Asianet Suvarna News Asianet Suvarna News

ಪ್ರವೀಣ್‌ ಹತ್ಯೆ ಆರೋಪಿಗಳ ಪತ್ತೆಗೆ 40 ಕಡೆ ವಾಂಟೆಡ್ ಪೋಸ್ಟರ್‌

ಮಡಿಕೇರಿಯ ತುಫೈಲ್‌ಗಾಗಿ ನಡೆದಿದೆ ಶೋಧ, ಕೊಡಗಿನ 40 ಕಡೆ ವಾಂಟೆಡ್‌ ಪೋಸ್ಟರ್‌ ಅಂಟಿಸಿದ ಪೊಲೀಸರು

Wanted Poster For Trace Praveen Nettaru Murder Accused in Kodagu grg
Author
First Published Nov 3, 2022, 9:00 AM IST

ಮಡಿಕೇರಿ(ನ.03):  ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ತುಫೈಲ್‌ನ ಹುಡುಕಾಟಕ್ಕೆ ಕೊಡಗು ಪೊಲೀಸರು ಮುಂದಾಗಿದ್ದಾರೆ. ಈತ ಮಡಿಕೇರಿಯ ಗದ್ದಿಗೆ ನಿವಾಸಿ. ಈತನ ಮನೆ ಸೇರಿದಂತೆ ಸುಮಾರು 40 ಕಡೆಗಳಲ್ಲಿ ವಾಂಟೆಡ್‌ ಪೋಸ್ಟರ್‌ ಅಂಟಿಸಿದ್ದು, ಸುಳಿವು ಸಿಕ್ಕಿದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. 

ಈತನನ್ನು ಹುಡುಕಿಕೊಟ್ಟವರಿಗೆ 5 ಲಕ್ಷ ರು.ನಗದು ಬಹುಮಾನವನ್ನು ರಾಷ್ಟ್ರೀಯ ತನಿಖಾದಳ ಘೋಷಿಸಿದೆ. ಈತನನ್ನು ಹುಡುಕಿಕೊಂಡು ಎನ್‌ಐಎ ತಂಡ ಸೆಪ್ಟೆಂಬರ್‌ ತಿಂಗಳಲ್ಲಿ ಎರಡು ಬಾರಿ ಮಡಿಕೇರಿಗೆ ಬಂದಿತ್ತು. ಆದರೆ, ಆತನನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. 

ಪ್ರವೀಣ್ ನೆಟ್ಟಾರು ನೂತನ ಮನೆಗೆ ಗುದ್ದಲಿ ಪೂಜೆ: ಕನಸು ನನಸಾಗಿಸಲು ಬಿಜೆಪಿ ಹೆಜ್ಜೆ...!

ತುಫೈಲ್‌ ಮನೆ ಬಿಟ್ಟು 8 ತಿಂಗಳಾಗಿದೆ. 8 ತಿಂಗಳಿಂದ ಆತ ನಮ್ಮ ಸಂಪರ್ಕದಲ್ಲಿ ಇಲ್ಲ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಆದರೆ, ಪ್ರವೀಣ್‌ ಹತ್ಯೆ ಬಳಿಕ ಆತ ಮಡಿಕೇರಿಯಲ್ಲಿಯೇ ಇದ್ದ. ಕೆಲ ದಿನಗಳ ಬಳಿಕ, ಆತ ನಾಪತ್ತೆಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
 

Follow Us:
Download App:
  • android
  • ios