Asianet Suvarna News Asianet Suvarna News

ಪೋಷಕರ ವಿರುದ್ಧ ಸಿಟ್ಟು, ಭೋರ್ಗೆರೆಯುವ ಜಲಪಾತಕ್ಕೆ ಹಾರಿ ಬದುಕಿ ಬಂದ ಯುವತಿ, ವಿಡಿಯೋ ವೈರಲ್!

ಅತೀಯಾಗಿ ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದ ಮಗಳನ್ನು ಪೋಷಕರು ಗದರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವತಿ ಧುಮ್ಮಿಕ್ಕು ಹರಿಯುವ ಜಲಪಾತಕ್ಕೆ ಹಾರಿದ್ದಾಳೆ. ಭೀಕರ ದೃಶ್ಯವನ್ನು ಜಲಪಾತ ನೋಡಲು ಹೋದ ಪ್ರವಾಸಿಗರು ಸೆರೆ ಹಿಡಿದಿದ್ದಾರೆ. ಜಲಪಾತಕ್ಕೆ ಹಾರಿದ ಯುವತಿ ಕತೆ ಏನಾಗಿದೆ? ಇಲ್ಲಿದೆ.

Woman jump into waterfall after fight with parents and managed to swim back to shore in Chhattisgarh ckm
Author
First Published Jul 19, 2023, 4:42 PM IST

ಬಸ್ತರ್(ಜು.19) ಚಿತ್ರಕೂಟ ಜಲಪಾತ ಅತ್ಯಂತ ಪ್ರಸಿದ್ದ. ಇಲ್ಲಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸಿ ಜಲಾಪಾತದ ಸವಿ ಅನುಭವಿಸುತ್ತಾರೆ. ಇದೀಗ ಮಳೆ ಪ್ರಮಾಣ ಹೆಚ್ಚಾಗಿರುವ ಕಾರಣ ಚಿತ್ರಕೂಟ ಜಲಾಪತ ಭೋರ್ಗೆರೆಯುತ್ತಿದೆ. ಇದೇ ಜಲಪಾತದ ಅಂತಿನಲ್ಲಿ 21ರ ಹರೆಯದ ಯುವತಿ ನಿಂತಿದ್ದಾಳೆ. ಪ್ರವಾಸಿಗರು ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ಮನವಿ ಮಾಡುತ್ತಿದ್ದಾರೆ. ಆದರೆ ಯುವತಿ ಮಾತ್ರ ಯಾವುದನ್ನೂ ಕೇಳಿಸುತ್ತಿಲ್ಲ. ಒಂದೆರೆಡು ನಿಮಿಷ ಹಾಗೇ ನಿಂತು ಒಂದೇ ಸಮನೆ ಭೋರ್ಗರೆಯುತ್ತಿರುವ ಜಲಪಾತಕ್ಕೆ ಹಾರಿದ್ದಾಳೆ. ಜಲಪಾತದ ನೀರಿನಲ್ಲಿ ಮುಳುಗಿದ ಯುವತಿ ಮೇಲಿಂದ ಕೆಳಗ್ಗೆ ಬಿದ್ದಿದ್ದಾಳೆ. ಈ ಭೀಕರ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಈ ಪ್ರಕರಣದಲ್ಲಿ ಟ್ವಿಸ್ಟ್ ಇದೆ. ಈ ಘಟನೆ ದುರಂತದಲ್ಲಿ ಅಂತ್ಯವಾಗಿಲ್ಲ. ಕಾರಣ ಯುವತಿ ಮರಳಿ ಮನೆ ಸೇರಿದ್ದಾಳೆ. ಈ ಘಟನೆ ನಡೆದಿರುವುದು ಚತ್ತೀಸಘಡದ ಚಿತ್ರಕೂಟ ಜಲಪಾತದಲ್ಲಿ.

21 ವರ್ಷದ ಯುವತಿ ಸರಸ್ವತಿ ಮೌರ್ಯ ಮನೆಯಲ್ಲಿ ಪೋಷಕರ ಜೊತೆ ಜಗಳ ಮಾಡಿದ್ದಾಳೆ. ಕಾಲೇಜು ವ್ಯಾಸಾಂಗ ಮಾಡುತ್ತಿರುವ ಸರಸ್ವತಿ ಅತೀಯಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಳು. ಪದೇ ಪದೇ ಎಚ್ಚರಿಕೆ ನೀಡಿದ ಪೋಷಕರು, ಬಳಿಕ ಮೊಬೈಲ್ ಕಸಿದಿದ್ದಾರೆ. ಮೊಬೈಲ್ ಬಳಕೆ ಮಾಡದಂತೆ ನಿರ್ಬಂಧ ಹಾಕಿದ್ದಾರೆ. ಇದು ಯುವತಿಯನ್ನು ಕೆರಳಿಸಿದೆ. ಪೋಷಕರ ಬಳಿ ಜಗಳ ಮಾಡಿದ್ದಾಳೆ. ಬಳಿಕ ಬಸ್ತಾರ್ ಜಿಲ್ಲೆಯಲ್ಲಿರುವ ಚಿತ್ರಕೂಟ ಜಲಪಾತಕ್ಕೆ ತೆರಳಿದ್ದಾಳೆ.

ತಮ್ಮನ ಜೀವ ಉಳಿಸಿಲು ಬಾವಿಗೆ ಹಾರಿದ 8 ವರ್ಷದ ಬಾಲಕಿ: ಬುದ್ಧಿವಂತಿಕೆ ಇಬ್ಬರ ಪ್ರಾಣ ಉಳಿಸಿತು

ಮಿನಿ ನಯಾಗರ ಎಂದೇ ಹೆಸರುವಾಸಿಯಾಗಿರು ಈ ಜಲಪಾತಕ್ಕೆ ಪ್ರತಿ ನಿತ್ಯ ಹಲವು ಪ್ರವಾಸಿಗರು ಆಗಮಿಸುತ್ತಾರೆ. ಇದೇ ವೇಳೆ ಈ ಯುವತಿ ಚಿತ್ರಕೂಟ ಜಲಪಾತಕ್ಕೆ ತೆರಳಿ ಅಪಾಯದ ಎಚ್ಚರಿಕೆ ಬೋರ್ಡ್ ದಾಟಿ ಮುಂದೆ ಸಾಗಿದ್ದಾಳೆ. ಇತ್ತ ಪ್ರವಾಸಿಗರು ಯುವತಿಯನ್ನು ವಾಪಸ್ ಕರೆಯುವ ಪ್ರಯತ್ನ ಮಾಡಿದ್ದಾರೆ. ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ಮನವಿ ಮಾಡಿದ್ದಾರೆ. ಆದರೆ ಯುವತಿ ಯಾರ ಮಾತನ್ನು ಕೇಳಿಸಿಕೊಂಡಿಲ್ಲ.

 

 

ಜಲಪಾತ ಧುಮ್ಮಿಕ್ಕುವ ಅಂಚಿನಲ್ಲಿ ಯುವತಿ ಕೆಲ ಕ್ಷಣಗಳ ಕಾಲ ನಿಂತುಕೊಂಡಿದ್ದಾಳೆ. ಬಳಿಕ ಒಂದೇ ಸಮನೆ ಜಲಪಾತಕ್ಕೆ ಹಾರಿದ್ದಾಳೆ. ಎರಡು ಹಂತದಲ್ಲಿರುವ ಜಲಪಾತ ಮೊದಲ ಭಾಗದ ನೀರಿನಲ್ಲಿ ಕೊಚ್ಚಿ ಹೋದ ಯುವತಿ, ಬಳಿಕ ಅತ್ಯಂತ ಕಳಕ್ಕೆ ಬಿದ್ದಿದ್ದಾಳೆ. ಭಾರಿ ಪ್ರಮಾಣದ ನೀರು ಹಾಗೂ ಹರಿವಿನಲ್ಲಿ ಯುವತಿ ಕೊಚ್ಚಿ ಹೋಗಿದ್ದಾಳೆ. ಈ ಸಂಪೂರ್ಣ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಸೇತುವೆ ಮೇಲೆ ಡಿಯೋ ನಿಲ್ಲಿಸಿ, ನದಿಗೆ ಹಾರಿದ ತಾಲೂಕು ಪಂಚಾಯಿತಿ ಸದಸ್ಯನ ಪುತ್ರಿ

ಜಲಪಾತಕ್ಕೆ ಹಾರಿದ ಯುವತಿ ನೀರಿನ ರಭಸ ಹಾಗೂ ಆಳಕ್ಕೆ ಬಿದ್ದಿದ್ದಾಳೆ. ಆದರೆ ಹಾರಿದ ಕ್ಷಣದಿಂದ ಯುವತಿ ಈಜಲು ಆರಂಭಿಸಿದ್ದಾಳೆ. ಬಳಿಕ ಈಜಿ ನದಿ ಬದಿಗೆ ಬಂದಿದ್ದಾಳೆ. ಇದೇ ವೇಳೆ ಸ್ಥಳೀಯರ ನೆರವಿನಿಂದ ಯುವತಿ ಬದುಕಿ ಬಂದಿದ್ದಾಳೆ. ಯುವತಿಯ ಕೈ, ಕಾಲು, ದೆಹದಲ್ಲಿ ಗಾಯಗಳಾಗಿದೆ. ಯುವತಿಯನ್ನಸ್ಥಳೀಯರು ಪೋಷಕರಿಗೆ ಒಪ್ಪಿಸಿದ್ದಾರೆ.

Follow Us:
Download App:
  • android
  • ios