*  ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣದಲ್ಲಿ ಶೃತಿ ಸಾವು*  ಮಂಗಳೂರಿನ ಕುಂಟಿಕಾನ ಬಳಿ ನಡೆದ ಅಪಘಾತ*  ಈ ಸಂಬಂಧ ಮಂಗಳೂರು ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು 

ರಾಯಚೂರು(ಏ.17):  ಪತಿ ಸಾವಿನ ಸುದ್ದಿ ಕೇಳಿ 5 ತಿಂಗಳು ಮಗು ಕೊಂದು ಗೃಹಿಣಿಯೊಬ್ಬರು ನೇಣಿಗೆ ಶರಣಾದ ಘಟನೆ ರಾಯಚೂರು(Raichur) ಜಿಲ್ಲೆ ಲಿಂಗಸುಗೂರು ಪಟ್ಟಣದಲ್ಲಿ ಇಂದು(ಭಾನುವಾರ) ನಡೆದಿದೆ. ಗಂಗಾರಾಮ್ ಪತ್ನಿ ಶೃತಿ (30) ತನ್ನ ಮಗ ಅಭಿರಾಮ್ (5 ತಿಂಗಳು) ನಿಗೆ ನೇಣು ಹಾಕಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಸ್ತೆ ಅಪಘಾತದಲ್ಲಿ(Accident) ಅಗ್ನಿಶಾಮಕದಳ ವಾಹನದ ಚಾಲಕ ಗಂಗಾಧರ.ಬಿ. ಕಮ್ಮಾರ ಮೃತಪಟ್ಟಿದ್ದರು. ಮಂಗಳೂರಿನ ಕುಂಟಿಕಾನ ಬಳಿ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಗಾರಾಮ್‌ ಸಾವನ್ನಪ್ಪಿದ್ದರು(Death). ಪತಿನ ಸಾವಿನ ವಿಷಯ ತಿಳಿದ ಪತ್ನಿ ಶೃತಿ 5 ತಿಂಗಳ ಮಗನನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಅಂತ ತಿಳಿದು ಬಂದಿದೆ. 

ಹೆತ್ತ ಮಕ್ಕಳನ್ನೇ ಹತ್ಯೆ ಮಾಡಿದ್ದ ಆರೋಪಿ ಕೋರ್ಟ್‌ ಮಹಡಿಯಿಂದ ಜಿಗಿದು ಆತ್ಮಹತ್ಯೆ!

ನಿನ್ನೆ(ಶನಿವಾರ) ರಾತ್ರಿ ರಾ.ಹೆ.66 ರಲ್ಲಿ ಬೆಂಗಳೂರಿನಿಂದ(Bengaluru) ಕುಂದಾಪುರಕ್ಕೆ ಹೋಗುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ. ಉಡುಪಿಯಲ್ಲಿ ಅಗ್ನಿಶಾಮಕ ಠಾಣೆಯಲ್ಲಿ(Fire Department) ಗಂಗಾರಾಮ್ ಸೇವೆ ಸಲ್ಲಿಸುತ್ತಿದ್ದರು. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಲಿಂಗಸೂಗೂರು ಡಿವೈಎಸ್‌ಪಿ ಎಸ್ಎಸ್ ಹುಲ್ಲೂರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಂಗಳೂರು ಪೂರ್ವ ಸಂಚಾರಿ ಪೊಲೀಸ್(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.