ಕ್ರಿಕೆಟ್ ಪಂದ್ಯ ಆಡಿ ಕುಳಿತಿದ್ದ ಪಶು ವೈದ್ಯ ತೀವ್ರ ಹೃದಯಾಘಾತದಿಂದ ಮೃತಪಟ್ಟ ಘಟನೆ ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆಯ ಪಶುವೈದ್ಯರಾದ ಶಿವಪ್ಪ ಬಾದಾಮಿ (56) ಮೃತ ದುರ್ದೈವಿ. 

ಚಿಕ್ಕಮಗಳೂರು (ಜ.12): ಕ್ರಿಕೆಟ್ ಪಂದ್ಯ ಆಡಿ ಕುಳಿತಿದ್ದ ಪಶು ವೈದ್ಯ ತೀವ್ರ ಹೃದಯಾಘಾತದಿಂದ ಮೃತಪಟ್ಟ ಘಟನೆ ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ನಡೆದಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆಯ ಪಶುವೈದ್ಯರಾದ ಶಿವಪ್ಪ ಬಾದಾಮಿ (56) ಮೃತ ದುರ್ದೈವಿ. 

ಪಶು ಇಲಾಖೆಯಿಂದ ಆಯೋಜನೆ ಮಾಡಿದ್ದ ಕ್ರಿಕೆಟ್ ಟೂರ್ನಮೆಂಟ್‌. ಇಂದಿನಿಂದ ಎರಡು ದಿನಗಳ ಕಾಲ ನಡೆಯುತ್ತಿದ್ದು, ಕೊಡಗು ಕ್ರಿಕೆಟ್ ತಂಡದಲ್ಲಿ ಇಂದು ಒಂದು ಪಂದ್ಯ ಆಟವಾಡಿದ್ದ ಶಿವಪ್ಪ. ಪಂದ್ಯವಾಡಿ ದಣಿದು ವಿಶ್ರಾಂತಿಗೆ ಕುಳಿತಿದ್ದಾಗ ವೈದ್ಯನಿಗೆ ಹೃದಯಾಘಾತ. ಕುಳಿತಲ್ಲೇ ಕುಸಿದುಬಿದ್ದು ಸಾವನ್ನಪ್ಪಿ ವೈದ್ಯ. ವೈದ್ಯರ ಸಾವಿನಿಂದ ಕ್ರಿಕೆಟ್ ಟೂರ್ನಮೆಂಟ್ ಸ್ಥಗಿತಗೊಳಿಸಲಾಯಿತು.

ಸ್ಮೋಕ್ ಮಾಡೋರಿಗೆ ಮಾತ್ರವಲ್ಲ, ಸಿಗರೇಟ್ ಹೊಗೆ ಕುಡಿಯೋರಿಗೂ ಹಾರ್ಟ್ ಅಟ್ಯಾಕ್ ಆಗ್ಬಹುದು!