Asianet Suvarna News Asianet Suvarna News

6 ತಿಂಗಳು ಪ್ರೇಯಸಿ ಮನೆಯಲ್ಲೇ ಉಳಿದು ಉಂಡು ಹೋದ.. ಕೊಂಡು ಹೋದ!

* ಮದುವೆಯಾಗುವುದಾಗಿ ನಂಬಿಸಿ ಪ್ರೇಯಸಿ ಮನೆಯಲ್ಲೇ ಉಳಿದುಕೊಂಡ
* ಆರು ತಿಂಗಳ ಕಾಲ ಹುಡುಗಿಯೊಂದಿಗೆ ನಿರಂತರ ಸೆಕ್ಸ್
* ಇದ್ದಕ್ಕಿದ್ದಂತೆ ಕೈಕೊಟ್ಟು ಬೇರೆ ಹುಡುಗಿ ಮದುವೆಯಾಗಲು ಮುಂದಾದ

Woman registers rape complaint breach of trust against her fiance and his parents Ahmedabad mah
Author
Bengaluru, First Published Aug 14, 2021, 5:35 PM IST
  • Facebook
  • Twitter
  • Whatsapp

ಅಹಮದಾಬಾದ್(ಆ. 14) ಅತ್ಯಾಚಾರದ ಆರೋಪದ ಮೇಲೆ  28 ವರ್ಷದ ಯುವಕ ಮತ್ತು ಆತನ ಹೆತ್ತವರ ಮೇಲೆ  ದೂರು ದಾಖಲಾಗಿದೆ.  ಮದುವೆಯಾಗುತ್ತೇನೆ ಎಂದು ನಂಬಿಸಿ ಅತ್ಯಾಚಾರ ಎಸಗಿದ್ದಾಬೆ ಎಂದು ಯುವತಿ ಆರೋಪಿಸಿದ್ದಾಳೆ.  ಅಹಮದಾಬಾದ್ ಜಿಲ್ಲೆಯ ಚಂಗೋಡರ್ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸನಂದ್ ನಿವಾಸಿ ದೂರುದಾರೆ ಘಟನೆಯ ವಿವರವನ್ನು ಒಂದೊಂದಾಗಿ ತೆರೆದಿರಿಸಿದ್ದಾರೆ. ಮೊರಿಯಾ ಪ್ರದೇಶದ ಆಟೋಮೊಬೈಲ್ ತಯಾರಿಕಾ ಕಾರ್ಖಾನೆಯಲ್ಲಿ ಆರೋಪಿಯನ್ನು ಮೊದಲು ಭೇಟಿಯಾಗಿದ್ದೆ.  ಎಂಟು ತಿಂಗಳ ಹಿಂದೆ ನಮ್ಮ ಪರಿಚಯವಾಯಿತು ಅದು ಪ್ರೀತಿಗೆ ತಿರುಗಿ ಫೆಬ್ರವರಿ  2  ರಂದು ನಿಶ್ಚಿತಾರ್ಥ ಮಾಡಿಕೊಂಡೆವು. ಎರಡು ಕುಟುಂಬಗಳುಇ ಒಪ್ಪಿಕೊಂಡಿದ್ದವು.   ಸರ್ಖೇಜ್ ನಿವಾಸಿಯಾಗಿದ್ದ ಆರೋಪಿ ಸಂನಂದ್‌ನಲ್ಲಿರುವ ನನ್ನ ಮನೆಗೆ ಆಗಾಗ್ಗೆ ಬಂದು ಹೋಗಿ ಮಾಡುತ್ತಿದ್ದ.  ಇದಾದ ಮೇಲೆ ನನ್ನ ಮನೆಯಲ್ಲೇ ಆರು ತಿಂಗಳ ಕಾಲ ಉಳಿದುಕೊಂಡ.. ಆಗಾಗ್ಗೆ ನನ್ನ ಜತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ತನ್ನ ಕುಟುಂಬದಲ್ಲಿ ಏನೋ ಸಮಸ್ಯೆ ಆಗಿದೆ ಎಂದು 15  ದಿನದ ಹಿಂದೆ ವಾಪಸ್ ಹೋದ.

ಮಕ್ಕಳಾಗುತ್ತಿಲ್ಲ ಪರಿಹಾರ ಕೊಡಿ ಎಂದು ಬಂದವಳ ಮಂಚಕ್ಕೆ ಕರೆದ

ಒಂದು ವಾರದ ಹಿಂದೆ ಬೇರೆ ಹುಡುಗಿಯನ್ನು ಭೇಟಿ ಮಾಡಿ ಆಕೆಯನ್ನು ಮದುವೆಯಾಗುತ್ತೇನೆ ನಾವು ಬ್ರೇಕ್ ಅಪ್ ಮಾಡಿಕೊಳ್ಳೋಣ ಎಂದು ಹೇಳಲು ಆರಂಭಿಸಿದ. ಈ ವಿಚಾರವನ್ನು ಹುಡುಗನ ತಂದೆ ತಾಯಿಗೆ ತಿಳಿಸಿದರೆ ನಾವೇನು ಮಾಡಲು ಸಾಧ್ಯವಿಲ್ಲ, ನೀನು ಆತ್ಮಹತ್ಯೆ ಮಾಡಿಕೊ ಎಂಬ ರೀತಿಯಲ್ಲಿ ಮಾತನಾಡಿದರು ಎಂದು ಯುವತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು  ಚಿಕಿತ್ಸೆ ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ . 

Follow Us:
Download App:
  • android
  • ios