Crime News: ಪ್ರಿಯಕರನೊಂದಿಗೆ ಸೇರಿ ಪತ್ನಿ ಪತಿಯನ್ನು ಕೊಂದಿದ್ದು ಬಳಿಕೆ ಅತ್ತೆ ಬಳಿ ಮಗನ ಸೋಗಲ್ಲಿ 22 ತಿಂಗಳ ಕಾಲ ತನ್ನ ಪ್ರಿಯಕರನಿಂದ  ಮಾತನಾಡಿಸಿದ್ದಾಳೆ

ಮಧ್ಯಪ್ರದೇಶ (ಆ. 12): ಪ್ರಿಯಕರನೊಂದಿಗೆ ಸೇರಿ ಪತ್ನಿ ಪತಿಯನ್ನು ಕೊಂದಿದ್ದು ಬಳಿಕೆ ಅತ್ತೆ ಬಳಿ ಮಗನ ಸೋಗಲ್ಲಿ 22 ತಿಂಗಳ ಕಾಲ ತನ್ನ ಪ್ರಿಯಕರನಿಂದ ಮಾತನಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆ ತನ್ನ ಪತಿಗೆ ನಿದ್ರೆ ಮಾತ್ರೆಗಳನ್ನು ನೀಡಿ ಆತನ ಬಟ್ಟೆಗಳನ್ನು ತೆಗೆದಿದ್ದಾಳೆ. ಇದಾದ ಬಳಿಕ ಪತಿಯನ್ನು ಜೀವಂತವಾಗಿ ಕಾಲುವೆಗೆ ಎಸೆದಿದ್ದಾಳೆ. ಕೊಳೆತ ಶವವನ್ನು ಪತ್ತೆ ಹಚ್ಚಿದ ಪೊಲೀಸರು ಮೃತದೇಹವನನ್ನು ಯಾರೂ ಹಕ್ಕುದಾರರಿಲ್ಲ ಎಂದು ಹೂತು ಹಾಕಿದ್ದಾರೆ.

ಆರೋಪಿ ಪತ್ನಿ "ನಿಮ್ಮ ಮಗ ದೂರದ ಸ್ಥಳಕ್ಕೆ ಕೆಲಸಕ್ಕೆ ಹೋಗಿದ್ದಾರೆ" ಎಂದು ತನ್ನ ವಯಸ್ಸಾದ ಅತ್ತೆಗೆ ಹೇಳಿ ನಂಬಿಸಿದ್ದಳು ಎಂದು ವರದಿಗಳು ತಿಳಿಸಿವೆ. ಅಲ್ಲದೇ ಆರೋಪಿ ಪತ್ನಿ 22 ತಿಂಗಳಿಂದ ತನ್ನ ಪ್ರಿಯಕರನನ್ನು ಗಂಡನ ಸೋಗಿನಲ್ಲಿ ಅತ್ತೆಯೊಂದಿಗೆ ಮಾತನಾಡುವಂತೆ ಮಾಡಿದ್ದಾಳೆ. 

ಇನ್ನು ಆರೋಪಿ ತನ್ನ ಅತ್ತಿಗೆ ಜತೆಗೆ ಸಹೋದರ ಎಂದು ಹೇಳಿ ಪ್ರಿಯಕರನೊಂದಿಗೆ ಮಾತನಾಡಿಸಿದಾಗ ರಹಸ್ಯ ಬಯಲಾಗಿದೆ. ಈ ಧ್ವನಿ ತನ್ನ ಅಣ್ಣನದ್ದಲ್ಲ ಎಂದು ಅತ್ತಿಗೆ ಗುರುತಿಸಿದ್ದಾಳೆ. ಬಳಿಕ ಆಕೆ ತನ್ನ ತಾಯಿಯೊಂದಿಗೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ತನ್ನ ಸಹೋದರ ನಾಪತ್ತೆಯಾಗಿರುವುದಾಗಿ ತಿಳಿಸಿದ್ದಾಳೆ. ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಪತ್ನಿ ಹಾಗೂ ಆಕೆಯ ಪ್ರಿಯಕರನ ದುಷ್ಕೃತ್ಯಗಳೆಲ್ಲವೂ ಬಯಲಿಗೆ ಬಂದಿವೆ.

ಅತ್ತೆ ಜೊತೆ ಅಳಿಯನ ಲವ್ವಿಡವ್ವಿ: ಸಂಸಾರ ಬಿಟ್ಟು ಬರಲ್ಲ ಎಂದಿದ್ದಕ್ಕೆ ಕೊಂದೇಬಿಟ್ಟ

ಆರೋಪಿ ಮಹಿಳೆ ಅರವಿಂದ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಮಹಿಳೆಯ ಅತ್ತೆ ದೃಷ್ಟಿಹೀನಳಾಗಿದ್ದು, ಶ್ರವಣದೋಷವನ್ನೂ ಹೊಂದಿದ್ದಳು. ಇದರ ಲಾಭವನ್ನು ಪಡೆದುಕೊಂಡು ಇಬ್ಬರೂ ವಂಚಿಸಿದ್ದಾರೆ. 

ಗಂಡನ ಅನುಪಸ್ಥಿತಿಯಲ್ಲಿ ಅರವಿಂದ್ ಅವರ ಮನೆಗೆ ಹೋಗುತ್ತಿದ್ದ. ತನ್ನ ಪತಿಯ ವ್ಯಾಪಾರ ಪಾಲುದಾರನಾಗಿದ್ದರಿಂದ ಯಾರೂ ಅವನನ್ನು ಅನುಮಾನಿಸಲಿಲ್ಲ. ಆದರೆ ಪತಿ ವಿಶ್ವನಾಥ್‌ ಉಪಸ್ಥಿತಿಯಲ್ಲಿ ಎಂದಿಗೂ ತಾವು ಒಂದಾಗಲು ಸಾಧ್ಯವಿಲ್ಲ ಎಂದು ಇಬ್ಬರೂ ಭಾವಿಸಿದಾಗ, ವಿಶ್ವನಾಥನನ್ನು ಕೊಲ್ಲಲು ಸಂಚು ರೂಪಿಸಿದರು.

23 ನವೆಂಬರ್ 2020 ರಂದು, ಸರಕುಗಳನ್ನು ಖರೀದಿಸುವ ನೆಪದಲ್ಲಿ ಪತ್ನಿ ವಿಶ್ವನಾಥ್ ಅವರನ್ನು ಮಾರುಕಟ್ಟೆಗೆ ಕರೆದೊಯ್ದರು. ವಿಶ್ವನಾಥನಿಗೆ ನಿದ್ದೆ ಮಾತ್ರೆ ತಿನ್ನಿಸಿ, ನಿದ್ರೆಗೆ ಜಾರಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಪ್ರಿಯಕರನ ಜೊತೆ ಸೇರಿ ಆತನ ಬಟ್ಟೆಗಳನ್ನೆಲ್ಲ ತೆಗೆದು ಕಾಲುವೆಗೆ ಎಸೆದಿದ್ದಾಳೆ.