ಮನೆಮುಂದೆ ಹೋಳಿ ಆಚರಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ | ಕೋಲು, ಕಲ್ಲಿನಿಂದ ಹೊಡೆದು ಕೊಂದರು
ಲಕ್ನೋ(ಮಾ.29): ತಮ್ಮ ಮನೆಯ ಮುಂದೆ ಗುಂಪಾಗಿ ಹೋಳಿ ಆಚರಿಸುತ್ತಿದ್ದವರ ವಿರುದ್ಧ ಪ್ರತಿಭಟಿಸಿದ 60 ವರ್ಷದ ವೃದ್ಧೆಯನ್ನು ಹೊಡೆದು ಕೊಂದಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಮೇವಾಟಿ ಟೊಲ ಪ್ರದೇಶದಲ್ಲಿ ಹೋಳಿ ಸಂದರ್ಭ ಘಟನೆ ನಡೆದಿದೆ.
ಈ ಗುಂಪು ಬೆಳಗ್ಗೆ 10 ಗಂಟೆ ಸುಮಾರಿಗೆ ಮಹಿಳೆಯ ಮನೆಗೆ ಪ್ರವೇಶಿಸಿ ಕೋಲು ಮತ್ತು ಕಲ್ಲಿನಿಂದ ಹೊಡೆದು ಅವರನ್ನು ಕೊಲೆ ಮಾಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ನಗರ) ಪ್ರಶಾಂತ್ ಕುಮಾರ್ ಪ್ರಸಾದ್ ತಿಳಿಸಿದ್ದಾರೆ.
ಭಾರತ್ ಮಾತಾ ಕೀ ಜೈ': ಆರೋಪಿ ಜೊತೆ ರೇಪ್ ಸಂತ್ರಸ್ತೆ ಕಟ್ಟಿ ಹಾಕಿ ಊರಿಡೀ ಮೆರವಣಿಗೆ!
ಆಕೆಯ ಕುಟುಂಬ ಸದಸ್ಯರು ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದಾಗ, ಅವರಲ್ಲಿ ಐದು ಮಹಿಳೆಯರು, ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳು ಸಹ ಥಳಿಸಲ್ಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ ಮದ್ಯದ ಅಮಲಿನಲ್ಲಿರುವ ಯುವಕನೊಬ್ಬ ಅತಿ ವೇಗದಲ್ಲಿ ಟ್ರ್ಯಾಕ್ಟರ್ ಓಡಿಸಿ ಆರು ಜನರಿಗೆ ಗಾಯಗಳಾಗಿವೆ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ಟ್ರಾಕ್ಟರ್ ಹಾನಿಗೊಳಗಾಯಿತು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
