ಸಾಕಿದ ಮಹಿಳೆ, ಮಕ್ಕಳನ್ನೇ ಕಚ್ಚಿ ಗಾಯಗೊಳಿಸಿದ Pit Bull: 50 ಹೊಲಿಗೆ ಹಾಕಿಸಿಕೊಂಡ ಮನೆಯೊಡತಿ

ಹರ್ಯಾಣದ ಗ್ರಾಮವೊಂದರಲ್ಲಿ ತನ್ನನ್ನು ಸಾಕಿದ್ದ ಮನೆಯ ಮಹಿಳೆ, ಮಕ್ಕಳನ್ನೇ ಕಚ್ಚಿ ಗಾಯಗೊಳಿಸಿದೆ ಪಿಟ್‌ ಬುಲ್ ನಾಯಿ. ಇದರಿಂದ ಮಹಿಳೆಗೆ 50 ಹೊಲಿಗೆಗಳನ್ನು ಹಾಕಲಾಗಿದೆ ಎಂದು ತಿಳಿದುಬಂದಿದೆ.

woman gets 50 stitches on head hand leg after pet pit bull attacks her ash

ಪಿಟ್‌ ಬುಲ್‌ (Pit Bull) ನಾಯಿ (Dog) ಅಪಾಯಕಾರಿ ಎಂದು ಆಗಾಗ್ಗೆ ವರದಿಗಳನ್ನು ಓದುತ್ತಲೇ ಇರುತ್ತೀರಿ ಅಥವಾ ಟಿವಿಗಳಲ್ಲಿ ನೋಡುತ್ತೀರಿ ಅಲ್ಲವೇ.. ಇಷ್ಟೊಂದು ಸುದ್ದಿಗಳು ಬರುತ್ತಿದ್ದರೂ ಜನ ಮಾತ್ರ ಈ ಶ್ವಾನಗಳನ್ನು ಸಾಕುವುದನ್ನು ನಿಲ್ಲಿಸುತ್ತಿಲ್ಲ. ಪಿಟ್‌ ಬುಲ್‌ ಎಷ್ಟು ಅಪಾಯಕಾರಿ ಎಂಬುದಕ್ಕೆ ಈಗ ಮತ್ತೊಂದು ನಿದರ್ಶನ ಸಿಕ್ಕಿದೆ. ಮನೆಯ ಮಾಲೀಕರಾಗಿರುವ ಮಹಿಳೆ (Woman) ಹಾಗೂ ಇಬ್ಬರು ಮಕ್ಕಳನ್ನು (Children) ಕಚ್ಚಿ ತೀವ್ರ ಗಾಯಗೊಳಿಸಿದೆ ಈ ಸಾಕಿದ ಶ್ವಾನ. ಅದೂ ಯಾವುದೋ ದೇಶದಲ್ಲಿ ಅನ್ಕೋಬೇಡಿ. ಭಾರತದಲ್ಲೇ (India) ಈ ಭಯಾನಕ ಘಟನೆ ನಡೆದಿದೆ. 
 
ಹೌದು, ಹರ್ಯಾಣದ (Haryana) ರಿವಾರಿಯ (Rewari) ಬಲಿಯಾರ್‌ ಖುರ್ದ್‌ ಗ್ರಾಮದ ಮನೆಯೊಂದರಲ್ಲಿ ಸಾಕಿದ್ದ (Pet) ಪಿಟ್‌ ಬುಲ್‌ ನಾಯಿ ಆ ಮನೆಯ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಕಚ್ಚಿ ಗಾಯಗೊಳಿಸಿದೆ. ಈ ಹಿನ್ನೆಲೆ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ಕಚ್ಚಿ ಆಸ್ಪತ್ರೆಗೆ (Hospital) ಸೇರುವಂತೆ ಮಾಡಿದೆ ಈ ಶ್ವಾನ. ಇದರಿಂದ ಮಹಿಳೆ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗೂ, ಆಕೆಯ ಕಾಲು, ಕೈ ಹಾಗೂ ತಲೆಗೆ 50 ಹೊಲಿಗೆ (Stitches) ಹಾಕಲಾಗಿದೆ ಎಂದು ಮಹಿಳೆಯ ಕುಟುಂಬ ಮಾಹಿತಿ ನೀಡಿದೆ. 

ಇದನ್ನು ಓದಿ: ಪಂಜಾಬ್‌ನ ಗುರುದಾಸ್‌ಪುರದಲ್ಲಿ 12 ಜನರ ಮೇಲೆ Pitbull ದಾಳಿ: ಆತ್ಮರಕ್ಷಣೆಗೆ ಶ್ವಾನ ಕೊಂದ ನಿವೃತ್ತ ಸೇನಾಧಿಕಾರಿ

ಅದೃಷ್ಟವಶಾತ್‌ ಆಕೆಯ ಇಬ್ಬರು ಮಕ್ಕಳಿಗೆ ಗಂಭೀರ ಗಾಯಗಳಾಗಿರಲಿಲ್ಲ ಎನ್ನಲಾಗಿದ್ದು, ಅವರನ್ನು ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಮಾಹಿತಿ ನೀಡಿದ ಬಲಿಯಾರ್‌ ಖುರ್ದ್‌ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಮುಖ್ಯಸ್ಥ ಸೂರಜ್‌, ನಾನು ಹಾಗೂ ನನ್ನ ಹೆಂಡತಿ ಮಕ್ಕಳು ಶುಕ್ರವಾರ ಮನೆಗೆ ಹೋದಾಗ ಈ ಘಟನೆ ನಡೆದಿದೆ. ತಮ್ಮ ಪಿಟ್‌ಬುಲ್‌ ನಾಯಿ ನನ್ನ ಹೆಂಡತಿ, ಇಬ್ಬರು ಮಕ್ಕಳ ಮೇಲೆ ದಾಳಿ ಮಾಡಿ ಕಚ್ಚಿ ಹಾಕಿತು ಎಂದು ಹೇಳಿದ್ದಾರೆ. 
  
ನಂತರ, ಮಹಿಳೆ, ಮಕ್ಕಳ ಕೂಗನ್ನು ಕೇಳಿ ನೆರೆಹೊರೆಯವರು ಓಡಿ ಬಂದು ಮಹಿಳೆ ಹಾಗೂ ಮಕ್ಕಳನ್ನು ಪಿಟ್‌ ಬುಲ್‌ ಶ್ವಾನದಿಂದ ರಕ್ಷಿಸಿದರು. ಹಾಗೂ, ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಎಂದೂ ತಿಳಿದುಬಂದಿದೆ. ಪಿಟ್‌ ಬುಲ್‌ ಶ್ವಾನವನ್ನು ಕೋಲಿನಿಂದ ಹಲವಾರು ಬಾರಿ ಹೊಡೆದರೂ ಅದು ನನ್ನ ಹೆಂಡತಿ, ಮಕ್ಕಳನ್ನು ಕಚ್ಚುವುದನ್ನು ನಿಲ್ಲಿಸಲಿಲ್ಲ ಎಂದೂ ಹರ್ಯಾಣದ ರಿವಾರಿಯ ಬಲಿಯಾರ್‌ ಖುರ್ದ್‌ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಮುಖ್ಯಸ್ಥ ಸೂರಜ್‌ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಪಿಟ್‌ಬುಲ್‌ ನಾಯಿಗಳು ಎಷ್ಟು ಅಪಾಯಕಾರಿ? ಇವುಗಳ ಮೇಲೆ ನಿಷೇಧ ಹೇರಬೇಕಾ?

ಇದೇ ರೀತಿ, ಕೆಲ ದಿನಗಳ ಹಿಂದೆ ಪಂಜಾಬ್‌ನ ಗುರುದಾಸ್‌ಪುರದ 5 ಗ್ರಾಮಗಳಲ್ಲಿ 12 ಜನರ ಮೇಲೆ ಪಿಟ್‌ಬುಲ್ ದಾಳಿ ಮಾಡಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದರು. ಟ್ಯಾಂಗೋ ಶಾ ಗ್ರಾಮದಿಂದ ಚುಹಾನ್ ಗ್ರಾಮದವರೆಗೆ ಸುಮಾರು 15 ಕಿ.ಮೀ. ನಷ್ಟು ದೂರ ಹಾದುಹೋದ ನಾಯಿ, ದಾರಿಯಲ್ಲಿ ಸಿಕ್ಕಸಿಕ್ಕ ಜನರ ಮೇಲೆ ದಾಳಿ ಮಾಡಿತು. ಕೊನೆಯಲ್ಲಿ, ನಿವೃತ್ತ ಸೈನಿಕರೊಬ್ಬರು ತಮ್ಮ ಆತ್ಮರಕ್ಷಣೆಗಾಗಿ ಪಿಟ್‌ಬುಲ್‌ ನಾಯಿಯನ್ನು ಕೊಂದಿದ್ದಾರೆ ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: ರಕ್ಕಸನಾದ ಸಾಕು ಪಿಟ್‌ಬುಲ್ ನಾಯಿ, ಒಡತಿಯನ್ನೇ ಕಚ್ಚಿ ಎಳೆದಾಡಿ ಸಾಯಿಸಿತು!

Latest Videos
Follow Us:
Download App:
  • android
  • ios