Asianet Suvarna News Asianet Suvarna News

ಮನೆ ಕೆಲಸದಾಕೆಯ ಮೇಲೆ ಮಹಿಳೆಯಿಂದ ಹಲ್ಲೆ: ವಿಡಿಯೋ ವೈರಲ್

ಮನೆ ಕೆಲಸದಾಕೆ ಮೇಲೆ ಮಹಿಳೆಯೊಬ್ಬಳು ಹಲ್ಲೆ ಮಾಡಿದ ಘಟನೆ ನೋಯ್ಡಾ ಹೌಸಿಂಗ್ ಸೊಸೈಟಿಯ ಲಿಫ್ಟ್‌ವೊಂದರಲ್ಲಿ ನಡೆದಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ. ಘಟನೆ ಲಿಫ್ಟ್‌ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆ ಆಗಿದೆ. 

women beaten house maid in Noida housing society video goes viral police taken action akb
Author
First Published Dec 27, 2022, 10:05 PM IST

ನೋಯ್ಡಾ: ದೆಹಲಿ-ಎನ್‌ಸಿಆರ್‌ ವ್ಯಾಪ್ತಿಯಲ್ಲಿ ಬರುವ ನೋಯ್ಡಾದ ವಸತಿ ಸಮುಚ್ಚಯಗಳು ಬೇಡದ ಕಾರಣಕ್ಕೆ ಸಾಕಷ್ಟು ಸುದ್ದಿಯಾಗುತ್ತಿವೆ. ಕೆಲ ದಿನಗಳ ಹಿಂದೆ ನೋಯ್ಡಾದ ವಸತಿ ಸಮುಚ್ಚಯದಲ್ಲಿ ಗುರುತಿನ ಚೀಟಿ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ವಸತಿ ಸಮುಚ್ಚಯದ ಸೆಕ್ಯೂರಿಟಿ ಗಾರ್ಡ್‌ನ್ನು ಹಿಗ್ಗಾಮುಗ್ಗಾ ಥಳಿಸಿದ್ದ. ಈ ಘಟನೆ ಮಾಸುವ ಮೊದಲೇ ಮತ್ತೊಂದು ಹಲ್ಲೆ ವಿಡಿಯೋ ಬೆಳಕಿಗೆ ಬಂದಿದೆ. ಮನೆ ಕೆಲಸದಾಕೆ ಮೇಲೆ ಮಹಿಳೆಯೊಬ್ಬಳು ಹಲ್ಲೆ ಮಾಡಿದ ಘಟನೆ ನೋಯ್ಡಾ ಹೌಸಿಂಗ್ ಸೊಸೈಟಿಯ ಲಿಫ್ಟ್‌ವೊಂದರಲ್ಲಿ ನಡೆದಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ. ಘಟನೆ ಲಿಫ್ಟ್‌ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆ ಆಗಿದೆ. 

ಮನೆ ಕೆಲಸದಾಕೆ 20 ವರ್ಷದ ಅನಿತಾ (Anita) ಮೇಲೆ ಹೌಸಿಂಗ್ ಸೊಸೈಟಿ ನಿವಾಸಿಯಾಗಿರುವ ಶೆಫಾಲಿ ಕೌಲ್(Shaifali Kaul) ಹಲ್ಲೆ ಮಾಡಿ, ಆಕೆಯನ್ನು ಲಿಫ್ಟ್‌ನಿಂದ ಎಳೆದೊಯ್ದಿದ್ದಾರೆ. ನೋಯ್ಡಾದ ಸೆಕ್ಟರ್ 120 ರಲ್ಲಿ ಬರುವ  ಕ್ಲಿಯೋ ಕೌಂಟಿ ಸೊಸೈಟಿಯಲ್ಲಿ(Cleo County Society)  ಈ ಘಟನೆ ನಡೆದಿದೆ. ವರದಿಯ ಪ್ರಕಾರ, ನೋಯ್ಡಾ ಸೆಕ್ಟರ್ 120 ರಲ್ಲಿರುವ ಕ್ಲಿಯೋ ಕೌಂಟಿ ಸೊಸೈಟಿಯ ನಿವಾಸಿಯಾಗಿರುವ ಶೈಫಾಲಿ ಕೌಲ್ ಎಂಬ ಮಹಿಳೆ 20 ವರ್ಷದ ಅನಿತಾ ಎಂಬ ಹುಡುಗಿಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡಿದ್ದರು. ಇತ್ತೀಚೆಗೆ ಆಕೆಗೆ ಮನೆಯೊಡತಿ ನಿರಂತರ ನಿಂದಿಸುತ್ತಿರುವ ಹಿನ್ನೆಲೆಯಲ್ಲಿ ಆಕೆ ತನ್ನ ಊರಿಗೆ ಮರಳಲು ಪ್ರಯತ್ನಿಸಿದ್ದಳು. ಈ ಹಿನ್ನೆಲೆಯಲ್ಲಿ ಮಹಿಳೆ ಮನೆ ಕೆಲಸದಾಕೆಯ ಮೇಲೆ ಮತ್ತೆ ಹಲ್ಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. 

Noida Accident: ಡಿಕ್ಕಿ ಹೊಡೆದು ಮಹಿಳೆಯನ್ನು ರಸ್ತೆ ಮೇಲೆ ಎಳೆದೊಯ್ದ ಐಷಾರಾಮಿ ಕಾರು: ಬಲಿಯಾದ ರಿಸೆಪ್ಷನಿಸ್ಟ್

ಹಲ್ಲೆಗೊಳಗಾದ ಅನಿತಾ ಕಳೆದ ಆರು ತಿಂಗಳಿನಿಂದ ಶೈಫಾಲಿ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದಳು. ಆದರೆ ಶೈಫಾಲಿ  ಪ್ರತಿದಿನ ಅನಿತಾ ಮೇಕಲೆ ದೈಹಿಕ ಹಲ್ಲೆ ನಡೆಸುತ್ತಿದ್ದಳು. ಇದೀಗ ಹಲ್ಲೆಯ ವಿಡಿಯೋ ಬಹಿರಂಗವಾಗಿದ್ದು, ಶೈಫಾಲಿ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಈ ಬಗ್ಗೆ ಗೌತಮ್ ಬುದ್ಧ ನಗರ (Gautam Buddh Nagar) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಈ ಬಗ್ಗೆ ಗೌತಮ್ ಬುದ್ಧ ನಗರ ಕಮೀಷನರೇಟ್ ವ್ಯಾಪ್ತಿಯ ಅಧಿಕೃತ ಟ್ವಿಟರ್ ಪೇಜ್‌ನಿಂದ ಟ್ವಿಟ್ ಮಾಡಲಾಗಿದೆ.ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಯ ಮೇಲೆ ಹಲ್ಲೆ ನಡೆಸಿ, ಒತ್ತೆಯಾಳಾಗಿ ಇಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ತಂದೆ ನೀಡಿದ ಮಾಹಿತಿ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಐಡಿ ಕಾರ್ಡ್ ಕೇಳಿದ ಭದ್ರತಾ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ವ್ಯಕ್ತಿ


 

Follow Us:
Download App:
  • android
  • ios