Asianet Suvarna News Asianet Suvarna News

ತುಮಕೂರು: ಕಬ್ಬಿಣದ ಪೆಟ್ಟಿಗೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ..!

ಕಬ್ಬಿಣದ ಪೆಟ್ಟಿಗೆಯಲ್ಲಿ ಶವವನ್ನಿಟ್ಟು ಗುಂಡಿಯಲ್ಲಿ ದುಷ್ಕರ್ಮಿಗಳು ಮುಚ್ಚಿದ್ದರು. ದುಷ್ಕರ್ಮಿಗಳು ಮಹಿಳೆಯನ್ನ ಕೊಲೆ ಮಾಡಿ ಬೇರೆ ಕಡೆಯಿಂದ ಶವವನ್ನ ತಂದು ಯಾರಿಗೂ ಗೊತ್ತಾಗದಂತೆ ಕಬ್ಬಿಣದ ಪೆಟ್ಟಿಗೆಯಲ್ಲಿ ಶವವನ್ನಿಟ್ಟು ಗುಂಡಿಯಲ್ಲಿ ಮುಚ್ಚಿದ್ದರು. ಅರ್ಧಂಬರ್ಧ ಶವವನ್ನ ಮುಚ್ಚಿಡಲಾಗಿತ್ತು.

woman deadbody found in tumakuru grg
Author
First Published Aug 29, 2024, 5:31 PM IST | Last Updated Aug 29, 2024, 5:31 PM IST

ತುಮಕೂರು(ಆ.29): ಕೊಲೆಯಾದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾದ ಘಟನೆ ತುಮಕೂರು ತಾಲೂಕಿನ ಹೆಬ್ಬೂರಿನ ನಾರಾಯಣ ಕೆರೆ ಬಳಿಯ ಫಾರೆಸ್ಟ್‌ನಲ್ಲಿ ಇಂದು(ಗುರುವಾರ) ನಡೆದಿದೆ. ಸುಮಾರು 40 ವರ್ಷದ ಮಹಿಳೆ ಶವ ಎಂದು ಗುರುತಿಸಲಾಗಿದೆ.

ಕಬ್ಬಿಣದ ಪೆಟ್ಟಿಗೆಯಲ್ಲಿ ಶವವನ್ನಿಟ್ಟು ಗುಂಡಿಯಲ್ಲಿ ದುಷ್ಕರ್ಮಿಗಳು ಮುಚ್ಚಿದ್ದರು. ದುಷ್ಕರ್ಮಿಗಳು ಮಹಿಳೆಯನ್ನ ಕೊಲೆ ಮಾಡಿ ಬೇರೆ ಕಡೆಯಿಂದ ಶವವನ್ನ ತಂದು ಯಾರಿಗೂ ಗೊತ್ತಾಗದಂತೆ ಕಬ್ಬಿಣದ ಪೆಟ್ಟಿಗೆಯಲ್ಲಿ ಶವವನ್ನಿಟ್ಟು ಗುಂಡಿಯಲ್ಲಿ ಮುಚ್ಚಿದ್ದರು. ಅರ್ಧಂಬರ್ಧ ಶವವನ್ನ ಮುಚ್ಚಿಡಲಾಗಿತ್ತು.

Bengaluru: ಮನೆ ಮಾರಾಟಕ್ಕೆ ಒಪ್ಪದ ಎರಡನೇ ಪತ್ನಿಯ ಕೊಂದು, ಕತೆ ಕಟ್ಟಿದ ಗಂಡ!

ಇಂದು ಕುರಿಗಾಯಿಗಳು ಕುರಿ ಮೇಯಿಸುವಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೆಬ್ಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಮೃತ ಮಹಿಳೆಯ ಹೆಸರು, ವಿಳಾಸ ಪತ್ತೆಯಾಗಿಲ್ಲ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು  ತನಿಖೆಯನ್ನ ಮುಂದುವರಿಸಿದ್ದಾರೆ. 

Latest Videos
Follow Us:
Download App:
  • android
  • ios