Mangaluru: ಕಾಲೇಜು ವಿದ್ಯಾರ್ಥಿಗಳ ಲಿಪ್ ಲಾಕ್ ವೈರಲ್: ವಿಡಿಯೋ ಮಾಡಿದ ವಿದ್ಯಾರ್ಥಿ ವಶಕ್ಕೆ!
ನಗರದ ಪ್ರತಿಷ್ಟಿತ ಕಾಲೇಜೊಂದರ ವಿದ್ಯಾರ್ಥಿಗಳು ಖಾಸಗಿ ಕೊಠಡಿಯಲ್ಲಿ ಕಿಸ್ಸಿಂಗ್ ನಲ್ಲಿ ತೊಡಗಿದ್ದಲ್ಲದೇ ಅದನ್ನ ವಿಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದ ವಿದ್ಯಾರ್ಥಿಯನ್ನ ಮಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಜು.21): ನಗರದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳು ಖಾಸಗಿ ಕೊಠಡಿಯಲ್ಲಿ ಕಿಸ್ಸಿಂಗ್ ನಲ್ಲಿ ತೊಡಗಿದ್ದಲ್ಲದೇ ಅದನ್ನ ವಿಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದ ವಿದ್ಯಾರ್ಥಿಯನ್ನ ಮಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಂಗಳೂರು ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಇದಾಗಿದ್ದು, ಕಿಸ್ಸಿಂಗ್‌ನಲ್ಲಿ ತೊಡಗಿದ್ದ ವಿದ್ಯಾರ್ಥಿಗಳು ಪಿಯುಸಿ ಶಿಕ್ಷಣ ಪಡೆಯುತ್ತಿದ್ದರು ಎನ್ನಲಾಗಿದೆ. ಕಾಲೇಜು ವಿದ್ಯಾರ್ಥಿಗಳ ಈ ಕಿಸ್ಸಿಂಗ್ ವಿಡಿಯೋ ಫುಲ್ ವೈರಲ್ ಆಗಿದ್ದು, ಕಾಲೇಜು ಯೂನಿಫಾರಂನಲ್ಲೇ ಕಿಸ್ಸಿಂಗ್ ನಲ್ಲಿ ತೊಡಗಿರೋ ಕಾರಣದಿಂದ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಎನ್ನುವುದು ಬೆಳಕಿಗೆ ಬಂದಿದೆ.
ಕೆಲ ವಿದ್ಯಾರ್ಥಿಗಳ ಮಧ್ಯೆ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಗೆ ಲಿಪ್ ಕಿಸ್ ಕೊಡ್ತಾ ಇರೋ ವಿಡಿಯೋ ಇದಾಗಿದ್ದು, ಯಾವುದೋ ಖಾಸಗಿ ಕೊಠಡಿಯಲ್ಲಿ ಅಶ್ಲೀಲ ವರ್ತಿಸಿ ವಿಡಿಯೋ ಮಾಡಲಾಗಿದೆ. ವಿಡಿಯೋ ವೈರಲ್ ಬೆನ್ನಲ್ಲೇ ವಿಡಿಯೋ ಮಾಡಿ ವೈರಲ್ ಮಾಡಿದ ವಿದ್ಯಾರ್ಥಿಯನ್ನ ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ವಿದ್ಯಾರ್ಥಿಯೊಬ್ಬನ ವಶಕ್ಕೆ ಪಡೆದು ಮಂಗಳೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪ್ರಕರಣ ಸಂಬಂಧ ಕಾನೂನು ತಜ್ಞರ ಸಲಹೆ ಪಡೆದ ಕ್ರಮಕ್ಕೆ ಮುಂದಾಗಿದ್ದಾರೆ.
ಹಿಬಾಬ್ ವಿವಾದದ ಬಳಿಕ ಮುಸ್ಲಿಂ ಶಿಕ್ಷಣ ಸಂಸ್ಥೆಗಳಿಗೆ ಡಿಮ್ಯಾಂಡ್: ಹೊಸ ಕಾಲೇಜಿಗೆ 13 ಅರ್ಜಿ !
ಯೂನಿಫಾರಂನಲ್ಲಿದ್ದ ಮೂವರು ವಿದ್ಯಾರ್ಥಿನಿಯರು!: ಸದ್ಯ ಈ ವಿಡಿಯೋ ವೈರಲ್ ಆಗ್ತಿದ್ದಂತೆ ಖಾಸಗಿ ಕಾಲೇಜು ಆಡಳಿತ ಗಂಭೀರವಾಗಿ ಪರಿಗಣಿಸಿದೆ. ವಿಡಿಯೋದಲ್ಲಿ ಮೂವರು ಯುವಕರು ಮತ್ತು ಮೂವರು ವಿದ್ಯಾರ್ಥಿನಿಯರಿದ್ದು, ಯಾರೋ ಒಬ್ಬರು ವಿಡಿಯೋ ಮಾಡಿದ್ದಾರೆ. ಮೂವರು ವಿದ್ಯಾರ್ಥಿನಿಯರು ಕಾಲೇಜು ಯೂನಿಫಾರಂ ಮತ್ತು ಐಡಿ ಕಾರ್ಡ್ ಸಹಿತ ಇದ್ದು, ಉಳಿದ ಮೂವರು ಯುವಕರು ಯೂನಿಫಾರಂನಲ್ಲಿಲ್ಲ.
ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ಮಂಗಳೂರಿಗ! ಯಾರಿವರು? ಹಿನ್ನೆಲೆ ಏನು?
20 ಸೆಕೆಂಡ್‌ಗಳ ಈ ವಿಡಿಯೋವನ್ನ ಯಾವುದೋ ಖಾಸಗಿ ರೂಮ್‌ನಲ್ಲಿ ತೆಗೆಯಲಾಗಿದೆ. ಮೇಲ್ನೋಟಕ್ಕೆ ಯುವಕರು ವಾಸ್ತವ್ಯ ಇರೋ ಕೊಠಡಿಯಂತೆ ಕಾಣುತ್ತಿದ್ದು, ವಿದ್ಯಾರ್ಥಿನಿಯರು ಅಲ್ಲಿಗೆ ತೆರಳಿರೋ ಸಾಧ್ಯತೆ ಇದೆ. ಸದ್ಯ ಮಂಗಳೂರು ಪೊಲೀಸರು ವಿದ್ಯಾರ್ಥಿನಿಯರು ಮತ್ತು ಆ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕಿದ್ದು, ವಿಡಿಯೋ ಮಾಡಿದ ವಿದ್ಯಾರ್ಥಿಯನ್ನ ವಶಕ್ಕೆ ಪಡೆದಿದ್ದಾರೆ.