ಉಡುಪಿ(ಸೆ.19):  ಇನ್ಟಾಗ್ರಾಮ್‌ನಲ್ಲಿ ಪರಿಚಯವಾದ ಮಹಿಳೆಯಿಂದ ಬೈಂದೂರಿನ ನಾಗರಾಜ ಪೂಜಾರಿ ಎಂಬವರು 58,800 ರು.ಗಳನ್ನು ಕಳೆದುಕೊಂಡು ಮೋಸಹೋಗಿದ್ದಾರೆ.

ಬೆರ್ನಿಟ್‌ ವಿನ್ಸೆಂಟ್‌ ಎಂಬವರು 15-20 ದಿನಗಳ ಹಿಂದೆ ತಾನು ಲಂಡನ್ನಿನ ವಿಶ್ವ ಆರೋಗ್ಯ ಸಂಸ್ಥೆಯ ಸಿಬ್ಬಂದಿ ಎಂದು ನಾಗರಾಜ್‌ ಅವರಿಗೆ ಇನ್ಟಾಗ್ರಾಮ್‌ ನ ಮೂಲಕ ಪರಿಚಯಿಸಿಕೊಂಡಿದ್ದರು. ನಂತರ ಚಾಟಿಂಗ್‌ನಲ್ಲಿ ತಾನು ಇಂಡಿಯಾಕ್ಕೆ ಬಂದು ಹಣ ಹೂಡುತ್ತಿರುವುದಾಗಿ ಹೇಳಿದ್ದರು.

ಕೆಎಸ್ಸಾರ್ಟಿಸಿ ಹುಡುಗನಿಗೆ ಇಲಾಖೆಯಿಂದ ಬಂಪರ್ ಆಫರ್

ಸೆ. 15ರಂದು ನಾಗರಾಜ ಅವರು ಮೊಬೈಲಿಗೆ ಕರೆ ಮಾಡಿದ ವ್ಯಕ್ತಿ ತಾನು ದೆಹಲಿ ಏರ್‌ ಪೋರ್ಟ್‌ ಅಧಿಕಾರಿ ಎಂದು ಹೇಳಿ ಬೆರ್ನಿಟ್‌ ವಿನ್ಸೆಂಟ್‌ ದೆಹಲಿ ಏರ್ಪೋರ್ಟ್‌ಗೆ ಬಂದಿರುವುದಾಗಿಯೂ, ಅವರಲ್ಲಿರುವ ಡಿಡಿಯ ರಿಜಿಸ್ಪ್ರೇಶನ್‌ ಬಾಬ್ತು 58, 800 ರು.ಗಳನ್ನು ಪಾವತಿಸುವಂತೆ ದೆಹಲಿಯ ಐಡಿಬಿಐ ಬ್ಯಾಂಕ್‌ ಖಾತೆ ನಂಬರ್‌ ತಿಳಿಸಿದ್ದು, ನಾಗರಾಜ್‌ ಅವರು ನಂಬಿ ಪಾವತಿ ಮಾಡಿದ್ದರು. ನಂತರ ಪುನಃ ಆ ವ್ಯಕ್ತಿ ಕರೆ ಮಾಡಿ, ನಿಮ್ಮ ಸ್ನೇಹಿತೆಯ ಕೋವಿಡ್‌ ಟೆಸ್ಟ್‌ಗೆ 45,500 ರು. ನೀಡುವಂತೆ ಹೇಳಿದಾಗ, ನಾಗರಾಜ್‌ ಅವರಿಗೆ ಸಂಶಯ ಬಂದು, ಇದೀಗ ಉಡುಪಿ ಸೆನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.