ಹೊಸಪೇಟೆ(ಸೆ.20): ನಗರದ ವಿಜಯನಗರ ಕಾಲೇಜು ಬಳಿಯ ಬಿಎಸ್‌ಎನ್‌ಎಲ್‌ ಟಾವ​ರ್‌ ಪ್ರದೇಶದಲ್ಲಿ ಮಹಿಳೆಯ ಕೊಲೆ ಮಾಡಲಾಗಿದೆ ಎಂದು ನಗರದ ಚಿತ್ತವಾಡ್ಗಿ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ಮುಬೀನಾ ಬಾನು (32) ಮೃತ ಮಹಿಳೆ. 2016ರಲ್ಲಿ ನಗರದ ಆಸೀಫ್‌ ಎಂಬುವರೊಂದಿಗೆ ಮುಬೀನಾ ಬಾನು ಮದುವೆಯಾಗಿತ್ತು. ನಾಲ್ಕು ವರ್ಷದ ಹೆಣ್ಣು ಮಗುವಿದೆ. 

ಬಿಜೆಪಿ ಮುಖಂಡನ ಕೊಲೆ ಪ್ರಕರಣ: ಪತ್ನಿ ಸೇರಿ ಹಲವರ ವಿಚಾರಣೆ

ಕಳೆದೆರಡು ದಿನಗಳ ಹಿಂದೆ ಅಸ್ವಾಭಾವಿಕವಾಗಿ ಮೃತಪಟ್ಟಿದ್ದರು. ಮಹಿಳೆ ಸಾವು ಸಹಜ ಅಲ್ಲ, ಕೊಲೆ ಎಂದು ಆರೋಪಿಸಿ ಮುಬಿನಾ ತಾಯಿ ಸಾಜೀದಾ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಕ್ರಮ ಕೈಗೊಂಡಿದ್ದಾರೆ.