Asianet Suvarna News Asianet Suvarna News

ಚಿನ್ನ ಖರೀದಿಸುವ ನೆಪದಲ್ಲಿ ಮಾಂಗಲ್ಯ ಸರ ಎಗರಿಸಿದ ಖತರ್ನಾಕ್ ಮಹಿಳೆಯರು! 

: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಶಾಪ್ ಗೆ ಬಂದ ತಾಯಿ-ಮಗಳು  32 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾದ ಘಟನೆ ತುಮಕೂರು‌ ನಗರದ ಗುಂಚಿ ಸರ್ಕಲ್ ಬಳಿಯಿರುವ  ಎಸ್‌ಎನ್‌ಡಿ ಜ್ಯುವೆಲ್ಲರಿ ಶಾಪ್ ನಲ್ಲಿ ನಡೆದಿದೆ. 

Women who stole a gold chain from a jewelery shop escaped at tumakuru rav
Author
First Published Dec 5, 2023, 11:58 PM IST

ತುಮಕೂರು(ಡಿ.5) : ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಶಾಪ್ ಗೆ ಬಂದ ತಾಯಿ-ಮಗಳು  32 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾದ ಘಟನೆ ತುಮಕೂರು‌ ನಗರದ ಗುಂಚಿ ಸರ್ಕಲ್ ಬಳಿಯಿರುವ  ಎಸ್‌ಎನ್‌ಡಿ ಜ್ಯುವೆಲ್ಲರಿ ಶಾಪ್ ನಲ್ಲಿ ನಡೆದಿದೆ. 

ಡಿಸೆಂಬರ್ 2 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಯಿ -ಮಗಳ ಸೋಗಿನಲ್ಲಿ ಎಂಟ್ರಿ ಕೊಟ್ಟಿರುವ ಓರ್ವ ಯುವತಿ ಹಾಗೂ ಮಹಿಳೆ ಚಿನ್ನದ ಮಾಂಗಲ್ಯ ಸರ ಖರೀದಿ ಮಾಡುವುದಾಗಿ ಚಿನ್ನದ ಸರಗಳನ್ನು ತೋರಿಸುವಂತೆ ಕೇಳಿದ್ದಾರೆ. ಮಾತಿನ ಮೂಲಕ ಜ್ಯುವೆಲ್ಲರಿ ಶಾಪ್ ಮಾಲೀಕನ ಗಮನ ಬೇರೆಡೆ ಸೆಳೆದ ಓರ್ವ ಯುವತಿ ಹಾಗೂ ಮಹಿಳೆ ವ್ಯವಸ್ಥಿತವಾಗಿ ಮಾಂಗಲ್ಯ ಸರವನ್ನು ಬಚ್ಚಿಟ್ಟುಕೊಂಡಿದ್ದಾರೆ.
ನಂತರ ಎಟಿಎಂ ನಲ್ಲಿ ಹಣ ಡ್ರಾ ಮಾಡಿಕೊಂಡು ಬರುವುದಾಗಿ ಹೇಳಿ ಪರಾರಿ ಆಗಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ‌ಯಾಗಿದ್ದು ಕೆಲ ಗಂಟೆಗಳ ಬಳಿಕ ಚಿನ್ನದ ಸರವನ್ನ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

ಪೊಲೀಸರು ಹಾಗೂ ವಕೀಲರ ನಡುವೆ ಬಹಿರಂಗ ಸಂಘರ್ಷಕ್ಕೆ ವಿರಾಮ ?  ಹೈಕೋರ್ಟ್ ಸೂಚನೆ ಏನು?

ಸರ ಕದ್ದು ಪರಾರಿಯಾದ ಮಹಿಳೆಯರ ವಿರುದ್ಧ ತುಮಕೂರು ನಗರ ಠಾಣೆಗೆ ಜ್ಯುವೆಲ್ಲರಿ ಶಾಪ್ ಮಾಲೀಕ ದೂರು ನೀಡಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಸಿಕೊಂಡ ತುಮಕೂರು ನಗರ ಠಾಣೆ ಪೊಲೀಸರು. ಆರೋಪಿಗಳ ಪತ್ತೆ ಹಚ್ಚಲು ಜಾಲ ಬೀಸಿದ್ದಾರೆ.

Follow Us:
Download App:
  • android
  • ios