ಚಿಕ್ಕಮ್ಮನ ಮನೆಯನ್ನೇ ದರೋಡೆ ಮಾಡಿದ ಮಗಳು/ ಕೊರೋನಾ ಲಸಿಕೆ ಹೆಸರಿನಲ್ಲಿ ನಿದ್ರೆ ಔಷಧಿ/ ನಿಮಗೆ ಎಲ್ಲರಿಗಿಂತ ಮೊದಲು ಲಸಿಕೆ ನೀಡುತ್ತೇನೆ ಎಂದು ನಂಬಿಸಿದ್ದಳು/ ಬೆಳಗ್ಗೆ ಎಚ್ಚರಗೊಂಡು ನೋಡಿದಾಗ ದರೋಡೆ ಬೆಳಕಿಗೆ
ಕೊಯಂಬತ್ತೂರು(ಮಾ. 14) ತಮಿಳುನಾಡಿನಲ್ಲಿ ಒಂದು ವಿಚಿತ್ರ ದರೋಡೆ ಪ್ರಕರಣ ವರದಿಯಾಗಿದೆ. ಮಹಿಳೆಯೊಬ್ಬಳು ತನ್ನ ಚಿಕ್ಕಮ್ಮ ಮತ್ತು ಆಕೆಯ ಕುಟುಂಬದವರಿಗೆ ಕೊರೋನಾ ಲಸಿಕೆ ಹೆಸರಿನಲ್ಲಿ ಮತ್ತು ಬರುವ ಔಷಧಿ ಚುಚ್ಚಿ ಮನೆ ದರೋಡೆ ಮಾಡಿದ್ದಾಳೆ.
26 ವರ್ಷದ ಮಹಿಳೆ 'ನಕಲಿ' ಲಸಿಕೆ ನೀಡಿ 19 ಸವರನ್ ಚಿನ್ನ ತೆಗೆದುಕೊಂಡು ಪರಾರಿಯಾಗಿದ್ದು ಬಂಧಿಸಲಾಗಿದೆ. ಆರೋಪಿ ಮಹಿಳೆಯನ್ನು ವಿ ಸತ್ಯಪ್ರಿಯ ಎಂದು ಗುರುತಿಸಲಾಗಿದೆ. ಸತ್ಯಪ್ರಿಯ ಪೆರಂಬಲೂರು ಜಿಲ್ಲೆಯ ಕುನ್ನಂ ತಾಲೂಕಿನ ಕೀಜೀಕುಡಿಕಾಡು ಗ್ರಾಮದ ನಿವಾಸಿ.
ಆಟೋದಲ್ಲಿ ಬಂದವರು ಯುವತಿ ಐಫೋನ್ ಎಗರಿಸಿದ್ರು; ವಿಡಿಯೋ
ಆರೋಪಿ ಮಹಿಳೆ ಗುರುವಾರ ಆನ್‌ಲೈನ್ ಮಾರ್ಕೆಟಿಂಗ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕಮ್ಮ ಕೆ ರಸತಿ ಮನೆಗೆ ಬಂದಿದ್ದಾಳೆ. ನಾನು ಕೊರೋನಾ ಲಸಿಕೆ ಹಂಚಿಕೆ ನೋಡಿಕೊಳ್ಳುತ್ತಿದ್ದು ನಿಮಗೆ ಎಲ್ಲರಿಗಿಂತ ಮೊದಲೇ ಲಸಿಕೆ ನೀಡುತ್ತೇನೆ ಎಂದು ನಂಬಿಸಿ ಮತ್ತು ಬರುವ ಔಷಧಿ ಚುಚ್ಚಿದ್ದಾಳೆ. ಚಿಕ್ಕಮ್ಮ ಮಾತ್ರವಲ್ಲದೆ ಅವಳ ಪತಿ ಮತ್ತು ಹೆಣ್ಣುಮಕ್ಕಳಿಗೆ ನೀಡಿದ್ದಾಳೆ. ಕಡ್ಡಲೂರಿನ ರಾಮನಾಥಂ ಬಳಿಯ ಲಕ್ಕೋರ್ ಗ್ರಾಮದ ಮನೆಯಲ್ಲಿ ಇದೆಲ್ಲ ನಡೆದಿದೆ. ಇದಾದ ಮೇಲೆ ಕುಟುಂಬದ ಎಲ್ಲರೂ ಪ್ರಜ್ಞಾಹೀನರಾಗಿದ್ದಾರೆ.
ಮರುದಿನ ಬೆಳಗ್ಗೆ ಕುಟುಂಬದರು ಎಚ್ಚರಗೊಂಡು ನೋಡಿದಾಗ 10 ಸವರಿನ್ ಮಂಗಳಸೂತ್ರ ಸೇರಿದಂತೆ ಎಲ್ಲ ಚಿನ್ನಾಭರಣ ಅಪಹರಿಸಿರುವುದು ಗೊತ್ತಾಗಿದೆ. ಪೊಲೀಸರಿಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
