ಹಾವು ಕಡಿತದ ಬಳಿಕ ಎರಡು ದಿನ ಆರೋಗ್ಯವಾಗಿದ್ದ ಮಹಿಳೆ ಮೂರನೇ ದಿನ ಮೃತಪಟ್ಟ ವಿಚಿತ್ರ ಘಟನೆ ಚಿಕ್ಕಮಗಳೂರು ತಾಲೂಕಿನ ಅಂಡುವಾನೆ ಗ್ರಾಮದಲ್ಲಿ ನಡೆದಿದೆ. ಹುಯಿಗೆರೆ ಗ್ರಾಪಂ ವ್ಯಾಪ್ತಿಯ ಅಂಡವಾನೆಯ ಸುಜಾತ (54) ಮೃತ ಮಹಿಳೆ ಸುಜಾತ (42) ಮೃತ ಮಹಿಳೆ  

ಚಿಕ್ಕಮಗಳೂರು (ನ.17): ಹಾವು ಕಡಿತದ ಬಳಿಕ ಎರಡು ದಿನ ಆರೋಗ್ಯವಾಗಿದ್ದ ಮಹಿಳೆ ಮೂರನೇ ದಿನ ಮೃತಪಟ್ಟ ವಿಚಿತ್ರ ಘಟನೆ ಚಿಕ್ಕಮಗಳೂರು ತಾಲೂಕಿನ ಅಂಡುವಾನೆ ಗ್ರಾಮದಲ್ಲಿ ನಡೆದಿದೆ.

ಹುಯಿಗೆರೆ ಗ್ರಾಪಂ ವ್ಯಾಪ್ತಿಯ ಅಂಡವಾನೆಯ ಸುಜಾತ (54) ಮೃತ ಮಹಿಳೆ ಸುಜಾತ (42) ಮೃತ ಮಹಿಳೆ ತಮ್ಮ ಮನೆಯ ಸಮೀಪದ ಕೆಲಸ ಮಾಡುವಾಗ ವಿಷಪೂರಿತ ಹಾವೊಂದು ಕಚ್ಚಿದ್ದು ತಕ್ಷಣ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಕೊಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದರು. ಹಾವು ಕಡಿದ ಬಳಿಕ ಮಹಿಳೆಯ ಪತಿ ವೆಂಕಟೇಶ್ ಗೌಡ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದ. 

ಪುತ್ತೂರು ಮಾಜಿ ಶಾಸಕ ಮಠಂದೂರಿಗೆ ವಿಷಪೂರಿತ ಹಾವು ಕಡಿತ: ಆಸ್ಪತ್ರೆಗೆ ದಾಖಲು

ಚಿಕಿತ್ಸೆ ಪಡೆದುಕೊಂಡ ಮಹಿಳೆ ನಾನು ಚೆನ್ನಾಗಿದ್ದೇನೆ ಏನೂ ಆಗಿಲ್ಲ ಎಂದು ಮನೆಗೆ ಬಂದಿದ್ದಳು. ಚಿಕಿತ್ಸೆ ಬಳಿಕ ಎರಡು ದಿನ ಮನೆಯಲ್ಲಿ ಎಂದಿನಂತೆ ಕೆಲಸ ಮಾಡಿಕೊಂಡು ಒಡಾಡಿಕೊಂಡಿದ್ದಳು. ಬುಧವಾರ ಚಿಕಿತ್ಸೆ ಪಡೆದು ವಾಪಾಸ್ ಮನೆಗೆ ಮರಳಿದ್ದು, ಗುರುವಾರ ಮುಂಜಾನೆ ವೇಳೆ ಸುಜಾತ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿ ಪುನಃ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಪಟ್ಟಣದ ಆಸ್ಪತ್ರೆಗೆ ಕರೆತಂದಿದ್ದು, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.

ಸರ್ಪದೋಷ ಅಂದ್ರೆ ಇದೇನಾ?..ಬಾಲಕನನ್ನು ಬಿಟ್ಟು ಮತ್ಯಾರಿಗೂ ಕಾಣದ ನಾಗಪ್ಪ, 2 ತಿಂಗಳಲ್ಲಿ 9 ಬಾರಿ ಕಚ್ಚಿದ ಹಾವು!

ಆಸ್ಪತ್ರೆಗೆ ಹೋದಾಗಲೂ ಬಿಪಿ, ಶುಗರ್ ಎಲ್ಲವೂ ನಾರ್ಮಲ್ ಇತ್ತು. ಆದರೆ ಕಳೆದ ರಾತ್ರಿ ಇದ್ದಕ್ಕಿದ್ದಂತೆ ಸುಸ್ತು ಎಂದು ಆಸ್ಪತ್ರೆಗೆ ಹೋಗಿದ್ದ ಮಹಿಳೆ. ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ. ಹಾವು ಕಡಿತದಿಂದಲೇ ಸಾವನ್ನಪ್ಪಿದ್ದಾಳೆ ಎಂದು ಪತಿಯಿಂದ ದೂರು ನೀಡಿದ್ದಾರೆ. ಮೃತರಿಗೆ ಓರ್ವ ಪುತ್ರಿ ಇದ್ದಾಳೆ.

ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲು