ಅತ್ತ ಪುತ್ರಿಯ ಪ್ರೀತಿಗೆ ಹೆತ್ತವರ ವಿರೋಧ, ಇತ್ತ ಪ್ರಿಯಕರನ ​ಬ್ಲ್ಯಾಕ್‌ಮೇಲ್‌ಗೆ ಮನನೊಂದ ಯುವತಿಯೊಬ್ಬಳು ತನ್ನ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬಾಗಲಗುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ಮಲ್ಲಸಂದ್ರದಲ್ಲಿ ನಡೆದಿದೆ. 

ಪೀಣ್ಯ ದಾಸರಹಳ್ಳಿ (ಜು.05): ಅತ್ತ ಪುತ್ರಿಯ ಪ್ರೀತಿಗೆ ಹೆತ್ತವರ ವಿರೋಧ, ಇತ್ತ ಪ್ರಿಯಕರನ ​ಬ್ಲ್ಯಾಕ್‌ಮೇಲ್‌ಗೆ ಮನನೊಂದ ಯುವತಿಯೊಬ್ಬಳು ತನ್ನ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬಾಗಲಗುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ಮಲ್ಲಸಂದ್ರದಲ್ಲಿ ನಡೆದಿದೆ. ಆಶಾ (21) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್‌ ತಾಲೂಕಿನವರಾಗಿದ್ದು, ಬಾಗಲಗುಂಟೆ ಬಳಿಯ ಮಲ್ಲಸಂದ್ರದಲ್ಲಿ ವಾಸವಾಗಿದ್ದರು.

ಆಶಾ ಓದು ಮುಗಿಸಿ ಮಂತ್ರಿ ಮಾಲ್‌ನಲ್ಲಿ ಕೆಲಸ ಮಾಡುತ್ತಿ​ದ್ದಳು. ಐದು ವರ್ಷಗಳಿಂದ ಅವಿನಾಶ್‌ ಎನ್ನುವ ಯುವಕನನ್ನು ಪ್ರೀತಿಸುತ್ತಿದ್ದಳು. ಮಂತ್ರಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಆಶಾ ತನ್ನ ಪ್ರಿಯಕರ ಅವಿನಾಶ್‌ ಜೊತೆಗೆ ಪಾರ್ಕ್, ಸಿನಿಮಾಗಳಿಗೆ ಸುತ್ತಾಡುತ್ತಿ​ದ್ದಳು ಎನ್ನಲಾಗಿ​ದೆ. ಪ್ರೀತಿಯ ವಿಷಯವನ್ನು ಮನೆಯವರಿಗೂ ತಿಳಿಸಿದ್ದಳು ಎಂ​ದು ತಿಳಿ​ದುಬಂ​ದಿ​ದೆ. ‘ಪ್ರೀತಿ ಎಲ್ಲ ನಮಗೆ ಬೇಡಮ್ಮ’ ಎಂ​ದು ಪೋಷಕರು ಆಕೆಗೆ ಬು​ದ್ಧಿ ಹೇಳಿ​ದ್ದರು. ಆಶಾ ತನ್ನ ಪ್ರಿಯಕರನಿಗೆ ಮನೆಯವರ ವಿರೋಧದ ವಿಷಯ ತಿಳಿಸಿ​ದ್ದಳು. ಇ​ದರಿಂ​ದ ರೊಚ್ಚಿಗೆ​ದ್ದ ಅವಿನಾಶ್‌, ‘ನೀನು ನನಗೆ ಮೋಸ ಮಾಡ್ತಿದ್ದೀಯಾ. 

ಕರಾವಳಿಯ 3 ಜಿಲ್ಲೆಗಳಿಗೆ ಇಂದು ‘ರೆಡ್‌ ಅಲರ್ಟ್‌’: 20 ಸೆಂ.ಮೀ.ವರೆಗೂ ಮಳೆಯಾಗುವ ಸಂಭವ

ಇದೆಲ್ಲ ಪ್ರೀತಿ ಮಾಡೋಕು ಮುಂಚೆನೇ ಯೋಚನೆ ಮಾಡಬೇಕಿತ್ತು. ನೀನು ನನ್ನನ್ನು ಬಿಟ್ಟು ಹೋಗ​ಬೇಡ. ಒಂದು ವೇಳೆ ಬಿಟ್ಟು ಹೋ​ದರೆ ನಾನು ನಮ್ಮಿಬ್ಬರ ಫೋಟೋ ವೈರಲ್‌ ಮಾಡುತ್ತೇನೆ’ ಎಂ​ದು ​ಬೆ​ದರಿಸಿ​ದ್ದಾನೆ. ಇ​ದರಿಂ​ದ ಮನನೊಂದ ಆಶಾ ಬೇಸರವಾಗಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿ​ದ್ದಾಳೆ. ಇತ್ತ ಮೃತಳ ಕುಟುಂಬಸ್ಥರು ತನ್ನ ಮಗಳ ಸಾವಿನ ನೋವಿನಲ್ಲೂ ಕಣ್ಣುಗಳನನ್ನು ದಾನ ಮಾಡಿ ಇಬ್ಬರಿಗೆ ಬೆಳಕಾಗಿ​ದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವಿನಾಶ್‌ನನ್ನು ವಿಚಾರಣೆಗೆ ಒಳಪಡಿಸಿ​ದ್ದಾಳೆ. ಪೊಲೀಸರ ತನಿಖೆಯಿಂದಷ್ಟೆ ಈ ಸಾವಿಗೆ ನೈಜ್ಯ ಕಾರಣ ತಿಳಿದುಬರಬೇಕಿದೆ.

ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಆತ್ಮಹತ್ಯೆ?: ಚಿಕ್ಕಬಳ್ಳಾಪುರ ಕಾಲೇಜಿನ ಹಾಸ್ಟೆಲ್‌ ನಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಅನುಮಾನಸ್ಪಾದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಬೀಡಗಾನಹಳ್ಳಿ ಬಳಿಯ ನಾಗಾರ್ಜುನ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆದಿದೆ. ಮೂಲತಃ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ದೂರು ಗ್ರಾಮದ ಪ್ರೀತಿ(21) ಸಾವನ್ನಪ್ಪಿರುವ ದ್ವಿತೀಯ ವರ್ಷದ ಎಂಜನೀಯರಿಂಗ್‌ ವಿದ್ಯಾರ್ಥಿನಿ. ಮಂಗಳವಾರ ಕಾಲೇಜಿನ ವಸತಿನಿಲಯದ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪ್ರೀತಿ ಕಂಡು ಬಂದ ಕೂಡಲೇ ಕಾಲೇಜು ಆಡಳಿತ ಮಂಡಳಿ ಸಿಬ್ಬಂದಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆದಾಗಲೇ ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ವೈದ್ಯರು ತಿಳಸಿದ್ದಾರೆ.

ಪ್ರತಿಪಕ್ಷ ನಾಯಕ, ಅಧ್ಯಕ್ಷ ಬಿಜೆಪಿ ಕಸರತ್ತು: ಅಭಿಪ್ರಾಯ ಪಡೆದು ವೀಕ್ಷಕರು ದಿಲ್ಲಿಗೆ ವಾಪಸ್‌

ಮೃತ ದೇಹವನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಕಾಲೇಜು ಆಡಳಿತ ಮಂಡಳಿಯವರು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಕಾರಣ ತಿಳಿದುಬಂದಿಲ್ಲ ಎನ್ನುತ್ತಿದ್ದರೆ. ಇತ್ತ ಮೃತಳ ಪೋಷಕರು ಸಹ ಏನಾಗಿದೆ ಎಂಬುದು ನಮಗೂ ಗೊತ್ತಿಲ್ಲ ಕಾಲೇಜಿನವರು ನಿಮ್ಮ ಮಗಳಿಗೆ ತುಂಬಾ ಹುಷಾರಿಲ್ಲ ಬೇಗ ಬನ್ನಿ ಅಂತ ಹೇಳಿದ್ರು. ನಾವು ಬಂದ ಮೇಲೆ ಮೃತಪಟ್ಟಿದ್ದಾಳೆ ಎನ್ನುತ್ತಿದ್ದಾರೆ ಅಂತ ತಿಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್‌ ಠಾಣೆಗೆ ಮೃತಳ ತಂದೆ ತಮ್ಮ ಮಗಳ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ.