ಹೆಂಡ್ತಿಗೆ ಗಂಡನಿಗಿಂತ ಹೆಚ್ಚಾಗಿ ಇನ್ಸ್‌ಟಾಗ್ರಾಮ್‌ ರೀಲ್ಸ್‌ ಮಾಡೋದ್ರಲ್ಲಿ ಒಲವು. ಗಂಡನಿಗೆ ನಾದಿನಿಯ ಮೇಲೆ ಕಣ್ಣು. ಇದಕ್ಕಾಗಿ ಪತ್ನಿ ಹಾಗೂ 1 ವರ್ಷದ ಮಗಳನ್ನು ಕ್ರಿಕೆಟ್‌ ಬ್ಯಾಟ್‌ನಿಂದ ಬಡಿದು ಸಾಯಿಸಿದ ಪತಿ, ಯಾರಿಗೂ ಅನುಮಾನ ಬರಬಾರದು ಎನ್ನುವ ಕಾರಣಕ್ಕಾಗಿ ಕಳ್ಳತನದ ಕಥೆ ಕಟ್ಟಿದ್ದ.

ನವದೆಹಲಿ (ಜ.9): ಆಘಾತಕಾರಿ ಘಟನೆಯಲ್ಲಿ ವ್ಯಕ್ತಿಯೊಬ್ಬ ತನ್ನ ಸುಂದರಿ ಪತ್ನಿ ಹಾಗೂ 1 ವರ್ಷದ ಪುಟ್ಟ ಮಗಳನ್ನು ದಾರುಣವಾಗಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಲಲಿತ್‌ಪುರದಲ್ಲಿ ನಡೆದಿದೆ. ಪತ್ನಿಯನ್ನು ತೊರೆದು ನಾದಿನಿಯನ್ನು ಮದುವೆಯಾಗಬೇಕು ಎಂದು ಆಸೆ ಪಟ್ಟಿದ್ದ ಆ ವ್ಯಕ್ತಿ ಅದಕ್ಕಾಗಿ ಹೆಂಡತಿ ಹಾಗೂ ಮಗಳು ಇಬ್ಬರನ್ನೂ ದಾರುಣವಾಗಿ ಹತ್ಯೆ ಮಾಡಿದ್ದಾರೆ. 22 ವರ್ಷದ ಪತ್ನಿ ಹಾಗೂ 1 ವರ್ಷದ ಮಗಳನ್ನು ಕ್ರಿಕೆಟ್‌ ಬ್ಯಾಟ್‌ನಿಂದ ಬಡಿದು ಸಾಯಿಸಿದ ಆತ, ಪೊಲೀಸರ ತನಿಖೆಯನ್ನು ದಿಕ್ಕು ತಪ್ಪಿಸುವ ಸಲುವಾಗಿ ಕಳ್ಳತನದ ಸ್ಟೋರಿಯನ್ನು ಕಟ್ಟಿದ್ದ. ಕೊಲೆ ಮಾಡಿದ ವ್ಯಕ್ತಿಯನ್ನು ನೀರಜ್‌ ಕುಶ್ವಾಹ ಎಂದು ಗುರುತಿಸಲಾಗಿದ್ದು, ಲಲಿತ್‌ಪುರದ ಸದರ್ ಕೊಟ್ವಾಲಿ ಪ್ರದೇಶದ ಚಂದಮಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೆಂಡತಿ ಹಾಗೂ ಮಗವಿನ ಮೃತ ದೇಹವನ್ನು ಇಲ್ಲಿನ ಮನೆಯಿಂದಲೇ ವಶಪಡಿಸಿಕೊಳ್ಳಲಾಗಿದೆ. ಕೆಲವು ಮುಸುಕುಧಾರಿಗಳು ತಮ್ಮ ಮನೆಗೆ ನುಗ್ಗಿ ಪತ್ನಿ ಮತ್ತು ಮಗಳ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ನೀರಜ್‌ ಕುಶ್ವಾಹ ಪೊಲೀಸರಿಗೆ ಹೇಳಿದ್ದ. ರಾತ್ರಿ 1.30ರ ವೇಳೆಗೆ 6 ಮಂದಿ ದುಷ್ಕರ್ಮಿಗಳು ತಮ್ಮ ಮನೆಗೆ ನುಗ್ಗಿದ್ದರು. ಈ ವೇಲೆ ಪತ್ನಿ ಹಾಗೂ ಮಗಳನ್ನು ಕೊಂದು ನನ್ನ ಬಾಯಿಗೆ ಸಾಕ್ಸ್ ತುರುಕಿ ನಗದು, ಚಿನ್ನಾಭರಣ ದೋಚಿ ಪರಾಯಾಗಿದ್ದಾರೆ ಎಂದು ಹೇಳಿದ್ದ.

ಗಾಯಗೊಂಡಿದ್ದೇನೆ ಎಂದು ಆಸ್ಪತ್ರೆಗೆ ಸೇರಿದ್ದ ಪಾಪಿ: ತನ್ನ ಕೈಯಾರೆ ಮಗಳು ಹಾಗೂ ಪತ್ನಿಯನ್ನು ಕೊಂದು, ಕಳ್ಳತನದ ನಾಟಕವಾಡಿದ್ದ ನೀರಜ್‌ ಕುಶ್ವಾಹ, ಇದನ್ನು ನಂಬಿಸುವ ಸಲುವಾಗಿ ಫೇಕ್‌ ಗಾಯಗಳನ್ನು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಆತ ಆಸ್ಪತ್ರೆಯ ಬೆಡ್‌ ಮೇಲೆ ಗಾಯಗೊಡು ಬಿದ್ದಿರುವಾಗ ಪೊಲೀಸರಿಗೆ ಸ್ಟೇಟ್‌ಮೆಂಟ್‌ ನೀಡುತ್ತಿದ್ದ ವಿಡಿಯೋ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆದರೆ, ಪೊಲೀಸರು ಮಾತ್ರ ನೀರಜ್‌ ಕುಶ್ವಾಹ ಮಾತಿನ ಮೇಲೆ ಅನುಮಾನ ಬಂದಿತ್ತು. ಆತನನ್ನು ಸರಿಯಾಗಿ ವಿಚಾರಣೆಗೆ ಒಳಪಡಿಸಿದ ಬಳಿಕ ಡಬಲ್‌ ಮರ್ಡರ್‌ ಮಾಡಿದನ್ನನ್ನು ಒಪ್ಪಿಕೊಂಡಿದ್ದಾರೆ.

ರೀಲ್ಸ್‌ ಮಾಡಲು ಬಿಡದ ಪತಿಯನ್ನು ಕೊಂದು ನೇತು ಹಾಕಿದ ಪತ್ನಿ!

ನನ್ನ ಪತ್ನಿ ಸುಂದರವಾಗಿದ್ದಳು, ಬರೀ ರೀಲ್ಸ್ ಮಾಡ್ತಿದ್ಲು: ಪೊಲೀಸ್‌ ವಿಚಾರಣೆಯ ವೇಳೆ ನೀರಜ್‌ ಕುಶ್ವಾಹ, 'ನನ್ನ ಪತಿ ಸುಂದರವಾಗಿದ್ದಳು. ಆದರೆ, ಪ್ರತಿದಿನ ರೀಲ್ಸ್‌ ಮಾಡೋದ್ರಲ್ಲೆ ಸಮಯ ಕಳೆಯುತ್ತಿದ್ದಳು. ಇದಕ್ಕಾಗಿ ನಾನು ಆಕೆಯನ್ನು ಬಿಟ್ಟು, ಆಕೆಯ ತಂಗಿಯನ್ನು ಮದುವೆಯಾಗಬೇಕು ಎದು ಬಯಸಿದ್ದೆ. ಇದು ನನ್ನ ಪತ್ನಿಗೆ ಇಷ್ಟವಿದ್ದರಿಲಿಲ್ಲ. ಇದಕ್ಕಾಗಿ ಆಕೆಯನ್ನು ಕ್ರಿಕೆಟ್‌ ಬ್ಯಾಟ್‌ನಿಂದ ಹೊಡೆದು ಸಾಯಿಸಿದೆ. ಬಳಿಕ ಕಳ್ಳತನದ ಕಥೆ ಕಟ್ಟುವ ಮೂಲಕ ನನ್ನ ಮೇಲೆ ಯಾರಿಗೂ ಅನುಮಾನ ಬರದಂತೆ ನೋಡಿಕೊಂಡೆ' ಎಂದು ಹೇಳಿದ್ದಾರೆ.

ಗೋವಾದಲ್ಲಿ ಮಗು ಕೊಂದ ಬೆಂಗಳೂರು ಸ್ಟಾರ್ಟಪ್‌ ಸಂಸ್ಥಾಪಕಿ ಅರೆಸ್ಟ್: ಶವದ ಸಮೇತ ಕರ್ನಾಟಕದಲ್ಲಿ ಸಿಕ್ಕಿಬಿದ್ದ ಪಾತಕಿ!

ತನ್ನ ಮನೆ ದರೋಡೆಯಾಗಿದೆ ಎನ್ನುವಂತೆ ಬಿಂಬಿಸಲು ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಮನೆಯಲ್ಲಿದ್ದ ಟಿವಿ ಹಿಂದೆ ಚಿನ್ನಾಭರಣಗಳನ್ನು ಬಚ್ಚಿಟ್ಟಿದ್ದರು. ಆದರೆ ಪೊಲೀಸರು ಪತಿ ಹೂಡಿದ್ದ ಸಂಚು ಬಯಲಿಗೆಳೆದು ಆರೋಪಿ ಪತಿಯನ್ನು ಬಂಧಿಸಿದ್ದಾರೆ. ಜೋಡಿ ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಕ್ಕೆ 25 ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿದೆ.

Scroll to load tweet…