Belagavi: ಕಟ್ಟಡ ಕಾಮಗಾರಿ ವೇಳೆ ಪಕ್ಕದ ಮನೆಗೋಡೆ ಕುಸಿದು ಕಾರ್ಮಿಕ ದುರ್ಮರಣ, ಮೂವರಿಗೆ ಗಾಯ!
• ನಿರಂತರ ಮಳೆಯಿಂದ ಶಿಥಿಲಗೊಂಡಿದ್ದ ಗೋಡೆ
• ಅವೈಜ್ಞಾನಿಕ ಕಾಮಗಾರಿಯಿಂದ ದುರ್ಘಟನೆ ಆರೋಪ
• ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಕಾರ್ಪೊರೇಟರ್ ಆಕ್ರೋಶ
ಬೆಳಗಾವಿ (ಏ.29): ಕಟ್ಟಡ ಕಾಮಗಾರಿ ವೇಳೆ ಪಕ್ಕದ ಮನೆ ಗೋಡೆ ಕುಸಿದು ಕಾರ್ಮಿಕ ದುರ್ಮರಣಕ್ಕೀಡಾದ ಘಟನೆ ಬೆಳಗಾವಿ ನಗರದ ಮಾರುತಿ ಬೀದಿಯ ಮಹಾದೇವ ದೇವಸ್ಥಾನ ಹಿಂಬದಿ ನಡೆದಿದೆ. ಮಣ್ಣಿನಡಿ ಸಿಲುಕಿದ್ದ ಮೂವರು ಕಾರ್ಮಿಕರನ್ನು ಅಗ್ನಿಶಾಮಕ ಸಿಬ್ಬಂದಿ, SDRF ಸಿಬ್ಬಂದಿ ರಕ್ಷಿಸಿ ತಕ್ಷಣ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದ ವೇಳೆ 60 ವರ್ಷದ ಕಲ್ಲಪ್ಪ ಕರಿಯಪ್ಪ ಮಾದರ ಸ್ಥಳದಲ್ಲೇ ಸಾವನ್ನಪ್ಪಿದ್ರೆ ಕಾರ್ಮಿಕರಾದ ಅರ್ಜುನ ಮಾದರ ಆತನ ಮಕ್ಕಳಾದ ಮಹೇಂದ್ರ ಮಾದರ, ನಾಗರಾಜ ಮಾದರಗೆ ಗಾಯಗಳಾಗಿದ್ದು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಸ್ಥಳಕ್ಕೆ ಖಡೇಬಜಾರ್ ವಿಭಾಗದ ಎಸಿಪಿ ಚಂದ್ರಪ್ಪ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Gokak Murder Case: 9 ತಿಂಗಳ ಹಿಂದಿನ ಕೊಲೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್..!
ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಬಿಜೆಪಿ ಕಾರ್ಪೊರೇಟರ್ ಆಕ್ರೋಶ: ಇನ್ನು ಅವೈಜ್ಞಾನಿಕವಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಮಾಡುತ್ತಿರುವುದರಿಂದಲೇ ಘಟನೆ ನಡೆದಿದೆ ಎಂದು ಬೆಳಗಾವಿ ಮಹಾನಗರ ಪಾಲಿಕೆ ವಾರ್ಡ್ ನಂಬರ್ 4 ರ ಬಿಜೆಪಿ ಸದಸ್ಯ ಜಯತೀರ್ಥ ಸವದತ್ತಿ ಆರೋಪಿಸಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 'ಪಕ್ಕದಲ್ಲಿ ಹಳೆಯ ಮನೆ ಇದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಲಾಗಿದೆ.
ಮತ್ತೊಬ್ಬ ಬೆಳಗಾವಿ ಮೂಲದ ಗುತ್ತಿಗೆದಾರರನ ಮೇಲ್ವಿಚಾರಕ ಲಾಡ್ಜ್ ನಲ್ಲಿ ಆತ್ಮಹತ್ಯೆ
ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಿದ ಅಧಿಕಾರಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣ.ಕಳೆದ ಕೆಲ ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಮಳೆಯಿಂದ ಹಳೆಯ ಮನೆಯ ಗೋಡೆಗಳು ಶಿಥಿಲಗೊಂಡಿವೆ. ಕಳೆದ ಬಾರಿಯೂ ನನ್ನ ವಾರ್ಡ್‌ನಲ್ಲಿಯೇ ಇದೇ ಮಾದರಿ ಘಟನೆ ಆಗಿತ್ತು. ರಾಮಲಿಂಗಖಿಂಡ ಗಲ್ಲಿಯಲ್ಲಿ ಗೋಡೆ ಕುಸಿದು ಓರ್ವ ಸಾವನ್ನಪ್ಪಿದ್ದ. ಹೀಗಾಗಿ ಕಟ್ಟಡ ಕಟ್ಟುವಾಗ ಮುಂಜಾಗ್ರತಾ ಕ್ರಮ ವಹಿಸಬೇಕು.ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡುವಾಗ ಅಧಿಕಾರಿಗಳು ಎಚ್ಚರಿಕೆ ನೀಡಬೇಕು' ಎಂದು ಆಗ್ರಹಿಸಿದ್ದಾರೆ.