Asianet Suvarna News Asianet Suvarna News

ಗಂಡ-ಹೆಂಡಿರ ಜಗಳ ಮೊಬೈಲ್ ಸಿಗುವ ತನಕ.. ತುಟಿಯನ್ನೇ ಕತ್ತರಿಸಿದಳು!

* ಮೊಬೈಲ್ ಕೊಡಲಿಲ್ಲ ಎಂಬ ಕಾರಣಕ್ಕೆ ಪತಿಯ ತುಟಿಯೇ  ಕಟ್
* ಪತಿ-ಪತ್ನಿ ನಡುವೆ ಮೊಬೈಲ್ ಗಾಗಿ ಕಿತ್ತಾಟ
* ತನ್ನ ಮೊಬೈಲ್ ಹಾಳಾಗಿದ್ದರಿಂದ ಪತ್ನಿಯ ಮೊಬೈಲ್ ಬಳಸುತ್ತಿದ್ದ
* ಗಾಯಗೊಂಡ ಪತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

wife-cuts-husband-lips-after-he-forgets-to-return-her-mobile-Mumbai-mah
Author
Bengaluru, First Published Oct 18, 2021, 12:41 AM IST
  • Facebook
  • Twitter
  • Whatsapp

ಮುಂಬೈ(ಅ. 17)   ಗಂಡ-ಹೆಂಡತಿಯ(Husband-Wife) ಜಗಳ ಉಂಡು ಮಲಗುವವರೆಗೆ ರಾಶಿ ಹಳೆ ಗಾದೆ ಆಗೋಯ್ತು.  ಈಗ ಗಂಡ-ಹೆಂಡಿರ ಜಗಳ ಮೊಬೈಲ್ (Mobile)ಸಿಗುವ ತನಕ!  ಮೊಬೈಲ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಈಕೆ ತನ್ನ ಗಂಡನ ತುಟಿಯನ್ನೇ ಕತ್ತರಿಸಿದ್ದಾಳೆ!

ಮಹಾರಾಷ್ಟ್ರದ (Maharashtra)ಭಾಂದರದ ಮಸಲ್ನಲ್ಲಿ ಗಂಡ ತನ್ನ ಮೊಬೈಲ್ ಅನ್ನು ವಾಪಾಸ್ ಕೊಡಲಿಲ್ಲ ಎಂಬ ಕೋಪಕ್ಕೆ ಹೆಂಡತಿ ಆತನ ತುಟಿಯನ್ನೇ(lips) ಕತ್ತರಿಸಿದ್ದಾಳೆ.  40 ವರ್ಷದ ಖೇಮ್ರಾಜ್ ಬಾಬೂರಾವ್ ಮುಲ್ ಎಂಬ ವ್ಯಕ್ತಿ ಭಾಂದರದಲ್ಲಿ ವಾಸವಾಗಿದ್ದರು. ತನ್ನ ಮೊಬೈಲ್ ಹಾಳಾಗಿದ್ದರಿಂದ ಮನೆಯಲ್ಲಿದ್ದಾಗ ಅವರು ಹೆಂಡತಿಯ ಮೊಬೈಲ್ ಅನ್ನು ಬಳಸುತ್ತಿದ್ದರು. 

ಪೋರ್ನ್‌ಗೆ ದಾಸನಾಗಿದ್ದ ಪತಿ ಮಾಡ್ತಿದ್ದ ಪಾಪದ ಕೆಲಸ.. ಪತ್ನಿಯ ಗೋಳು!

ದಿನಗಳು ಕಳೆದರೂ ಗಂಡ ಮೊಬೈಲ್ ವಾಪಸ್ ಕೊಟ್ಟಿಲ್ಲ. ಇದರಿಂದ ಹೆಂಡತಿ ಕೋಪಗೊಂಡಿದ್ದಾಳೆ.  ಕಳೆದ ಗುರುವಾರ ಮೊಬೈಲ್ ವಿಷಯಕ್ಕೆ ಗಂಡನೊಂದಿಗೆ ಜಗಳವಾಡಿದ ಹೆಂಡತಿ ಮೊಬೈಲ್ ವಾಪಾಸ್ ಕೊಡುವಂತೆ ಕೇಳಿದಳಿದ್ದಾಳೆ ಅದಕ್ಕೆ ಗಂಡ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಆಕೆ ಗಂಡನ ತುಟಿಯನ್ನು ಚಾಕುವಿನಿಂದ ಕತ್ತರಿಸಿದ್ದಾಳೆ. 

ಪತಿ-ಪತ್ನಿ ಗಲಾಟೆ ವೇಳೆ  ಚಾಕುವನ್ನು ಗಂಡನ ಮುಖದ ಕಡೆಗೆ ಎಸೆದಿದ್ದಾಳೆ. ಅವಳ ಎಸೆತಕ್ಕೆ ಗಂಡನ ತುಟಿ ಕತ್ತರಿಸಿ ಹೋಗಿದೆ.  ಗಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಾಕು ಎಸೆದ ಪತ್ನಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಕೆಲವೊಮ್ಮೆ ಇಂಥ ಕ್ಷುಲ್ಲಕ  ಕಾರಣಗಳು ಹತ್ಯೆಗೂ ಕಾರಣವಾದ ಉದಾಹರಣೆ ಇದೆ. ಟ್ರಾಫಿಕ್ ನಲ್ಲಿ ಉಂಟಾದ ಜಗಳ, ಪಾರ್ಕಿಂಗ್ ವಿಚಾರಕ್ಕೆ  ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದನ್ನು ನೋಡಿದ್ದೇವೆ. 

 

Follow Us:
Download App:
  • android
  • ios