Asianet Suvarna News Asianet Suvarna News

ಲವರ್ ಜೊತೆ ಚೆಕ್ಕಂದ, ರೆಡ್‌ಹ್ಯಾಂಡ್ ಆಗಿ ಪತ್ನಿಯ ಹಿಡಿದು ಜೀವಂತ ಸುಟ್ಟ ಪತಿ!

ಪತ್ನಿಯ ಕಣ್ಣಾಮುಚ್ಚಾಲೆ ಆಟ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಗಂಡ ಕೆಲಸಕ್ಕೆ ತೆರಳುವ ವೇಳೆ ಲವರ್ ಜೊತೆ ಸರಸ-ಸಲ್ಲಾಪದಲ್ಲಿ ತೊಡಗಿದ್ದ ಪತ್ನಿಯನ್ನು ಗಂಡ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾನೆ. ಬಳಿಕ ನಡೆದಿದ್ದೇ ಘನಘೋರ.

Wife burned alive by Husband after caught her in an intimate state with another man Uttar pradesh ckm
Author
First Published Nov 19, 2023, 9:44 PM IST

ಬರೇಲಿ(ನ.19) ಮದುವೆಯಾಗಿ ಗಂಡನ ಜೊತೆ ಸಂಸಾರ ನಡೆಸುತ್ತಿದ್ದ ಪತ್ನಿ ಸದ್ದಿಲ್ಲದೆ ಮತ್ತೊಬ್ಬ ವ್ಯಕ್ತಿ ಜೊತೆ ಚಕ್ಕಂದ ಶುರುವಿಟ್ಟುಕೊಂಡಿದ್ದಳು. ಪರಸಂಗದ ಆಕರ್ಷಣೆ ಜೋರಾಗಿದೆ. ಕದ್ದು ಮುಚ್ಚಿ ನಡೆಯುತ್ತಿದ್ದ ಸರಸ ಪತಿಯ ಅನುಮಾನ ಹೆಚ್ಚಿಸಿದೆ. ಪರಿಶೀಲನೆ ಇಳಿದ ಪತಿ ರೆಡ್‌ಹ್ಯಾಂಡ್ ಆಗಿ ಪತ್ನಿಯನ್ನು ಹಿಡಿದಿದ್ದಾಳೆ. ಲವರ್ ಜೊತೆ ಸರಸವಾಡುತ್ತಿದ್ದ ಸಮಯದಲ್ಲೇ ಪತಿ ಎಂಟ್ರಿಕೊಟ್ಟು ಇಬ್ಬರನ್ನು ಹಿಡಿದಿದ್ದಾನೆ.  ಲವರ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮೋಸದಾಟಕ್ಕೆ ಆಕ್ರೋಶಗೊಂಡ ಪತಿ ಸ್ಥಳದಲ್ಲೇ ಜೀವಂತವಾಗಿ ಪತ್ನಿಯನ್ನು ಸುಟ್ಟ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ನೆಪಲ್ ಸಿಂಗ್ ಹಾಗೂ ಅಂಜಲಿ ದಾಂಪತ್ಯದಲ್ಲಿ ಹೆಚ್ಚಿನ ಸಮಸ್ಯೆಗಳಿರಲಿಲ್ಲ. ಗಂಡನ ಕೆಲಸಕ್ಕೆ ತೆರಳುತ್ತಿದ್ದ, ಪತ್ನಿ ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಳು. ಆದರೆ ಬರು ಬರುತ್ತಾ ಪತ್ನಿಯ ನಡೆ ಅನುಮಾನ ತರಿಸಿದೆ. ಈ ಕುರಿತು ಕೆಲ ಬಾರಿ ಸೂಚನೆಯನ್ನೂ ನೀಡಿದ್ದಾನೆ. ಆದರೆ ಅಷ್ಟರಲ್ಲೇ ಪತ್ನಿಗೆ ತನ್ನ ಲವರ್ ಜೊತೆಗಿನ ಸಾಂಗತ್ಯ ಗಾಢವಾಗಿದೆ. ಕಣ್ಣಾಮುಚ್ಚಾಲೆ ಆಟ ಮಂಚ ಹಂಚಿಕೊಳ್ಳುವ ವರೆಗೂ ತಲುಪಿತ್ತು.

ಸಿಂಧನೂರು: ಪ್ರೀತಿಸಿ ಮದುವೆಯಾದ ಪತ್ನಿಯನ್ನ ನೇಣು ಬಿಗಿದು ಕೊಲೆ ಮಾಡಿದ ಪಾಪಿ ಗಂಡ..!

ಪ್ರತಿ ದಿನ ಸರಸ ಸಲ್ಲಾಪಗಳು ಜೋರಾಯಿತು. ಪತ್ನಿಯ ಮೇಲೆ ಅನುಮಾನಗೊಂಡಿದ್ದ ಪತಿ, ಪತ್ತೆ ಹಚ್ಚಲು ಮುಂದಾಗಿದ್ದಾನೆ. ದಿಢೀರ್ ಕೆಲಸದಿಂದ ವಾಪಸ್ ಆಗಿದ್ದಾನೆ. ಶನಿವಾರ(ನ. 18) ರಾತ್ರಿ ಪಕ್ಕದ ಹೊಲದಲ್ಲಿ ಪತ್ನಿ ಒಣ ಹುಲ್ಲಿನ ಮೇಲೆ ಮಲಗಿರುವುದನ್ನು ಪತಿ ನೋಡಿದ್ದಾನೆ. ಕೆರಳಿದ ಪತಿ ಒಣ ಹುಲ್ಲಿಗೆ ಬೆಂಕಿ ಹಚ್ಚಿ ತೆರಳಿದ್ದಾನೆ. ಇಬ್ಬರು ಮಲಗಿದ್ದರು. ಹೀಗಾಗಿ ಬೆಂಕಿ ಆವರಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿಲ್ಲ. ಒಂದೇ ಸಮನೆ ಬೆಂಕಿ ಧಗಧಹಿಸಲು ಆರಂಭಿಸಿದೆ. ಲವರ್ ಒಣ ಹುಲ್ಲಿನ ಮೇಲಿಂದ ಜಿಗಿದಿದ್ದಾನೆ. ಆದರೆ ಅಂಜಲಿಗೆ ಸಾಧ್ಯವಾಗಿಲ್ಲ. ಒಣಹುಲ್ಲಿನ ಒಳಗೆ ಕುಸಿದಿದ್ದಾಳೆ. ಬೆಂಕಿಯ ಜ್ವಾಲೆಯಲ್ಲಿ ಭಸ್ಮವಾಗಿದ್ದಾಳೆ. 

ಗೊತಿಯಾ ಗ್ರಾಮದ 35 ವರ್ಷ ಮಹಿಳೆ ಅಂಜಲಿ ಕೊಲೆಯಾಗಿದ್ದಾಳೆ. ಅಂಜಲಿ ಕುಟುಂಬಸ್ಥರು ನೀಡಿದ ದೂರಿನ ಆಧಾರದಲ್ಲಿ ನೆಪಲ್ ಸಿಂಗ್ ಬಂಧಿಸಿರುವ ಪೊಲೀಸರು ಘಟನೆಯ ಮಾಹಿತಿ ಪಡೆದಿದ್ದಾರೆ. ಇತ್ತ ಅಂಜಲಿ ಜೊತೆಗಿದ್ದ ವ್ಯಕ್ತಿ ಯಾರು ಅನ್ನೋದು ಬಹಿರಂಗವಾಗಿಲ್ಲ. ಆದರೆ ಸುಂದರ ಸಂಸಾರವೊಂದು ಛಿದ್ರವಾಗಿದೆ. ಪತ್ನಿ ಮೃತಪಟ್ಟರೆ, ಪತಿ ಜೈಲು ಸೇರಿದ್ದಾನೆ.

ಬಳ್ಳಾರಿ ಬಿಜೆಪಿ ಸಂಸದ ದೇವೇಂದ್ರಪ್ಪ ಪುತ್ರನ ವಿರುದ್ಧ ಲವ್, ಸೆಕ್ಸ್‌, ಧೋಖಾ ಆರೋಪ

Follow Us:
Download App:
  • android
  • ios