ಬೆಂಗಳೂರು: ಗುದದ್ವಾರದಲ್ಲಿ ಅಕ್ರಮ ಚಿನ್ನ ಸಾಗಾಟ, ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಮಹಿಳೆ ಅರೆಸ್ಟ್
ಮಲೇಷ್ಯಾದ ಕೌಲಾಲಂಪುರದಿಂದ ಆಗಮಿಸಿದ ಮಹಿಳೆ 30ಕ್ಕೂ ಲಕ್ಷ ಮೌಲ್ಯದ 578 ಗ್ರಾಂ ಚಿನ್ನವನ್ನು ಗುದದ್ವಾರದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದು ಪತ್ತೆಯಾಗಿದೆ. ಮಹಿಳೆಯ ಚಲನವಲನಗಳನ್ನು ಗಮನಿಸಿದಾಗ ಅನುಮಾನ ಗೊಂಡ ಕಸ್ಟಮ್ಸ್ ಅಧಿಕಾರಿಗಳು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆ.
ವರದಿ- ರವಿಕುಮಾರ್.ವಿ, ಏಷ್ಯಾನೆಟ್ ಸುವರ್ಣ ನ್ಯೂಸ್
ದೇವನಹಳ್ಳಿ(ಅ.24): ಕೆಂಪೇಗೌಡ ಏರ್‌ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕೋಟ್ಯಂತರ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಮಲೇಷ್ಯಾ, ಕುವೈತ್, ಕೊಲಂಬೋ ನಗರಗಳಿಂದ ಆಗಮಿಸಿದ್ದ ಪ್ರಯಾಣಿಕರನ್ನು ಪತ್ತೆ ಹಚ್ಚಿ ಪರಿಶೀಲಿಸಿದಾಗ ಅಪಾರ ಪ್ರಮಾಣದ ಚಿನ್ನ ಸಿಕ್ಕಿದೆ. ಕಳ್ಳರು ಚಾಪೆ ಕೆಳಗೆ ತೂರಿದರೆ, ಕಸ್ಟಮ್ಸ್ ಅಧಿಕಾರಿಗಳು ರಂಗೋಲಿ ಕೆಳಗಡೆ ತೂರಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿದ್ದಾರೆ ಈ ಸಂಬಂಧ ಇಬ್ಬರನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.
ಬ್ಲೌಸ್ ಪೀಸ್‌ನಲ್ಲಿ ಚಿನ್ನ ಸಾಗಾಟ
ಹೌದು, ಕೌಲಾಲಂಪುರದಿಂದ ಆಗಮಿಸಿದ ಮಹಿಳೆ ಬ್ಲೌಸ್ ಪೀಸ್‌ನಲ್ಲಿ ಚಿನ್ನದ ಪೇಸ್ಟ್‌ಅನ್ನು ಅಂಟಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದು, ಏರ್‌ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. 17 ಲಕ್ಷ 300 ಗ್ರಾಂ ಚಿನ್ನದ ಪೇಸ್ಟನ್ನು ಬ್ಲೌಸ್ ಪೀಸ್‌ನಲ್ಲಿ ಅಂಟಿಸಿಕೊಂಡು ಬರಲಾಗಿತ್ತು.
ತುಮಕೂರಿನಲ್ಲಿ ರೌಡಿಶೀಟರ್ ಪೊಲಾರ್ಡ್ ಬರ್ಬರ ಹತ್ಯೆ
ಡ್ರೈ ಫ್ರೂಟ್ಸ್‌ನಲ್ಲಿ ಚಿನ್ನ ಮರೆಮಾಚಿ ಸಾಗಾಟ
ಕುವೈತ್‌ನಿಂದ ಆಗಮಿಸಿದ ಮಹಿಳೆ ಡ್ರೈ ಫ್ರೂಟ್ ಪಾಕೆಟ್‌ನಲ್ಲಿ ಸುಮಾರು 15 ಲಕ್ಷ ಮೌಲ್ಯದ ಚಿನ್ನದ ತುಂಡುಗಳನ್ನು ಮಿಕ್ಸ್ ಮಾಡಿಕೊಂಡು ಬಂದಿದ್ದಾರೆ. ಆಕೆಯ ಬ್ಯಾಗನ್ನು ಪರಿಶೀಲಿಸಿದಾಗ ಈ ಪಾಕೆಟ್ ನಲ್ಲಿ ಚಿನ್ನದ ತುಂಡುಗಳು ಇರುವುದು ಪತ್ತೆಯಾಗಿದೆ.
ಗುದದ್ವಾರದಲ್ಲಿ ಅರ್ಧ ಕೆಜಿ ಚಿನ್ನ ಸಾಗಾಟ
ಮಲೇಷ್ಯಾದ ಕೌಲಾಲಂಪುರದಿಂದ ಆಗಮಿಸಿದ ಮಹಿಳೆ 30ಕ್ಕೂ ಲಕ್ಷ ಮೌಲ್ಯದ 578 ಗ್ರಾಂ ಚಿನ್ನವನ್ನು ಗುದದ್ವಾರದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದು ಪತ್ತೆಯಾಗಿದೆ. ಮಹಿಳೆಯ ಚಲನವಲನಗಳನ್ನು ಗಮನಿಸಿದಾಗ ಅನುಮಾನ ಗೊಂಡ ಕಸ್ಟಮ್ಸ್ ಅಧಿಕಾರಿಗಳು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.