ಮನೆಯಲ್ಲೇ ಗಂಡನ ಹೂತು ಮೈದುನನ ಜೊತೆ ಸಂಸಾರ: ಈಗ ಆತನಿಗೂ ಕೊಳ್ಳಿ!
ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ಪತ್ತೆಯಾದ ಡಬಲ್ ಮರ್ಡರ್ ಕೇಸ್ ತನಿಖೆ ನಡೆಸುತ್ತಿದ್ದ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಈ ಎರಡು ಹತ್ಯೆ ನಡೆಸಿದ್ದು ಓರ್ವ ಮಹಿಳೆ ಎಂಬುವುದು ಅದಕ್ಕೂ ಶಾಕಿಂಗ್ ವಿಚಾರ. ಐದು ವರ್ಷದ ಹಿಂದೆ ಮೈದುನನೊಂದಿಗೆ ಸೇರಿ ಗಂಡನ ಕೊಂದ ಈ ಮಹಿಳೆ ಈಗ ಮೈದುನನ್ನೂ ಹತ್ಯೆಗೈದಿದ್ದಾಳೆ. ಸದ್ಯ ಮಹಿಳೆ ತಾನೇ ಈ ಕುಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಈ ಶಾಕಿಂಗ್ ಘಟನೆ ನಡೆದಿದ್ದ ಭೋಪಾಲ್ನ ಕೋಲಾರರ್ನಲ್ಲಿ. ಶವವೊಂದನ್ನು ಹಂದಿಯೊಂದು ಕಚ್ಚಿ ತಿನ್ನುತ್ತಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರಿಗೆ ಈ ಶವ ಕಲಿಯಾಸೋತ್ ನದಿ ದಡದಲ್ಲಿ ಸಿಕ್ಕಿದೆ. ಇದಾದ ಬಳಿಕ ಪೊಲೀಸರು ಬಟ್ಟೆಯ ಆಧಾರದಲ್ಲಿ ಮೃತ ವ್ಯಕ್ತಿಯನ್ನು ಮೋಹನ್ ಮೀಣಾ ಎಂದು ಗುರುತಿಸಿ ತನಖೆ ಆರಂಭಿಸಿದ್ದಾರೆ.
ಪೊಲೀಸರು ಮೃತನ ಅತ್ತಿಗೆ ಉರ್ಮಿಳಾ ಮೀಣಾ ಹಾಗೂ ಅವರ ಅಪ್ರಾಪ್ತ ಮಗನನ್ನು ವಿಚಾರಣೆ ನಡೆಸಿದಾಗ ನಡೆದ ವಿಚಾರ ಬೆಳಕಿಗೆ ಬಂದಿದೆ. ಯಾಕೆಂದರೆ ಮೃತನನ್ನು ಬೇರಾರೂ ಅಲ್ಲ, ಆತನ ಅತ್ತಿಗೆ ಹಾಗೂ ಮಗ ಇಬ್ಬರೂ ಸೇರಿ ಕೊಂದು, ನದಿಗೆಸೆದಿದ್ದರು. ಇನ್ನು ಪೊಲೀಸರು ವಿಚಾರಣೆ ಮತ್ತಷ್ಟು ಚುರುಕುಗೊಳಿಸಿದಾಗ ಐದು ವರ್ಷ ಹಿಂದೆ ತಾನು ನಡೆಸಿದ್ದ ಗಂಡನ ಹತ್ಯೆ ವಿಚಾರವನ್ನೂ ಬಾಯ್ಬಿಟ್ಟಿದ್ದಾಳೆ. ಐದು ವರ್ಷದ ಹಿಂದೆ ಮೈದುನನ ಪ್ರೀತಿಗಾಗಿ ತಾನು ಗಂಡನನ್ನು ಕೊಂದಿದ್ದಾಗಿ ಬಾಯ್ಬಿಟ್ಟಿದ್ದಾಳೆ. ಅಲ್ಲದೇ ತಾನು ಹಾಗೂ ಮೈದುನ ಗಂಡನ ಶವವನ್ನು ಮನೆಯಲ್ಲೇ ಹೂತಿದ್ದಾಗಿಯೂ ತಿಳಿಸಿದ್ದಾಳೆ.
ಮಹಿಳೆ ಕೊಟ್ಟ ಹೇಳಿಕೆ ಬಳಿಕ ಪೊಲೀಸರು ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದು, ಈ ವೇಳೆ ಅಂಗಳದಲ್ಲಿ ಮೂಳೆಗಳು ಪತ್ತೆಯಾಗಿವೆ. ಮತ್ತಷ್ಟು ಪ್ರಶ್ನೆಗಳನ್ನೆಸೆದಾಗ ಮಹಿಳೆ ತನ್ನ ಹಾಗೂ ಮೈದುನನ ನಡುವೆ ಅಕ್ರಮ ಸಂಬಂಧವಿತ್ತು. ತನಗೆ ಮೈದುನನ ಜೊತೆ ಮದುವೆಯಾಗಬೇಕಿತ್ತು. ಆದರೆ ಗಮಡ ತನ್ನ ಹಾದಿಯ ಕಲ್ಲಾಗಿದ್ದ. ಈ ನಡುವೆ ಗಂಡನ ಕೈಲಿ ಇಬ್ಬರೂ ಸಂದಿಗ್ಧ ಸ್ಥಿತಿಯಲ್ಲಿ ಸಿಕ್ಕಾಕೊಂಡೆವು. ಇದಾದ ಬಳಿಕ ಇಬ್ಬರೂ ಗಂಡನ ಮುಗಿಸಲು ಪ್ಲಾನ್ ಮಾಡಲಾರಂಭಿಸಿದೆವು. ಅದರಂತೆ ಗಂಡನನ್ನು ಕೊಂದು ಸೀವೇಜ್ ಟ್ಯಾಂಕ್ ಬಳಿ ಹೂತು ಹಾಕಿದೆವು ಎಂದು ಮಹಿಳೆ ತಿಳಿಸಿದ್ದಾಳೆ.
ಅತ್ತಿಗೆ, ಮೈದುನನ ನಡುವೆ ಎಲ್ಲವೂ ಸರಿಯಾಗೇ ಇತ್ತು. ಆದರೆ ಇತ್ತೀಚೆಗೆ ಇಬ್ಬರ ನಡುವೆಯೂ ಕಲಹ ಆರಂಭಗೊಂಡಿತ್ತು. ಮೈದುನನನಿಗೆ ಬೇರೊಬ್ಬ ಯುವತಿ ಜೊತೆ ಸಂಬಂಧವವಿತ್ತು. ಈ ವಿಚಾರ ನನಗೆ ಹಿಡಿಸಲಿಲ್ಲ. ಈ ಬಗ್ಗೆ ಮೈದುನನನಿಗೆ ಅರ್ಥ ಮಾಡಿಸಿದ್ರೂ ಆತ ಬದಲಾಗಲಿಲ್ಲ. ಗುರುವಾರ ರಾತ್ರಿಯೂ ಇಬ್ಬರ ನಡುವೆ ಭಾರೀ ಜಗಳ ನಡೆದಿದೆ. ಹೀಗಿರುವಾಗ ಮಹಿಳೆ ತನ್ನ ಮಗನೊಂದಿಗೆ ಸೇರಿ ಮೈದುನನ್ನು ಹತ್ಯೆಗೈದಿದ್ದಾಳೆ. ಬಳಿಕ ಮನೆಯಿಂದ ದೂರ ನದಿಗೆಸೆದಿದ್ದಾರೆ.
ಐದು ವರ್ಷದ ಹಿಂದೆ ಊರ್ಮಿಳಾ ತನ್ನ ಗಂಡ, ಮಗ, ಮೈದುನನ ಜೊತೆ ಕೋಲಾರ್ನ ಧಾರ್ಕೆಡದಲ್ಲಿ ವಾಸಿಸುತ್ತಿದ್ದಳು. ಗಂಡ ವಿಕಲಚೇತನ ಆಗಿದ್ದ. ಹೀಗಾಗಿ ಗಂಡನೆಂದರೆ ಆಕೆಗೆ ಹಿಡಿಸುತ್ತಿರಲಿಲ್ಲ. ಹೀಗಿರುವಾಗಲೇ ಮೈದುನನೊಂದಿಗೆ ಅಕ್ರಮ ಸಂಬಂಧ ಬೆಳೆದಿದೆ. ಜೀವನ ಪರ್ಯಂತ ಒಟ್ಟಿಗೆ ಇರಲು ಬಯಸಿದ್ದೆವು, ಆದರೆ ಇತ್ತೀಚೆಗೆ ಆತನೊಂದಿಗೂ ಜಗಳವಾಗತೊಡಗಿತ್ತು ಎಂದು ಮಹಿಳೆ ತಿಳಿಸಿದ್ದಾಳೆ.