* ಮದುವೆಯಾಗಲು ಓಡಿ ಹೋಗಿದ್ದ ಜೋಡಿಗೆ  ವಿಚಿತ್ರ ಶಿಕ್ಷೆ* ಕುತ್ತಿಗೆಗೆ ಟೈರ್ ಹಾಕಿಸಿ ಊರಿನಲ್ಲಿ ಮೆರವಣಿಗೆ* ಮಧ್ಯಪ್ರದೇಶದಿಂದ ಘಟನೆ ವರದಿ* ಊರಿನವರ ಮೇಲೆ  ಪ್ರಕರಣ ದಾಖಲಿಸಿಕೊಂಡ ಪೊಲೀಸರು 

ಭೋಪಾಲ್(ಸೆ. 23) ಊರು ಬಿಟ್ಟು ಓಡಿ ಹೋಗಿದ್ದ ಹುಡುಗ ಮತ್ತು ಹುಡುಗಿಯನ್ನು ಗ್ರಾಮಸ್ಥರು ಊರು ತುಂಬಾ ಮೆರವಣಿಗೆ ಮಾಡಿದ್ದಾರೆ. ಅವರ ಕುತ್ತಿಗೆಗೆ ಟಯರ್ ಹಾಕಿ ಪರೇಡ್ ನಡೆಸಿದ್ದಾರೆ. 

ಮಧ್ಯಪ್ರದೇಶದ ಧರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಜೋಡಿ ವಿರುದ್ಧ ಬಹಿಷ್ಕಾರವನ್ನು ಹಾಕಿದ್ದಾರೆ.

ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಗ್ರಾಮಸ್ಥರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಧರ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಪ್ರಕಾರ, ದೇವೇಂದರ್ ಪಾಟಿದಾರ್ ಮಾಹಿತಿ ಕಲೆ ಹಾಕಿದ್ದಾರೆ.

ಸೀರೆಯುಟ್ಟವರಿಗೆ ರೆಸ್ಟೋರೆಂಟ್‌ಗೆ ನೋ ಎಂಟ್ರಿ!

ಪ್ರೀತಿಸಿದ್ದ ಜೋಡಿ ಮದುವೆಯಾಗುವ ಕಾರಣದಿಂದ ಊರು ಬಿಟ್ಟು ತೆರಳಿದ್ದರು. ನಂತರ ರಾಜಸ್ಥಾನಕ್ಕೆ ತೆರಳಿ ವಿವಾಹವಾದರು. ಅಲ್ಲಿಯೂ ಇವರ ಗುರುತನ್ನು ಯಾರೋ ಪತ್ತೆ ಮಾಡಿದ್ದಾರೆ.. ಆಗಿದ್ದು ಆಗಲಿ ಎಂದು ಮತ್ತೆ ಊರಿಗೆ ಬಂದಿದ್ದಾರೆ. ಇವರು ಬಂದ ನಂತರ ಯುವತಿಯ ಕುಟುಂಬದವರು ಹಲ್ಳಿಯ ಪಂಚಾಯಿತಿಗೆ ದೂರು ಕೊಟ್ಟಿದ್ದಾರೆ.

ಹಳ್ಳಿ ಪಂಚಾಯಿತಿ ವಿಚಾರಣೆ ನಡೆಸಿ ಅಸಂಬದ್ಧ ತೀರ್ಪನ್ನು ನೀಡಿದೆ. ಪಂಚಾಯಿತಿಯ ಆದೇಶದ ಅನ್ವಯ ಜೋಡಿಯನ್ನು ಪರೇಡ್ ಮಾಡಲಾಗಿದೆ. ಇವರು ಓಡಿ ಹೋಗಲು ನೆರವು ನೀಡಿದ್ದ ಬಾಲಕಿಯೊಬ್ಬಳನ್ನು ಹಿಂಸಿಸಲಾಗಿದೆ.