Asianet Suvarna News Asianet Suvarna News

ಮನೆಯಲ್ಲೇ ಕುಳಿತು ಆದಾಯ ಗಳಿಸಿ, ಬಣ್ಣದ ಮಾತಿಗೆ ಮರುಳಾಗಿ 20 ಲಕ್ಷ ಕಳೆದಕೊಂಡ ಯುವಕ!

ವರ್ಕ್ ಫ್ರಮ್ ಹೋಮ್, ದಿನಕ್ಕೆ ಒಂದೆರೆಡು ಗಂಟೆ ಕೆಲಸ. ಜಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮಾಡಿ, ರೇಟಿಂಗ್ ಹಾಕಿ ಹಣ ಗಳಿಸಿ. ಈ ವ್ಯಾಟ್ಸ್ಆ್ಯಪ್ ಸಂದೇಶಕ್ಕೆ ಮರುಳಾದ ಯುವಕ ಬರೋಬ್ಬರಿ 20 ಲಕ್ಷ ರೂಪಾಯಿ ಕಳದುಕೊಂಡಿದ್ದಾನೆ.
 

Work From Home Job offer Noida Man duped rs 20 lakh through WhatsApp receives death threats ckm
Author
First Published Jun 19, 2024, 8:36 PM IST

ನೋಯ್ಡಾ(ಜೂ.19) ಹೊಟೆಲ್‌ಗಳಿಗೆ ಗೂಗಲ್‌ನಲ್ಲಿ ರೇಟಿಂಗ್ ಹಾಕಿದರೆ ಸಾಕು. ಕೆಲಸ ಇಷ್ಟೇ, ದಿನಕ್ಕೆ ಹೆಚ್ಟೆಂದರೆ ಒಂದು ಗಂಟೆ ಮಾತ್ರ. ಈ ಸಂದೇಶ ನೋಡಿ ಮರುಳಾದ ಯುವಕ ಮನೆಯಿಂದಲೇ ಕೆಲಸ ಮಾಡುವ ಕನಸು ಕಂಡಿದ್ದಾನೆ. ಕುಳಿತಲ್ಲೇ ಆದಾಯಗಳಿಸಲು ಸಜ್ಜಾಗಿದ್ದಾನೆ. ವ್ಯಾಟ್ಸ್ಆ್ಯಪ್ ಮೂಲಕ ಬಂದ ಈ ಸಂದೇಶಕ್ಕೆ ಒಕೆ ಎಂದಿದ್ದಾನೆ. ಆದರೆ ಅಲ್ಲಿಂದಲೇ ಸಂಕಷ್ಟ ಶುರುವಾಗಿದೆ. ತನ್ನಲ್ಲಿದ್ದ ಎಲ್ಲಾ 20 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ಇದೀಗ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ, ಹೇಗಾದರು ಮಾಡಿ ನಾನು ಸಂಪಾದಿಸಿದ ಹಣ ವಾಪಸ್ ಕೊಡಿಸುವಂತೆ ಗೋಗೆರದ ಘಟನೆ ನೋಯ್ಡಾದಲ್ಲಿ ನಡೆದಿದೆ.

ಗ್ರೇಟರ್ ನೋಯ್ಡಾದ ಪಾಕೆಟ್ 6, ಸೆಕ್ಟರ್ ಚಿ1ರ ನಿವಾಸಿ ಸಂದೀಪ್ ಕುಮಾರ್‌ಗೆ ವ್ಯಾಟ್ಸ್ಆ್ಯಪ್ ಮೂಲಕ ಸಂದೇಶ ಒಂದು ಬಂದಿದೆ. ಮನೆಯಿಂದ ಕೆಲಸ, ಕುಳಿತಲ್ಲೇ ಆದಾಯ ಅನ್ನೋ ಸಂದೇಶ ಹಾಗೂ ಒಂದು ಲಿಂಕ್ ನೀಡಲಾಗಿತ್ತು. ಇದರ ಕೆಳಗೆ ಗೂಗಲ್ ಮ್ಯಾಪ್‌ಗಳಲ್ಲಿ ಹೊಟೆಲ್‌ಗಳಿಗೆ ರೇಟಿಂಗ್ ಹಾಕಿದರೆ ನಿಮ್ಮ ಕೆಲಸ ಮುಗಿತು. ಕೈತುಂಬ ಸಂಬಂಳ ಎಣಿಸಿ ಬಂದು ಬರೆಯಲಾಗಿತ್ತು.

ತಮ್ಮನ ಮದುವೆಗೆ ಯತ್ನಿಸಿದ ಅಕ್ಕನಿಗೆ ವಿವಾಹ ಆ್ಯಪ್‌ನಲ್ಲಿ 45000 ವಂಚನೆ

ಸಾಕ್ಷಾತ್ ಗೂಗಲ್ ತನ್ನ ಬಳಿ ಬಂದು ಕೆಲಸ ಆಫರ್ ಮಾಡುತ್ತಿದೆ ಎಂದು ಭಾವಿಸಿದ ಸಂದೀಪ್ ಕುಮಾರ್ ನೇರವಾಗಿ ಲಿಂಕ್ ಕ್ಲಿಕ್ ಮಾಡಿದ್ದಾನೆ. ಅಗತ್ಯ ದಾಖಲೆಗಳನ್ನು ತುಂಬಿದ್ದಾನೆ. ಬಳಿಕ ಸಂದೀಪ್ ಕುಮಾರ್‌ನನ್ನ ವಂಚಕರು ವ್ಯಾಟ್ಸ್ಆ್ಯಪ್ ಗ್ರೂಪ್‌ಗೆ ಸೇರಿಸಿದ್ದಾರೆ. ಈ ಗ್ರೂಪ್‌ನಲ್ಲಿ ಇದೇ ರೀತಿ ಮೋಸ ಅರಿಯದೆ ಲಿಂಕ್ ಕ್ಲಿಕ್ ಮಾಡಿದ 100ಕ್ಕೂ ಹೆಚ್ಚು ಜನರಿದ್ದರು.

ಎಲ್ಲರಿಗೂ ಒಂದೇ ಕೆಲಸ ಹೊಟೆಲ್‌ಗಳಿಗೆ ರೇಟಿಂಗ್ ನೀಡುವುದು. ಕೆಲಸ ಶುರುವಾಯಿತು. ಇದರ ನಡುವೆ 50 ಸಾವಿರ ರೂಪಾಯಿ ಬಂಡವಾಳ ಹಾಕಬೇಕು. ಗ್ಯಾರೆಂಟಿ ಕಾರಣಕ್ಕೆ ಕಡ್ಡಾಯ ಎಂದು ಸೂಚಿಸಲಾಗಿತ್ತು. ಯುವಕ 50,000 ರೂಪಾಯಿ ಹಾಕಿದ್ದಾನೆ. ಬಳಿಕ ನಿಮ್ಮ ವೇತನ ಬಂದಿದೆ. ಹೆಚ್ಚು ಕೆಲಸ ಮಾಡಿದ್ದೀರಿ. ಹೆಚ್ಚು ಸಂಬಂಳ ಬಂದಿದೆ. ತೆರಿಗೆ ಹಣ ಪಾವತಿಸಿದರೆ ನಿಮ್ಮ ಖಾತೆಗೆ ವೇತನ ಜಮೆ ಆಗಲಿದೆ ಎಂದು ಸೂಚಿಸಿದ್ದಾರೆ. ಒಂದು ಬಾರಿ 5 ಲಕ್ಷ, ಮತ್ತೊಮ್ಮೆ ಲಕ್ಷ ಲಕ್ಷ ರೂಪಾಯಿ ಹಾಕಿದ್ದಾನೆ. ಈತನ ಬಳಿ ಇದ್ದ 20 ಲಕ್ಷ ರೂಪಾಯಿ ಖಾಲಿ ಆಗುವ ವರೆಗೂ ಹಾಕಿದ್ದಾನೆ. ಬಳಿಕ ತಾನು ಮೋಸ ಹೋಗಿದ್ದೇನೆ ಎಂದು ತಿಳಿದಿದೆ.

ಪ್ರಶ್ನಿಸಿದಾಗ ಬೆದರಿಕೆ ಕರೆಗಳು ಬಂದಿದೆ. ಖಾತೆ ಫ್ರೀಜ್ ಮಾಡಿ, ಹಲ್ಲೆ ನಡೆಸುವುದಾಗಿ ಬೆದರಿಸಿದ್ದಾರೆ. ಇತ್ತ ಸಂದೀಪ್ ಕುಮಾರ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ. 

ನಿವೃತ್ತಿ ಹಣ ಬರುತ್ತಿದ್ದಂತೆ ನಿಮಗೂ ಬರಬಹುದು ಈ ಕಾಲ್; ಹುಷಾರ್!

Latest Videos
Follow Us:
Download App:
  • android
  • ios