ಬೆಂಗಳೂರು(ನ.01): ತನ್ನ ಮನೆ ಬಾಡಿಗೆದಾರರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಮಹಿಳೆಯೊಬ್ಬರನ್ನು ರಾಜಗೋಪಾಲ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೆಗ್ಗನಹಳ್ಳಿ ಮಾರುತಿ ನಗರದ ಮಹಾಲಕ್ಷ್ಮೀ ಬಂಧಿತಳಾಗಿದ್ದು, ಮನೆ ಬಾಡಿಗೆ ವಿಚಾರವಾಗಿ ಪೂರ್ಣಿಮಾ ಮೇಲೆ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಿದ್ದಳು. ಈ ಬಗ್ಗೆ ಸಂತಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಕೊಪ್ಪಳ: ಕೊಲೆ ಪ್ರಕ​ರಣ ಭೇದಿಸುವ ನೆಪ​ದಲ್ಲಿ ಅಮಾ​ಯ​ಕ​ರಿಗೆ ಥಳಿ​ತ?

ಮಹಾಲಕ್ಷೀ ಮನೆಯಲ್ಲಿ ನೆಲೆಸಿದ್ದ ಪೂರ್ಣಿಮಾ ದಂಪತಿ, ಮಾಲೀಕಳಿಗೆ ಮಾಸಿಕ 5,500 ಬಾಡಿಗೆ ಪಾವತಿಸುತ್ತಿದ್ದರು. ಆದರೆ ಲಾಕ್‌ ಡೌನ್‌ ವೇಳೆ ಕೆಲಸ ಕಳೆದುಕೊಂಡ ಕಾರಣಕ್ಕೆ ಎರಡು ತಿಂಗಳು ಬಾಡಿಗೆ ಬಾಕಿ ಉಳಿಸಿಕೊಂಡಿದ್ದರು. ಈ ವಿಚಾರಕ್ಕೆ ಸಂತ್ರಸ್ತೆ ಮೇಲೆ ಮಹಾಲಕ್ಷೀ ಗಲಾಟೆ ಮಾಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.