Asianet Suvarna News Asianet Suvarna News

ರಾಯಚೂರು: ಬಯಲು ಶೌಚಕ್ಕೆ ಹೋದ ಮಹಿಳೆ ಮೇಲೆ ಮಣ್ಣು ಹಾಕಿದ ಜೆಸಿಬಿ ಚಾಲಕ, ಸ್ಥಳದಲ್ಲೇ ಸಾವು..!

ನಿವೇಶನ ಸ್ವಚ್ಚಗೊಳಿಸುತ್ತಿದ್ದ ಜೆಸಿಬಿ ಚಾಲಕನಿಂದ ಅಚಾತುರ್ಯ ನಡೆದಿದೆ. ಖಾಲಿ ನಿವೇಶನದಲ್ಲಿ ಜಾಲಿ ಗಿಡ ಕಸ ಬೆಳೆದಿತ್ತು. ಬಡಾವಣೆ ಕೆಲ ಬಡ ಮಹಿಳೆಯರು ಇಲ್ಲಿ ಬಯಲುಶೌಚಕ್ಕೆ ಹೋಗುತ್ತಿದ್ದರು. ಶೌಚಕ್ಕೆಂದು ಮಹಿಳೆಯ ಮೇಲೆ ಜೆಸಿಬಿಯಿಂದ ಮಣ್ಣು ಸುರಿದಿದ್ದಾರೆ. ಹೀಗಾಗಿ ಉಸಿರಾಟದ ಸಮಸ್ಯೆಯಿಂದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 
 

woman dies due to JCB driver threw mud in raichur grg
Author
First Published Aug 15, 2024, 9:05 AM IST | Last Updated Aug 15, 2024, 9:05 AM IST

ರಾಯಚೂರು(ಆ.15): ಬಯಲು ಶೌಚಕ್ಕೆ ಹೋದ ಮಹಿಳೆಯ ಮೇಲೆ ಜೆಸಿಬಿ ಚಾಲಕ ಮಣ್ಣಿನ ರಾಶಿ ಹಾಕಿದ ಘಟನೆ ನಗರದ ಆಶಾಪುರ ರಸ್ತೆಯಲ್ಲಿನ ಜನತಾ ಕಾಲೋನಿಯಲ್ಲಿ ಇಂದು(ಗುರುವಾರ) ನಡೆದಿದೆ. ಮಣ್ಣು ಹಾಕಿದ ಕಾರಣ ಉಸಿರಾಟದ ಸಮಸ್ಯೆಯಿಂದ ಮಹಿಳೆ ಮೃತಪಟ್ಟಿದ್ದಾರೆ. ತಾಯಮ್ಮ(32) ಘಟನೆಯಲ್ಲಿ ಮೃತಪಟ್ಟ ದುರ್ದೈವಿ ಮಹಿಳೆ.

ನಿವೇಶನ ಸ್ವಚ್ಚಗೊಳಿಸುತ್ತಿದ್ದ ಜೆಸಿಬಿ ಚಾಲಕನಿಂದ ಅಚಾತುರ್ಯ ನಡೆದಿದೆ. ಖಾಲಿ ನಿವೇಶನದಲ್ಲಿ ಜಾಲಿ ಗಿಡ ಕಸ ಬೆಳೆದಿತ್ತು. ಬಡಾವಣೆ ಕೆಲ ಬಡ ಮಹಿಳೆಯರು ಇಲ್ಲಿ ಬಯಲುಶೌಚಕ್ಕೆ ಹೋಗುತ್ತಿದ್ದರು. ಶೌಚಕ್ಕೆಂದು ಮಹಿಳೆಯ ಮೇಲೆ ಜೆಸಿಬಿಯಿಂದ ಮಣ್ಣು ಸುರಿದಿದ್ದಾರೆ. ಹೀಗಾಗಿ ಉಸಿರಾಟದ ಸಮಸ್ಯೆಯಿಂದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಿಂದ ಮೂರು ಮಕ್ಕಳು ತಬ್ಬಲಿಗಳಾಗಿವೆ. 

ರಾಮನಗರ: ಪ್ರೀತಿಗೆ ಪೋಷಕರ ವಿರೋಧ, ಯುವಕ ನೇಣಿಗೆ ಶರಣು, ಚಾಕು ಇರಿದುಕೊಂಡ ಯುವತಿ

ಜೆಸಿಬಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಮರಣೋತ್ತರ ಪರೀಕ್ಷಗಾಗಿ ರಿಮ್ಸ್ ಆಸ್ಪತ್ರೆಗೆ ಶವ ರವಾನೆ ಮಾಡಲಾಗಿದೆ. ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Latest Videos
Follow Us:
Download App:
  • android
  • ios