Asianet Suvarna News Asianet Suvarna News

ಇದೆಂಥಾ ಪ್ರೀತಿ! ಎಲ್ಲಾ ಕಾನೂನು ಮೀರಿ ಕೈದಿಗೆ ತಾಜ್‌ ಮಹಲ್‌ ತೋರಿಸಲು ಕರೆದುಕೊಂಡು ಬಂದ ಪೊಲೀಸ್‌!

Agra Police Viral Video Taj Mahal: ಕೈದಿಗೆ ತಾಜ್‌ಮಹಲ್‌ ತೋರಿಸುವ ಸಲುವಾಗಿ ಹರ್ಯಾಣದ ಮೂವರು ಪೊಲೀಸರು ಬಂದಿದ್ದರು. ಆದರೆ, ಇವರನ್ನು ಅಧಿಕಾರಿಗಳು ತಡೆದಿದ್ದಾರೆ. ಈ ವಿಡಿಯೋ ವೈರಲ್‌ ಆದ ಬೆನ್ನಲ್ಲಿಯೇ ಪೊಲೀಸರ ವಿರುದ್ಧ ತನಿಖೆ ಆರಂಭವಾಗಿದೆ.

Uttar Pradesh Policemen broke all laws to show Taj Mahal to prisoner san
Author
First Published Jul 25, 2024, 4:17 PM IST | Last Updated Jul 25, 2024, 4:17 PM IST

ನವದೆಹಲಿ (ಜು.25): ಷಹಜಹಾನ್‌ ತಾಜ್‌ಮಹಲ್‌ಅನ್ನು ಕಟ್ಟಿದ್ದು ಯಾಕೆ? ಹೆಂಡ್ತಿ ಮುಮ್ತಾಜ್‌ ಮೇಲಿನ ಪ್ರೀತಿ. ಇದೆ ಪ್ರೀತಿಯನ್ನು ನಮ್ಮ ಪೊಲೀಸ್‌ ಅಧಿಕಾರಿಗಳು ತೋರಿಸಿದ್ರೆ ಹೇಗೆ.. ಆದರೆ, ಇಲ್ಲಿ ವ್ಯತ್ಯಾಸ ಏನೆಂದ್ರೆ, ಪೊಲೀಸರು ತಾಜಮಹಲ್‌ಅನ್ನು ತೋರಿಸಿಲು ಕರೆದುಕೊಂಡು ಹೋಗಿದ್ದು ತಮ್ಮ ಪತ್ನಿಯರನ್ನಲ್ಲ. ಬದಲಿಗೆ ಬಂಧನಕ್ಕೆ ಒಳಗಾಗಿದ್ದ ಕೈದಿಯನ್ನು. ಪೊಲೀಸ್‌ ಅಧಿಕಾರಿಗಳು ಹಾಗೂ ಕೈದಿಯ ನಡುವೆ ಆತ್ಮೀಯ ಸಂಬಂಧ ಬೆಳೆದ ಬಳಿಕ, ಕೈದಿ ಹೇಳಿದ್ದೆಲ್ಲವನ್ನೂ ಮಾಡಲು ಪೊಲೀಸರು ರೆಡಿಯಾಗಿದ್ದಾರೆ. ಇತ್ತೀಚೆಗೆ ಕೈದಿ ನನತೆ ತಾಜ್‌ಮಹಲ್‌ ನೋಡಬೇಕು ಅನಿಸಿದೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ಹರ್ಯಾಣ ಪೊಲೀಸ್‌ನ ಮೂವರು ಅಧಿಕಾರಿಗಳು ಕೈದಿಯನ್ನು ಜೀಪ್‌ನಲ್ಲಿ ಹಾಕಿಕೊಂಡು ತಾಜಮಹಲ್‌ ನೋಡಲು ಕರೆದುಕೊಂಡು ಬಂದಿದ್ದಾರೆ. ಆದರೆ, ಕೈದಿಯ ಕೈಯಲ್ಲಿ ಬೇಡಿ ಇದ್ದ ಕಾರಣಕ್ಕೆ ತಾಜಮಹಲ್‌ ಎದುರು ಇದ್ದ ಅಧಿಕಾರಿಗಳು ಆತನಿಗೆ ಒಳಗೆ ಹೋಗಲು ಅವಕಾಶ ನೀಡಲಿಲ್ಲ.

ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಆಗ್ರಾದಲ್ಲಿನ ಕೋರ್ಟ್‌ಗೆ ಕೈದಿ ಹಾಜರಾಗಬೇಕಿತ್ತು. ಪೊಲೀಸ್‌ ಅಧಿಕಾರಿಗಳು ಆತನನ್ನು ಕರೆದುಕೊಂಡು ಆಗ್ರಾಕ್ಕೆ ಬಂದಿದ್ದಾರೆ. ಈ ವೇಳೆ ಪೊಲೀಸ್‌ ಅಧಿಕಾರಿಗಳು ಹಾಗೂ ಕೈದಿಯ ನಡುವೆ ಅದ್ಭುತವಾಗಿ ಕೆಮೆಸ್ಟ್ರಿ ಬೆಳೆದಿದೆ. ಕೈದಿ ಹೇಳಿದ ಮಾತಿಗೆಲ್ಲಾ ತಲೆ ಅಲ್ಲಾಡಿಸುತ್ತಾ ಹರ್ಯಾಣದಿಂದ ಆಗ್ರಾಕ್ಕೆ ಬಂದಿದ್ದಾರೆ. ಆಗ್ರಾಕ್ಕೆ ಬಂದ ಬಳಿಕ ಕೈದಿಗೆ ತಾಜ್‌ಮಹಲ್‌ ನೋಡಬೇಕು ಎನ್ನುವ ಮನಸ್ಸಾಗಿದೆ. ತಮ್ಮ ವಶದಲ್ಲಿರುವ ವೇಳೆ ಆತ್ಮೀಯವಾಗಿದ್ದ ಕಾರಣಕ್ಕೆ ಪೊಲೀಸರು ಸೀದಾ ಜೀಪ್‌ಅನ್ನು ತಾಜ್‌ಮಹಲ್‌ ಕಡೆಗೆ ತಿರುಗಿಸಿದ್ದಾರೆ.

ಕೈದಿಯ ಕೈಗಳಿಗೆ ಪೊಲೀಸರು ಬೇಡಿ ಹಾಕಿ ಆಗ್ರಾಕ್ಕೆ ಕರೆದುಕೊಂಡು ಬಂದು ತಾಜ್‌ಮಹಲ್‌ ಕಟ್ಟಡದ ಸೌದರ್ಯವನ್ನು ತೋರಿಸಿದ್ದಾರೆ. ತಾಜ್‌ಮಹಲ್‌ನ ಪೂರ್ವದ ಗೇಟ್‌ನಲ್ಲಿದ್ದ  ಸಿಐಎಸ್‌ಎಫ್‌ ಭದ್ರತಾ ಅಧಿಕಾರಿಗಳು ಹಾಗೂ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಮೂರು ಪೊಲೀಸ್‌ ಅಧಿಕಾರಿಗಳು ಕೈದಿಯ ಜೊತೆ ತಿರುಗಾಡುತ್ತಿರುವುದನ್ನು ಕಂಡಿದ್ದಾರೆ. ಆರೋಪಿಯನ್ನು ಈ ರೀತಿ ಕರೆದುಕೊಂಡು ಬಂದಿರುವುದು ಸರಿಯಲ್ಲ ಎಂದು ಭದ್ರತಾ ಅಧಿಕಾರಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಈ ವೇಳೆ ಪೊಲೀಸರು, ಅಗತ್ಯವಿದ್ದಲ್ಲಿ ಕೈದಿಗೂ ಕೂಡ ನಾವು ಟಿಕೆಟ್‌ ಪಡೆದುಕೊಂಡೆ ಒಳಗೆ ಹೋಗುತ್ತೇವೆ ಎಂದು ತಳಿಸಿದ್ದಾರೆ. ಆದರೆ, ನಿಯಮದ ಕಾರಣ ನೀಡಿ ಭದ್ರತಾ ಅಧಿಕಾರಿಗಳು ಇದಕ್ಕೆ ಅವಕಾಶ ನೀಡಲಿಲ್ಲ.

ಇದಾದ ಬಳಿಕ ಅಲ್ಲಿದ್ದವರು ಕೈದಿ ಹಾಗೂ ಪೊಲೀಸರ ವಿಡಿಯೋ ಮಾಡಲಾರಂಭಿಸಿದರು. ಇದನ್ನು ಕಂಡ ಪೊಲೀಸರು ಪ್ರತಿಭಟನೆ ನಡೆಸಿದರು. ಕೈದಿಯನ್ನು ಕರೆದುಕೊಂಡು ತಾಜ್‌ಮಹಲ್‌ ನೋಡಲು ಬಂದ ಪೊಲೀಸರು ಎಂದು ಸಿದ್ದಿ ವೈರಲ್‌ ಆಗುತ್ತಿದ್ದಂತೆ ಬಿಳಿಯ ಕಾರ್‌ನಲ್ಲಿ ಬಂದಿದ್ದ ಪೊಲೀಸರು ಕೈದಿಯನ್ನು ಕರೆದುಕೊಂಡು ಹೋಗಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬಳಿಕ ಪೊಲೀಸ್‌ ಇಲಾಖೆಯ ಗಮನಕ್ಕೂ ಬಂದಿದೆ.

BREAKING: ನಟ ದರ್ಶನ್‌ ಮನೆ ಊಟ ಕೊಡುವಂತೆ ಸಲ್ಲಿಸಿದ್ದ ಅರ್ಜಿ ವಜಾ; ಜೈಲೂಟವೇ ಗತಿ

ಹರ್ಯಾಣ ಪೊಲೀಸರ ಹೇಳಿಕೆ: ಇದೀಗ ಈ ವಿಡಿಯೋಗೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರ ಹೇಳಿಕೆಯೂ ಹೊರಬಿದ್ದಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಸತ್ಯಾಂಶವನ್ನು ಕಂಡುಕೊಳ್ಳುತ್ತಿದ್ದಾರೆ, ಇದು ಶಿಸ್ತಿನ ಕುರಿತಾದ ವಿಚಾರವಾಗಿದೆ. ಪೊಲೀಸರ ಮಾಹಿತಿ ಪಡೆದ ಬಳಿಕ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಎಸ್‌ಪಿ ತಿಳಿಸಿದ್ದಾರೆ. ಆದರೆ, ಪೊಲೀಸರು ಬಂದಿದ್ದ ಕಾರು ಹಿಮಾಚಲ ನಂಬರ್ ಪ್ಲೇಟ್ ಹೊಂದಿತ್ತು ಎಂದು ಕೆಲವರು ಹೇಳಿದ್ದಾರೆ. ಈ ಕಾರನ್ನು ತಾಜ್ ಮಹಲ್‌ನ ಪೂರ್ವ ದ್ವಾರದ ಅಮರ್ ವಿಲಾಸ್ ಬಳಿಕ ನಿಲ್ಲಿಸಲಾಗಿತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ತಾಜ್‌ಮಹಲ್‌ನ ಭದ್ರತೆಗಾಗಿ ನಿಯೋಜಿಸಲಾದ ಎಸಿಪಿಯೊಬ್ಬರು ತಿಳಿಸಿದ್ದಾರೆ.

ಫೇಸ್‌ಬುಕ್‌ ಬಾಯ್‌ಫ್ರೆಂಡ್‌ನ ಮದುವೆಯಾಗೋಕೆ ನಕಲಿ ದಾಖಲೆ ಬಳಸಿ ಪಾಕ್‌ಗೆ ಹೋಗಿದ್ದ ಮಹಿಳೆ ಅರೆಸ್ಟ್‌!

Latest Videos
Follow Us:
Download App:
  • android
  • ios