ಉದಯಪುರ (ಫೆ. 01)  ಸಣ್ಣದೊಂದು ವಾದ ಮಾಡಿದ ಮಹಿಳೆಯೆ ಚಿತ್ರಹಿಂಸೆ ನೀಡಲಾಗಿದೆ.  ರಾಜಸ್ಥಾನದ ಚಿತ್ತೋರ್‌  ನಿಂದ ಪ್ರಕರಣ ವರದಿಯಾಗಿದೆ.

ದಲಿತ ಸಮುದಾಯಕ್ಕೆ ಸೇರಿದ ಮಹಿಳೆ  ಮೇಲೆ ಜಾತಿ ನಿಂದನೆ ಮಾಡಿದ ತಾಯಿ ಮತ್ತು ಮಗ ಹಲ್ಲೆ ಮಾಡಿದ್ದಾರೆ.  ಮಹಿಳೆಯ ಖಾಸಗಿ ಅಂಗಗಳ ಮೇಲೆಯೂ ದಾಳಿ ಮಾಡಿದ್ದಾರೆ.

ಕಾಮದ ಆಸೆ ಪೂರೈಸದ್ದಕ್ಕೆ ಹೆಣ್ಣು ಮಗುವನ್ನೇ  ಬೆಂಕಿಗೆ ಎಸೆದ

ಮಹಿಳೆ ಕೆಲ ದಿನಗಳ  ಹಿಂದೆ  ಜಾಗವೊಂದರಲ್ಲಿ  ಬಟ್ಟೆ ತೊಳೆಯುತ್ತಿದ್ದರು.  ಈ ವೇಳೆ ಬೈಕ್ ನಲ್ಲಿ ಬಂದ ತಾಯಿ ಮಗ ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರುಮಾಡಿದ್ದಾರೆ.  ಮಹಿಳೆಯ ಲೆಹಂಗಾವನ್ನು ಎಳೆದ ಆರೋಪಿ  ಆಕೆಯ ಖಾಸಗಿ ಅಂಗಗಳ ಮೇಲೆಯೂ ದಾಳಿ ಮಮಾಡಿದ್ದಾನೆ. ಪರಿಣಾಮ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ.

ಮಹಿಳೆ ಮೇಲೆ ಇಷ್ಟೆಲ್ಲ ಹಲ್ಲೆ ನಡೆಯುತ್ತಿದ್ದರೂ ಹಳ್ಳಿಯ ಯಾರೊಬ್ಬರು ಮುಂದೆ ಬಂದು ತಡೆಯುವ ಕೆಲಸ ಮಾಡಿಲ್ಲ.  ದೂರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಗಂಡ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿ  ರಕ್ಷಣೆ ಮಾಡಿ  ಆಳಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.