Asianet Suvarna News Asianet Suvarna News

ಪ್ರತಿ ದಿನ ಅಸ್ವಾಭಾವಿಕ ಲೈಂಗಿಕ ಕ್ರಿಯೆಯಿಂದ ಬೇಸತ್ತ ಪತ್ನಿ, ಬುದ್ಧಿಕಲಿಸಲು ಹೋಗಿ ಪತಿ ಆಸ್ಪತ್ರೆ ದಾಖಲು!

ಪತಿಯ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಪತ್ನಿ ಬೇಸತ್ತಿದ್ದಾಳೆ. ಪರಿ ಪರಿ ಮನವಿ ಮಾಡಿದರೂ ಪತಿಯ ಬೇಡಿಕೆ ನಿಂತಿಲ್ಲ. ಹೀಗಾಗಿ ಬೇರೆ ದಾರಿ ಕಾಣದ ಪತ್ನಿ, ಲೈಂಗಿಕ ಕ್ರಿಯೆಯಲ್ಲಿರುವಾಗಲೇ ಪತಿಯ ಜನನಾಂಗಕ್ಕೆ ಕಚ್ಚಿದ ಘಟನೆ ನಡೆದಿದೆ. ಇತ್ತ ಪತಿ ಆಸ್ಪತ್ರೆ ದಾಖಲಾಗಿದ್ದಾನೆ.
 

Wife bite husband private part after unnatural sex demand in Uttar Pradesh ckm
Author
First Published Jan 29, 2024, 4:25 PM IST

ಲಖನೌ(ಜ.29) ಅಸ್ವಾಭಾವಿಕ ಲೈಂಗಿಕ ಕ್ರಿಯೆಯಿಂದಲೇ ಹಲವು ದಂಪತಿಗಳು ಬೇರೆ ಬೇರೆಯಾಗಿದ್ದಾರೆ. ವಿಚ್ಚೇದನ ಬಯಸಿದ ಹಲವು ಅರ್ಜಿಗಳು ಕೋರ್ಟ್‌ನಲ್ಲಿದೆ. ಇದರ ನಡುವೆ ಮತ್ತೊಂದು ಪ್ರಕರಣ ದಾಖಲಾಗಿದೆ. ಪ್ರತಿ ಬಾರಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಪತಿಗೆ ಅದೆಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪತಿಯ ಬೇಡಿಕೆ ಕಡಿಮೆಯಾಗಿಲ್ಲ, ಅರ್ಥ ಮಾಡಿಕೊಳ್ಳುವ ಗೋಜಿಗೂ ಹೋಗಿಲ್ಲ. ಹೀಗಾಗಿ ಬೇರೆ ದಾರಿ ಕಾಣದ ಪತ್ನಿ, ಅಸ್ವಾಭಾವಿಕ ಲೈಂಕಿಕ ಕ್ರಿಯೆಯಲ್ಲಿರುವಾಗಲೇ ಪತಿಯ ಜನನಾಂಗಕ್ಕೆ ಪತ್ನಿ ಕಚ್ಚಿದ್ದಾಳೆ. ತೀವ್ರ ಗಾಯಗೊಂಡ ಪತಿ ಇದೀಗ ಆಸ್ಪತ್ರೆ ಸೇರಿದ ಘಟನೆ ಉತ್ತರ ಪ್ರದೇಶದ ಹಮಿರ್‌ಪುರ್ ಜಿಲ್ಲೆಯಲ್ಲಿ ನಡೆದಿದೆ.

34 ವರ್ಷದ ಪತಿ ರಾಮು ನಿಶಾದ್ ಹಾಗೂ ಪತ್ನಿ ನಡುವೆ ಲೈಂಗಿಕ ವಿಚಾರದಲ್ಲಿ ಪ್ರತಿ ಬಾರಿ ವಾಗ್ವಾದ ನಡೆಯುತ್ತಲೇ ಇತ್ತು. ಪತಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಪತ್ನಿಗೆ ಸುತಾರಂ ಇಷ್ಟವಿರಲಿಲ್ಲ. ಆದರೆ ಒಲ್ಲದ ಮನಸ್ಸಿನಿಂದ ಪತಿಗೆ ಸಹಕರಿಸುತ್ತಿದ್ದ ಪತ್ನಿಗೆ ದಿನದಿಂದ ದಿನಕ್ಕೆ ಆಕ್ರೋಶ ಹೆಚ್ಚಾಗತ್ತಲೇ ಹೋಗಿತ್ತು. ಜನವರಿ 28ರ ರಾತ್ರಿ ಇದೇ ವಿಚಾರಕ್ಕೆ ಮತ್ತೆ ಪತಿ ಹಾಗೂ ಪತ್ನಿ ನಡುವೆ ವಾಗ್ವಾದ ನಡೆದಿದೆ.

ಕಾಂಗ್ರೆಸ್‌ ಶಾಸಕನ ವಿರುದ್ಧ ಅಸ್ವಾಭಾವಿಕ ಸೆಕ್ಸ್‌ ಆರೋಪ: ಹೈಕೋರ್ಟ್‌ ಹೇಳಿದ್ದೀಗೆ..

ಪತಿಯ ಸಿಟ್ಟು ಆಕ್ರೋಶಕ್ಕೆ ಮಣಿದ ಪತಿ ಮತ್ತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾಳೆ. ಆದರೆ ಪತಿಗೆ ಬುದ್ದಿಕಲಿಸಲು ಲೈಂಗಿಕ ಕ್ರಿಯೆಯಲ್ಲಿರುವಾಗಲೇ ಪತಿಯ ಜನನಾಂಗಕ್ಕೆ ಕಚ್ಚಿದ್ದಾಳೆ. ಪತ್ನಿ ಕಚ್ಚಿದ ರಭಸಕ್ಕೆ ಪತಿ ತೀವ್ರಗಾಯಗೊಂಡಿದ್ದಾನೆ. ಆತಂಕಗೊಂಡ ಪತ್ನಿ, ತಕ್ಷಣವೇ ಸ್ಥಳೀಯ ಆಸ್ಪತ್ರೆ ದಾಖಲಿಸಿದ್ದಾಳೆ. ತಪಾಸಣೆ ನಡೆಸಿದ ವೈದ್ಯರು ಸುಸುಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ದಾಖಲಿಸಿಲು ಸೂಚಿಸಿದ್ದಾರೆ.

ರಾಮು ನಿಶಾದ್‌ನನ್ನು ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ರಾಮು ನಿಶಾದ್ ಪರಿಸ್ಥಿತಿ ಗಂಭೀರವಾಗಿದೆ ಅನ್ನೋ ಮಾಹಿತಿಯನ್ನು ವೈದ್ಯರು ಹೇಳಿದ್ದಾರೆ. ಇತ್ತ ಪತಿ ಹಾಗೂ ಪತ್ನಿ ಇಬ್ಬರ ಮೇಲೂ ಪ್ರಕರಣ ದಾಖಲಾಗಿದೆ. ಪತಿಯ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಪ್ರಕರಣ ದಾಖಲಾಗಿದ್ದರೆ, ಇತ್ತ ಪತಿಯ ಜನನಾಂಗ ಕಚ್ಚಿ ಗಾಯಗೊಳಿಸಿರುವ ಪತ್ನಿ ವಿರುದ್ಧವೂ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರು ಪತ್ನಿಯ ಆಪ್ತರು, ಕುಟುಂಬಸ್ಥರ ವಿಚಾರಣೆ ನಡೆಸಿದ್ದಾರೆ.

 

ಹಾಗಲ್ಲ..ಹೀಗೆ... ಅಸ್ವಾಭಾವಿಕ ಸೆಕ್ಸ್‌ಗೆ ಉದ್ಯಮಿ ಪತಿ ಒತ್ತಾಯ!

Follow Us:
Download App:
  • android
  • ios