರು ಇದೊಂದು ಲವ್ ಜಿಹಾದ್ ಎಂದು ಆರೋಪಿಸಿದ್ದಾರೆ. ಇವರಿಬ್ಬರ ಪ್ರೀತಿ ವಿಚಾರ ಯುವತಿಯ ಕುಟುಂಬಸ್ಥರಿಗೆ ಗೊತ್ತಿತ್ತು. ಧರ್ಮ ಬೇರೆ ಬೇರೆಯಾದ ಕಾರಣ ಹನೀಫ್‌ಗೆ ಯುವತಿ ಕುಟುಂದವರು ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ.