ಸ್ವಾಮೀಜಿ ಜತೆ ಇರೋ ಫೋಟೋ ಪೋಸ್ಟ್: ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷರ ಮೇಲೆ ಹಲ್ಲೆಗೆ ಮುಂದಾದ ಮಹಿಳೆ
ಚಿತ್ರದುರ್ಗದ ಸ್ವಾಮೀಜಿಯೊಬ್ಬರ ಬಗ್ಗೆ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಮೌರ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಚಾರಕ್ಕೆ ಹಲ್ಲೆಗೆ ಯತ್ನ
ಬೆಂಗಳೂರು(ಡಿ.18): ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಮೌರ್ಯ ವಿರುದ್ಧ ಮಾನಹಾನಿ ಆರೋಪವೊಂದು ಕೇಳಿ ಬಂದಿದೆ. ಇಬ್ಬರು ಮಹಿಳೆಯರು ಮತ್ತು ನಾಲ್ಕೈದು ಜನರಿಂದ ವಾಗ್ವಾದ ಮಾಡಿ ವೆಂಕಟೇಶ್ ಮೌರ್ಯ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಸದಾಶಿವನಗರ ಠಾಣೆ ಮುಂದೆ ನಡೆದಿದೆ.
ಏನಿದು ಪ್ರಕರಣ?
ಚಿತ್ರದುರ್ಗದ ಸ್ವಾಮೀಜಿಯೊಬ್ಬರ ಬಗ್ಗೆ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಮೌರ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಚಾರಕ್ಕೆ ಹಲ್ಲೆಗೆ ಯತ್ನಿಸಲಾಗಿದೆ. ಸ್ವಾಮೀಜಿ ಕಡೆಯವರು ಬಂದು ವೆಂಕಟೇಶ್ ಮೌರ್ಯ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಅಂತ ಆರೋಪಿಸಲಾಗಿದೆ. ಸುಳ್ಳು ಆರೋಪದೊಂದಿಗೆ ಬಂದು ನನ್ನೆ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಅಂತ ವೆಂಕಟೇಶ್ ಮೌರ್ಯ ಅವರು ಕೂಡ ಆರೋಪಿಸಿದ್ದಾರೆ. ಸದ್ಯ ಇಬ್ಬರ ಕಡೆಯಿಂದಲೂ ಸದಾಶಿವನಗರ ಠಾಣಗೆ ದೂರು ದಾಖಲಾಗಿವೆ. ದೂರಿನ ಮೇರೆಗೆ ಪೊಲೀಸರು ಈಗಾಗಲೇ ಮಹಿಳೆಯರು ಮತ್ತು ವೆಂಕಟೇಶ್ ಮೌರ್ಯನನ್ನ ಠಾಣೆಗೆ ಕರೆದೊಯ್ದಿದ್ದಾರೆ.
ಮನೆ ಕಳ್ಳತನಕ್ಕೆ ಬಂದವನಿಗೆ ಗುಂಡು ಹಾರಿಸಿದ ಮಾಲೀಕ
ದಾಳಿ ಮಾಡಿರೋ ಮಹಿಳೆ ಮತ್ತು ಪುರುಷರ ವಿರುದ್ಧ ವೆಂಕಟೇಶ್ ದೂರು ನೀಡಿದ್ದಾರೆ. ಸುಳ್ಳು ಆರೋಪ ಮಾಡಿ ಮಾನಹಾನಿ ಮಾಡಿರೋದಾಗಿ ವೆಂಕಟೇಶ್ ದೂರು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ದೂರು ನೀಡಿದ ಮಹಿಳೆ, ಸ್ವಾಮೀಜಿವೊಬ್ಬರು ನನಗೆ ಕೇಕ್ ತಿನ್ನಿಸೋ ಫೋಟೋ ತೆಗೆದುಕೊಂಡು ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಮೌರ್ಯ ಪೋಸ್ಟ್ ಮಾಡಿದ್ರು, ಅವರ ಜೊತೆ ಲಿಂಕ್ ಇರೋತರ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಅದನ್ನ ನಮ್ಮ ಸಮುದಾಯದವ್ರಿರೋ ಗ್ರೂಪ್‌ಗಳಲ್ಲಿ ಶೇರ್ ಮಾಡಿ ನನ್ನ ಮರ್ಯಾದೆ ತೆಗೆದಿದ್ದಾರೆ. ಇದರಿಂದ ನನ್ನ ಗಂಡ ನನ್ನ ಜೊತೆ ಜಗಳ ಆಡ್ತಿದ್ದಾರೆ. ಇದನ್ನ ಕೇಳೋಕೆ ಹೋಗಿದ್ದಕ್ಕೆ ನಮ್ಮ ಮೇಲೆನೇ ಹಲ್ಲೆಗೆ ಬಂದಿದ್ದಾರೆ. ಹೆಣ್ಣು ಮಕ್ಕಳು ಅಂತಾ ನೋಡದೆ ನಮ್ಮ ಮೇಲೆ ಹಲ್ಲೆ ಮಾಡೋಕೆ ಮುಂದಾಗಿದ್ರು ಅಂತ ದೂರಿದ್ದಾರೆ.
ಬೆಂಗಳೂರು: 50,000 ಎಂದು ಪಾರ್ಲೆಜಿ ಬಿಸ್ಕತ್ ಪ್ಯಾಕ್ ನೀಡಿ ವಂಚಿಸಿದ ಭೂಪ..!
ಸದಾಶಿವನಗರ ಠಾಣೆ ಮುಂದೆ ಹೈಡ್ರಾಮ
ಈ ಸಂಬಂಧ ಮಹಿಳೆಯರು, ವೆಂಕಟೇಶ್ ಮೌರ್ಯ ಪರ ವಕೀಲರ ನಡುವೆ ವಾಗ್ವಾದ ನಡೆದು ಸದಾಶಿವನಗರ ಠಾಣೆ ಮುಂದೆ ದೊಡ್ಡ ಹೈಡ್ರಾಮವೇ ನಡೆದಿದೆ. ವಕೀಲರಿಗೆ ತರಾಟೆ ತೆಗೆದುಕೊಂಡ ಮಹಿಳೆಯರು, ಅಂತವನಿಗೆ ಸಪೋರ್ಟ್ ಮಾಡ್ತಿದೀರ, ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಈ ರೀತಿ ಆದ್ರೆ ಸುಮ್ನಿರ್ತೀರಾ?, ಅಂತವನಿಗೆ ಬುದ್ದಿ ಹೇಳೋದು ಬಿಟ್ಟು ಈ ರೀತಿ ಸಪೋರ್ಟ್ ಮಾಡೋಕೆ ಬಂದಿದ್ದೀರಾ..?, ಲಾಯರ್ ಆಗಿ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸೋದು ಬಿಟ್ಟು ಈ ರೀತಿ ಅನ್ಯಾಯ ಮಾಡ್ತಿದ್ದೀರಾ? ಅಂತ ಠಾಣೆ ಮುಂದೆಯೇ ವಕೀಲರಿಗೆ ತರಾಟೆಗೆ ತೆಗೆದುಕೊಂಡ ದೂರುದಾರ ಮಹಿಳೆ.
ಎಸ್‌ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಮತ್ತು ತಮಿಳುನಾಡು ಬಿಜೆಪಿ ಎಸ್‌ಸಿ ಮೋರ್ಚಾ ಉಸ್ತುವಾರಿ ಆಗಿರುವ ವೆಂಕಟೇಶ್ ಮೌರ್ಯ ಪರ ಮಾತನಾಡಿದ ವಕೀಲ ಜಗನ್ನಾಥ ಅವರು, ವೆಂಕಟೇಶ್ ಅವ್ರ ಏಳಿಗೆ ಸಹಿಸಲಾಗದೆ ಈ ರೀತಿ ಮಾಡಿದ್ದಾರೆ, ವೆಂಕಟೇಶ್ ಪೋಸ್ಟ್ ಮಾಡಿದ್ದು ನಿಜ, ಆದ್ರೆ ತಪ್ಪು ಅಂತಾ ಗೊತ್ತಾದ ಮೇಲೆ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಇವ್ರಿಗೆ ಏನೇ ನೋವಾದ್ರೂ ಕಾನೂನು ಮೂಲಕ ಬರ್ಬೋದಿತ್ತು, ಪೊಲೀಸರ ಬಳಿ ಹೋಗ್ಬೋದಿತ್ತು, ಆದ್ರೆ ಏಕಾ ಏಕಿ ಬಂದು ಹಲ್ಲೆಗೆ ಮುಂದಾಗಿದ್ದಾರೆ. ಈಗ ಅವರ ವಿರುದ್ಧವೂ ಕಂಪ್ಲೆಂಟ್ ಕೊಟ್ಟಿದೀವಿ ಅಂತ ತಿಳಿಸಿದ್ದಾರೆ.