ಪತಿ ಚಾಕಲೆಟ್ ತಂದು ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ನೊಂದುಕೊಂಡ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು (ಏ.7) ಪತಿ ಚಾಕಲೆಟ್ ತಂದು ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ನೊಂದುಕೊಂಡ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಂದಿನಿ‌ (30) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆರು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ನಂದಿನಿಗೆ ಇಬ್ಬರು ಮಕ್ಕಳು. ಪತಿ ಸೆಲೂನ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ.

ನಿನ್ನೆ ಬೆಳಗ್ಗೆ ಕೆಲಸಕ್ಕೆ ಹೊರಟಿದ್ದ ಪತಿ. ಈ ವೇಳೆ ಚಾಕಲೆಟ್ ತಂದುಕೊಡುವಂತೆ ಹೇಳಿದ್ದ ಪತ್ನಿ ನಂದಿನಿ. ಚಾಕಲೇಟ್ ತರುವುದಾಗಿ ಕೆಲಸ ಹೋಗಿದ್ದ ಪತಿ. ಮಧ್ಯಾಹ್ನವಾದರೂ ಚಾಕಲೆಟ್ ತಂದಿಲ್ಲ ಎಂದು ನೊಂದುಕೊಂಡಿದ್ದ ನಂದಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು.

Bengaluru: ಯೂನಿಟಿ ಬಿಲ್ಡಿಂಗ್‌ನಿಂದ ಜಿಗಿದು ಮಹಿಳಾ ಮ್ಯಾನೇಜರ್ ಆತ್ಮಹತ್ಯೆ: ಖಿನ್ನತೆ ಶಂಕೆ

ಇತ್ತ ಪತಿ ಮಧ್ಯಾಹ್ನ ವೇಳೆ ನಂದಿನಿಗೆ ಕರೆ ಮಾಡಿದ್ದಾನೆ. ಆದರೆ ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡು ಮನೆಗೆ ಬಂದು ನೋಡಿದಾಗ, ಪತ್ನಿ ನೇಣು ಹಾಕಿಕೊಂಡಿರುವುದು ನೋಡಿ ಶಾಕ್ ಆಗಿದ್ದಾನೆ. ತಕ್ಷಣ ಪತ್ನಿಯನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿರುವ ಪತಿ. ಆದರೆ ಅಷ್ಟರಲ್ಲಾಗಲೇ ನಂದಿನಿ ಸಾವನ್ನಪ್ಪಿರುವುದು ಗೊತ್ತಾಗಿದೆ.

 ಸಣ್ಣಪುಟ ವಿಚಾರಗಳಿಗೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಸೌಂಡ್ ಜಾಸ್ತಿ ಇದೆ ಎಂದಿದ್ದಕ್ಕೆ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಸೌಂಡ್ ಕಡಿಮೆ ಮಾಡಿ ಎಂದಿದ್ದಕ್ಕೆ ವ್ಯಕ್ತಿಯೋರ್ವನ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಬಸುದೇವ್ ಮತ್ತು ಅಭಿಷೇಕ್ ಸಿಂಗ್ ಬಂಧಿತರು. ಮತ್ತೋರ್ವ ಅರೋಪಿ ಅನಿರುದ್‌ನನ್ನು ದೆಹಲಿಯಲ್ಲಿ ವಶಕ್ಕೆ ಪಡೆದ ಹೆಚ್ ಎ ಎಲ್ ಪೊಲೀಸರು.

ಸೌಂಡ್‌ ಕಡಿಮೆ ಮಾಡಿ ಎಂದ ಮನೆ ಮಾಲೀಕನನ್ನೇ ಹೊಡೆದು ಕೊಂದ ಟೆಕ್ಕಿಗಳು: ದುರಂತ ಸಾವು

ಪ್ರಕರಣ ಹಿನ್ನೆಲೆ: ಬೆಳಗಿನ ಜಾವ 4.30 ಹೊತ್ತಿಗೆ ಪಾರ್ಟಿ ಮಾಡಿದ್ದರು. ಈ ವೇಳೆ ಅನಿರುದ್ ಕಾರಿನಲ್ಲಿ ಸೌಂಡ್ ಜಾಸ್ತಿ ಕೊಟ್ಟಿದ್ದ ಬೆಳಗಿನ ಜಾವ ಸೌಂಡ್ ಹೆಚ್ಚಾಗಿದ್ರಿಂದ ಲಾಯ್ಡ್ ನೇಮಯ್ಯ ಎಂಬಾತ ಇದನ್ನು ಪ್ರಶ್ನೆ ಮಾಡಿದ್ದ. ಅಲ್ಲದೇ ಸೌಂಡ್ ಕಡಿಮೆ ಮಾಡುವಂತೆ ಸೂಚಿಸಿದ್ದ. ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡುವವರೆಗೆ ಹೋಗಿದೆ. ನೇಮಯ್ಯನಿಗೆ ಹಲ್ಲೆ ಮಾಡಿದ್ದ ಆರೋಪಿಗಳು. ತೀವ್ರವಾಗಿ ಗಾಯಗೊಂಡಿದ್ದ ನೇಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.