ಬೆಂಗಳೂರು(ಸೆ.13): ನನ್ನ ಪುತ್ರ ವೀರೇನ್‌ ಖನ್ನಾ ಆಯೋಜಿಸುತ್ತಿದ್ದ ಪಾರ್ಟಿಯಲ್ಲಿ ಮದ್ಯ ಹೊರತುಪಡಿಸಿ ಬೇರೆ ಯಾವುದೇ ರೀತಿಯ ಮಾದಕ ವಸ್ತು ಪೂರೈಕೆ ಮಾಡಿಲ್ಲ. ಪ್ರಕರಣದಲ್ಲಿ ಆತನನ್ನು ಬಲಿಪಶು ಮಾಡಲಾಗುತ್ತಿದೆ ಎಂದು ವೀರೇನ್‌ ತಂದೆ ಶ್ರೀರಾಮ್‌ ಖನ್ನಾ ಹೇಳಿದ್ದಾರೆ.

ಸಿಸಿಬಿ ಕಚೇರಿ ಬಳಿ ಮಾತನಾಡಿದ ಅವರು, ಪುತ್ರ ವೀರೇನ್‌ ಖನ್ನಾ ಅನುಮತಿ ಮೇರೆಗೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಮದ್ಯ ಹೊರತುಪಡಿಸಿ ಬೇರೆ ಯಾವುದೇ ರೀತಿಯ ಮಾದಕವಸ್ತು ಪೂರೈಕೆ ಮಾಡಿಲ್ಲ. ಹಲವು ವರ್ಷಗಳಿಂದ ಕಾರ್ಯಕ್ರಮಗಳ ಆಯೋಜನೆಯಲ್ಲಿ ವೀರೇನ್‌ ತೊಡಗಿದ್ದಾನೆ. ರವಿಶಂಕರ್‌ಗೂ ನನ್ನ ಮಗನಿಗೂ ಪರಿಚಯವಿಲ್ಲ. ಯಾವುದೇ ಅಕ್ರಮ ಚಟುವಟಿಕೆಯಲ್ಲಿ ಪಾಲ್ಗೊಂಡಿಲ್ಲ. ಪೊಲೀಸರ ತನಿಖೆಗೆ ಸಹಕಾರ ನೀಡುತ್ತೇವೆ. ಹಣಕಾಸು ಸಂಬಂಧಿಸಿದಂತೆ ಎಲ್ಲ ರೀತಿಯ ದಾಖಲೆಗಳನ್ನು ಒದಗಿಸುತ್ತೇವೆ ಎಂದು ತಿಳಿಸಿದರು. 

'ಆಳ್ವ ಫಾರಂ ಹೌಸ್‌ನಲ್ಲಿ ನಾನು, ರಾಗಿಣಿ ಡ್ರಗ್ಸ್‌ ಸೇವಿಸಿದ್ದೇವೆ'

ದೀಪಾವಳಿ, ಹೋಳಿ ಹಬ್ಬ, ಹೊಸ ವರ್ಷಕ್ಕೆ ಆಯೋಜಿಸುವ ಪಾರ್ಟಿಗಳಲ್ಲಿ ವಿವಿಧ ರೀತಿಯ ವಸ್ತ್ರಗಳನ್ನು ಧರಿಸುತ್ತಾನೆ. ಪೊಲೀಸರ ದಾಳಿ ವೇಳೆ ಮನೆಯಲ್ಲಿ ಸಿಕ್ಕಿರುವ ಪೊಲೀಸರ ಸಮವಸ್ತ್ರ ಕೂಡ ಪಾರ್ಟಿ ಬಟ್ಟೆಗಳು ಎಂದು ವಿವರಣೆ ನೀಡಿದರು.