Asianet Suvarna News Asianet Suvarna News

ನಿವೃತ್ತಿ ಹಣ ಬರುತ್ತಿದ್ದಂತೆ ನಿಮಗೂ ಬರಬಹುದು ಈ ಕಾಲ್; ಹುಷಾರ್!

ನಿವೃತ್ತ ಹಿರಿಯ ಅಧಿಕಾರಿಯಿಂದ 85 ಲಕ್ಷ ರೂಪಾಯಿ ಹಣವನ್ನು ದೋಚಿದೆ. ವಂಚಕ ಗ್ಯಾಂಗ್‌ ಅಸ್ತಿತ್ವದಲ್ಲಿಯೇ ಇಲ್ಲದ ಗಾರ್ಮೆಂಟ್‌ ಹೆಸರಿನಲ್ಲಿ ಚೆಕ್ ಮೂಲಕ ಹಣ ವರ್ಗಾಯಿಸಿಕೊಂಡಿತ್ತು.

hyderabad Man cheated 85 Lakh by fake cbi gang mrq
Author
First Published Jun 10, 2024, 11:04 AM IST

ಹೈದರಾಬಾದ್: ಸಿಬಿಐ ಅಧಿಕಾರಿಗಳಂತೆ ನಟಿಸಿದ ಗ್ಯಾಂಗ್ ಹೈದರಾಬಾದ್ ಮೂಲದ ಬಹುರಾಷ್ಟ್ರೀಯ ಸಂಸ್ಥೆಯ ನಿವೃತ್ತ ಹಿರಿಯ ಅಧಿಕಾರಿಯಿಂದ 85 ಲಕ್ಷ ರೂಪಾಯಿ ಹಣವನ್ನು ದೋಚಿದೆ. ವಂಚಕ ಗ್ಯಾಂಗ್‌ ಅಸ್ತಿತ್ವದಲ್ಲಿಯೇ ಇಲ್ಲದ ಗಾರ್ಮೆಂಟ್‌ ಹೆಸರಿನಲ್ಲಿ ಚೆಕ್ ಮೂಲಕ ಹಣ ವರ್ಗಾಯಿಸಿಕೊಂಡಿತ್ತು. ನಂತರ ಈ ಹಣ ದೇಶದ 105 ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆಯಾಗಿರೋದು ಕಂಡು ಬಂದಿದೆ. ನಿವೃತ್ತ ಅಧಿಕಾರಿ ಮಗನಿಗೆ ವಿದೇಶದಲ್ಲಿ ಶಿಕ್ಷಣಕ್ಕಾಗಿ 85 ಲಕ್ಷ ರೂಪಾಯಿ ಹಣವನ್ನು ಮೀಸಲಿರಿಸಿದ್ದರು. ಇದೀಗ ಹಣ ಕಳೆದುಕೊಂಡು ಆಘಾತಕ್ಕೊಳಗಾಗಿದ್ದು, ಈ ಸಂಬಂಧ ದೂರು ದಾಖಲಿಸಿದ್ದಾರೆ. ವಂಚನೆಗೆ ಒಳಗಾಗಿರುವ 57 ವರ್ಷದ ವ್ಯಕ್ತಿ,  ಜರ್ಮನಿಯ ಪ್ರಧಾನ ಕಚೇರಿಯ ಫಾರ್ಮಾ ಸಂಸ್ಥೆಯ ಸಹಾಯಕ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡಿ ನಿವೃತ್ತರಾಗಿದ್ದರು. ಈ ಸಂಸ್ಥೆ ಭಾರತದ ಪ್ರಮುಖ ನಗರಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. 

ಗ್ಯಾಂಗ್‌ ತಮ್ಮನ್ನು ಪರಿಚಯಿಸಿಕೊಂಡಿದ್ದು ಹೇಗೆ?

ನನಗೆ ಮೇ 2ರಂದು ನಿವೃತ್ತಿ ಹಣ ಬಂದಿತ್ತು. ಮೇ 17ರಂದು ಮಗನ ವೀಸಾ ಅಪಾಯಿಂಟ್‌ಮೆಂಟ್ ಇತ್ತು. ಆದ್ರೆ ಮೇ 14ರಂದು ನಾನು ಮೋಸ ಹೋಗಿ ಜೀವಮಾನವೆಲ್ಲಾ ದುಡಿದ ಹಣವನ್ನು ಕಳೆದುಕೊಂಡಿದ್ದೇನೆ. ಗ್ಯಾಂಗ್‌ ಸದಸ್ಯರು ಎರಡು ದಿನ ನನ್ನನ್ನು ಸ್ಕೈಪ್‌ ಮೂಲಕ ವಿಚಾರಣೆ ನಡೆಸಿದ್ದರು. ಗ್ಯಾಂಗ್ ಸದಸ್ಯರು ತಮ್ಮನ್ನು ಸಿಬಿಐ, ಕಸ್ಟಮ್ಸ್, ನಾರ್ಕೋಟಿಕ್ಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದರು ಎಂದು ಮೋಸಕ್ಕೊಳಗಾದ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಪಂಚಾಯ್ತಿ ಟು ಲೋಕಸಭೆ; ಹಂತ ಹಂತವಾಗಿ ರಾಜಕೀಯದಲ್ಲಿ ಬೆಳೆದ ರಕ್ಷಾ ಕುರಿತ ಇಂಟರೆಸ್ಟಿಂಗ್ ಮಾಹಿತಿ

ಬ್ಯಾಂಕ್‌ನಿಂದಲೂ ದೂರು ದಾಖಲು

ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಹಣ ಹಿಂದಿರುಗಿಸೋದಾಗಿಮ ಗ್ಯಾಂಗ್ ಹೇಳಿಕೊಂಡಿತ್ತು. ಗ್ಯಾಂಗ್ ಸದಸ್ಯರು ದೆಹಲಿಯ ಉತ್ತಮ್ ನಗರದ ಹೆಚ್‌ಡಿಎಫ್‌ಸಿ ಬ್ಯಾಂಕ್ ಶಾಖೆಯ 'ರಾಣಾ ಗಾರ್ಮೆಂಟ್ಸ್'ಗೆ ಚೆಕ್ ಬರೆಯುವಂತೆ ಸೂಚನೆ ನೀಡಿದ್ದರು ಎಂದು ಹೇಳಿದ್ದಾರೆ. ಹಣ ವರ್ಗಾವಣೆ ಬಳಿಕ ಗ್ಯಾಂಗ್ ಪರಾರಿಯಾಗಿದೆ. ಇತ್ತ ಉತ್ತಮ್ ನಗರದ ಹೆಚ್‌ಡಿಎಫ್‌ಸಿ ಬ್ಯಾಂಕ್ ಈ ಘಟನೆ ಸಂಬಂಧ ದೂರು ದಾಖಲಿಸಿದೆ. ಈ ದೂರನ್ನು ವಿಶಾಖಪಟ್ಟಣಂ ಕ್ರೈಂ ಬ್ರ್ಯಾಂಚ್‌ಗೆ ವರ್ಗಾಯಿಸಲಾಗಿದೆ. ಈ ಪ್ರಕರಣದ ಕುರಿತು ಕರಾವಳಿ ಭಾಗದ ಪೊಲೀಸರಿಗೆ ಕೆಲವು ಮಹತ್ವದ ಸುಳಿವು ಸಿಕ್ಕಿವೆ ಎಂದು ವರದಿಯಾಗಿದೆ. 

ಕಾರ್‌ಗಳ ಮುಖಾಮುಖಿ ಡಿಕ್ಕಿ; ನಾಲ್ವರು ಯುಟ್ಯೂಬರ್‌ಗಳ ದುರ್ಮರಣ

ದೂರಿನಲ್ಲಿ ದಾಖಲಾಗಿದ್ದು ಏನು?

ಈ ವಂಚನೆ ಪ್ರಕರಣದಲ್ಲಿ ಕೆಲ ಬ್ಯಾಂಕ್ ಅಧಿಕಾರಿಗಳು ಬ್ಯಾಂಕ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಸಂತ್ರಸ್ತ ವ್ಯಕ್ತಿ ಗಂಭೀರ ಆರೋಪ ಮಾಡಿದ್ದಾರೆ. ಉತ್ತಮ್ ನಗರ ಬ್ಯಾಂಕ್‌ ಶಾಖೆಯಲ್ಲಿ ಖಾತೆ ಹೊಂದಿರುವ ರಾಣಾ ಗಾರ್ಮೆಂಟ್ಸ್‌  ಯಾವುದೇ ಕೆವೈಸಿ ದಾಖಲೆಗಳನ್ನು ನೀಡಿಲ್ಲ. ತಮ್ಮ ಜೊತೆ ಮಾತನಾಡಿದ ವ್ಯಕ್ತಿ ತನ್ನನ್ನು ಸೈಬರ್ ಕ್ರೈಂ ಬ್ರಾಂಚ್‌ನ ಡಿಸಿಪಿ ಬಾಲ್‌ಸಿಂಗ್‌ ರಜಪೂತ್ ಎಂದು ಪರಿಚಯಿಸಿಕೊಂಡಿದ್ದನು. ಮಾದಕ ದ್ರವ್ಯ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ನಿಮ್ಮ ಹೆಸರು ಕೇಳಿ ಬಂದಿದೆ ಅಂತೇಳಿ ನನ್ನನ್ನು ಎರಡು ದಿನ ವಿಚಾರಣೆಗೆ ಒಳಪಡಿಸಿ ಹಣ ವರ್ಗಾಯಿಸಿಕೊಂಡಿದ್ದಾರೆ. ನಿಮ್ಮನ್ನು ಜೈಲಿಗೆ ಹಾಕಲಾಗುವುದು ಎಂಬ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ವಂಚನೆ ಮೇ ಮೊದಲ ವಾರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

Latest Videos
Follow Us:
Download App:
  • android
  • ios