ಮುಜಾಫರ್ಪುರ(ಫೆ. 01)  ತನ್ನ ಲೈಂಗಿಕ ಆಸೆ ಪೂರೈಸಲು ಒಪ್ಪಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಇಲ್ಲೊಬ್ಬ ಪುಣ್ಯಾತ್ಮ ಮಗುವನ್ನು ಬೆಂಕಿಗೆ ಎಸೆದಿದ್ದಾನೆ. 

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾದಾಗ ಆಕೆ ಪ್ರತಿಭಟಿಸಿದ್ದಾಳೆ.  ಇದರಿಂದ ಕೋಪಗೊಂಡ ವ್ಯಕ್ತಿ  ಆಕೆಯ ಮಡಿಲಲ್ಲಿ ಇದ್ದ ಮಗುವನ್ನು ಬೆಂಕಿಗೆ ಎಸೆದಿದ್ದಾನೆ.

ಸುಟ್ಟ ಗಾಯಗಳಿಂದ ಜೀವನ್ಮರಣ ಸ್ಥಿತಿಯಲ್ಲಿ ಇರುವ ಮಗುವನ್ನು ಸರ್ದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಮೂರು ತಿಂಗಳ ಹೆಣ್ಣು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅಪ್ರಾಪ್ತೆ ಮೇಲೆ ಅತ್ಯಾಚಾರ; ಶೃಂಗೇರಿಯಲ್ಲಿ ಪೈಶಾಚಿಕ ಕೃತ್ಯ

ಬೊಚಾಹನ್  ಪ್ರದೇಶದಲ್ಲಿ ಮನೆ ಹೊರಗೆ ಮಗಿಳೆ ಕುಳಿತಿದ್ದಳು. ದಿಪೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಅಲ್ಲಿಗೆ ಬಂದ ಕಾಂಉಕ ಮಹಿಳೆ ಮೇಲೆ ಎರಗಿದ್ದಾನೆ. ಇದನ್ನು ಪ್ರತಿಭಟಿಸಿದಕ್ಕೆ ಮಡಿಲಲ್ಲಿ ಇದ್ದ ಮಗುವನ್ನು ಬೆಂಕಿಗೆ ಎಸೆದಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ  ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ  ಬೈದ್ಯನಾಥ್ ಸಿಂಗ್ ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಘಟನೆ ಸಂಬಂಧ ಯಾವುದೆ ಕ್ರಮ ತೆಗೆದುಕೊಳ್ಳಲಿಲ್ಲ. ಅನಿವಾರ್ಯವಾಗಿ ಹಿರಿಯ ಅಧಿಕಾರಿಗಳನ್ನು ಸಂಪರ್ಕ ಮಾಡಬೇಕಾಗಿ ಬಂತು ಎಂದು  ಮಹಿಳೆ ಪತಿ ಹೇಳಿದ್ದಾರೆ. 

ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಪದೇ ಪದೇ ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ. ಬಾಲಕಿ ಶವ ಉತ್ತರ ಪ್ರದೇಶದ ಹೊಲದಲ್ಲಿ ಪತ್ತೆಯಾಗಿದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು .