ಮುಂಬೈ(ಆ.07) ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಬಗ್ಗೆ ಅವಹೇಳನಕರ ರೀತಿ ಸೋಶಿಯಲ್ ಮೀಡಿಯಾದಲ್ಲಿ ಚಿತ್ರವೊಂದನ್ನು ಶೇರ್ ಮಾಡಿಕೊಂಡಿದ್ದ  38  ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ.

ಸಿಎಂ ಠಾಕ್ರೆ ಪುತ್ರ ಮತ್ತು ಆದಿತ್ಯ ಠಾಕ್ರೆ ಬಗ್ಗೆಯೂ ಮಹಿಳೆ ಅವಹೇಳನ ಮಾಡಿದ್ದರು. ಪೂರ್ವಾಗ್ರಹ  ಪೀಡಿತರಾದ ಮಹಿಳೆ ಸಮಾಜದಲ್ಲಿ ಅಶಾಂತಿ ಬಿತ್ತುದ್ದಿದ್ದಾರೆ ಎಂಬ ಆಧಾರದಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.  ಮಾಧ್ಯಮವೊಂದು ವರದಿ ಮಾಡಿದಂತೆ ಮಹಿಳೆಗೆ ಗುರುವಾರ ಜಾಮೀನು ಸಿಕ್ಕಿದೆ. 

ರಶ್ಮಿ ಕರಂಡಿಕರ್ ಎಂಬ ಮಹಿಳೆಯ ಬಂಧನವಾಗಿದೆ. ಶಿವಸೇನೆ ಕಾನೂನು ವಿಭಾಗ ನೋಡಿಕೊಳ್ಳುವ ನ್ಯಾಯವಾದಿ ಧರ್ಮೇಂದ್ರ ಮಿಶ್ರಾ ಎನ್ನುವವರು ನೀಡಿದ  ದೂರಿನ ಆಧಾರದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ.

ಕಸ್ಟಮರ್ ಕೇರ್ ಗೆ ಕರೆ ಮಾಡಿದ ಯುವತಿಗೆ ಪಂಗನಾಮ

ಮಹಿಳೆ ಟ್ವಿಟರ್ ನಲ್ಲಿ ತನ್ನನ್ನು ತಾನು ಭಾರತ್ ನೀತಿ ಗ್ರೂಪ್ ಗೆ ಸೇರಿದವಳು ಎಂದು ಕರೆದುಕೊಂಡಿದ್ದಾಳೆ.  ಈ ಗುಂಪು ಬಿಜೆಪಿ ಐಟಿ ಸೆಲ್ ನೊಂದಿಗೆ ಸಂಬಂಧ ಇರಿಸಿಕೊಂಡಿದೆ.  ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ ಎಂದು ಶಿವಸೇನೆ  ಹೇಳಿದೆ.