34 ವರ್ಷದ ಮಹಿಳೆ ಮೂವರು ಮಕ್ಕಳು ಹಾಗೂ ತಂಗಿಯೊಂದಿಗೆ ರೈಲು ನಿಲ್ದಾಣಕ್ಕೆ ಆಗಮಿಸಿದ್ದಾರೆ. ಭಾರಿ ಮಳೆಯಿಂದ ನೀರು ತುಂಬಿದ ನಿಲ್ದಾಣದ ಆವರಣ ದಾಟುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಮಹಿಳೆ ಮೃತಪಟ್ಟಿದ್ದಾರೆ. ಇದೀಗ ನಿಲ್ದಾಣ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. 

ನವದೆಹಲಿ(ಜೂ.25) ರೈಲು ನಿಲ್ದಾಣದ ಅಧಿಕಾರಿಗಳ ನಿರ್ಲಕ್ಷ್ಯದಿಂದ 34 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಭಾರಿ ಮಳೆಯಿಂದ ನಿಲ್ದಾಣ ಸಂಪೂರ್ಣ ನೀರಿನಿಂದ ತುಂಬಿದೆ. ನೀರು ದಾಟುತ್ತಿದ್ದ ವೇಳೆ ಕೆಳಕ್ಕೆ ಬೀಳದಿರಲು ವಿದ್ಯುತ್ ಕಂಬ ಹಿಡಿದಿದ್ದಾರೆ. ಇದೇ ವೇಳೆ ವಿದ್ಯುತ್ ಪ್ರವಹಿಸಿ ಮಹಿಳೆ ಮೃತಪಟ್ಟ ಘಟನೆ ನವದೆಹಲಿಯ ರೈಲು ನಿಲ್ದಾಣದಲ್ಲಿ ನಡೆದಿದೆ. ತನ್ನ ಮೂವರು ಮಕ್ಕಳು ಹಾಗೂ ತಂಗಿಯೊಂದಿಗೆ ರೈಲು ನಿಲ್ದಾಣಕ್ಕೆ ಆಗಮಿಸಿದ ವೇಳೆ ಈ ದುರಂತ ನಡೆದಿದೆ. ಇದೀಗ ಮೃತ ಮಹಿಳೆ ತಂಗಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ದೂರು ನೀಡಿದ್ದಾರೆ. 

ನವದೆಹಲಿ ರೈಲು ನಿಲ್ದಾಣದಿಂದ ಭೋಪಾಲ್‌ಗೆ ತೆರಳಲು 34 ವರ್ಷದ ಸಾಕ್ಷಿ ಅಹುಜಾ ಆಗಮಿಸಿದ್ದಾರೆ. ತನ್ನ ಮೂವರು ಮಕ್ಕಳು ಹಾಗೂ ತಂಗಿಯೊಂದಿಗೆ ರೈಲು ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ವೇಳೆ ಭಾರಿ ಮಳೆ ಸುರಿದಿದೆ. ರೈಲು ನಿಲ್ದಾಣದ ಹೊರಭಾಗದ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ರಸ್ತೆ ದಾಟುವಾಗ ಪಕ್ಕದಲ್ಲಿದದ್ದ ವಿದ್ಯುತ್ ಕಂಬವನ್ನು ಸಹಾಯಕ್ಕಾಗಿ ಹಿಡಿದಿದ್ದಾರೆ.

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ, ಟ್ರಾನ್ಸ್‌ಫಾರ್ಮರ್‌ಗೆ ಲೈನ್‌ಮ್ಯಾನ್‌ ಬಲಿ

ಆದರೆ ಅಸಮರ್ಪಕ ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಹಿಸಿದೆ. ವಿದ್ಯುತ್ ಕಂಬ ಹಿಡಿದ ಸಾಕ್ಷಿ ಅಹುಜಾರನ್ನು ರಕ್ಷಿಸಲು ಸ್ಥಳೀಯರು ಧಾವಿಸಿದ್ದಾರೆ. ಆದರೆ ವಿದ್ಯುತ್ ಪ್ರವಹಿಸುತ್ತಿರುವ ಕಾರಣ ತಕ್ಷಣ ಸಾಧ್ಯವಾಗಲಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲೇ ಸಾಕ್ಷಿ ಅಹುಜಾ ಮೃತಪಟ್ಟಿದ್ದಾರೆ.

ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಸಾಕ್ಷಿ ಅಹುಜಾ ತಂಗಿ ದೂರು ನೀಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಕ್ಕ ಮೃತಪಟ್ಟಿದ್ದಾರೆ ಎಂದು ದೂರು ನೀಡಿದ್ದಾರೆ. ವಿದ್ಯುತ್ ಕಂಬದ ನಿರ್ವಹಣೆ ಸರಿಯಾಗಿ ಮಾಡಿಲ್ಲ. ಹೀಗಾಗಿ ವಿದ್ಯುತ್ ಪ್ರವಹಿಸಿದೆ. ವಿದ್ಯುತ್ ಕಂಬದ ಲೋಪವನ್ನು ಸರಿ ಮಾಡಿಲ್ಲ. ಹೀಗಾಗಿ ಮಹಿಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕರೆಂಟ್ ಶಾಕ್ ಹೊಡದರೆ ಬೆಚ್ಚಿ ಬೀಳಬೇಡಿ, ಜೀವ ಉಳಿಸಲು ಹೀಗ್ ಮಾಡಿ!

ದೆಹಲಿ ರೈಲ ನಿಲ್ದಾಣ ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಂದ ಸುದ್ದಿಯಾಗುತ್ತಿದೆ. ಇತ್ತೀಚೆಗೆ 504 ಅಕ್ರಮ ಚಿನ್ನದ ಬಿಸ್ಕತ್‌ ಪತ್ತೆ ಹಚ್ಚಿದ ಘಟನೆಯೂ ನಡೆದಿತ್ತು. ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬೃಹತ್‌ ಚಿನ್ನ ಕಳ್ಳ ಸಾಗಣೆ ಜಾಲವೊಂದನ್ನು ದೆಹಲಿ ರೈಲು ನಿಲ್ದಾಣದಲ್ಲಿ ಭೇದಿಸಿದ್ದರು. ಅಸ್ಸಾಂನ ದಿಬ್ರುಗಢದಿಂದ ನವದೆಹಲಿಗೆ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಂದಿಳಿದ 8 ಮಂದಿಯ ಬಳಿ 504 ಚಿನ್ನದ ಬಿಸ್ಕತ್‌ಗಳನ್ನು ವಶಪಡಿಸಿಕೊಂಡಿದ್ದಾರೆ. 83.6 ಕೆ.ಜಿ. ತೂಕದ ಈ ಬಿಸ್ಕತ್‌ಗಳ ಮೌಲ್ಯ 43 ಕೋಟಿ ರು. ಮ್ಯಾನ್ಮಾರ್‌ನಿಂದ ಭಾರತಕ್ಕೆ ಈ ಚಿನ್ನವನ್ನು ಸಾಗಣೆ ಮಾಡಲಾಗಿತ್ತು. ಇದಕ್ಕಾಗಿ ವಿಶೇಷ ವಿನ್ಯಾಸದ ಧಿರಿಸನ್ನು 8 ಮಂದಿ ಧರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿನ್ನ ಕಳ್ಳ ಸಾಗಣೆಗಾಗಿ ಅಮಾಯಕರನ್ನು ಗುರುತಿಸಿ ಅವರನ್ನು ಸಾಗಣೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.