ಈ ಆಘಾತಕಾರಿ ಘಟನೆಯ ವಿಡಿಯೋವನ್ನು ಹೋಟೆಲ್‌ನ ಟೆರಸ್‌ ಮೇಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉದ್ಯಮಿಯ ಮಗನ ನಡುವಿನ ವಾಗ್ವಾದ ಹಾಗೂ ಆ ನಂತರದ ಘಟನೆಗಳು ಅದರಲ್ಲಿ ಸೆರೆಯಾಗಿವೆ.

ನವದೆಹಲಿ (ಏ.22): ಉತ್ತರ ಪ್ರದೇಶದ ಬರೇಲಿಯಲ್ಲಿ ಆಘಾತಕಾರಿ ಘಟನೆ ವರದಿಯಾಗಿದೆ. ಉದ್ಯಮಿಯೊಬ್ಬ, ಫೈವ್‌ ಸ್ಟಾರ್‌ ಹೋಟೆಲ್‌ನ ಟೆರಸ್‌ ಮೇಲಿಂದ ವ್ಯಕ್ತಿಯೊಬ್ಬನನ್ನು ಕೆಳಕ್ಕೆ ತಳ್ಳಿದ್ದಾನೆ. ಭಾನುವಾರ ಮಧ್ಯರಾತ್ರಿಯ ವೇಳೆ ವ್ಯಕ್ತಿ ಹಾಗೂ ಉದ್ಯಮಿಯ ಪುತ್ರನ ನಡುವೆ ಯಾವುದೋ ವಿಚಾರಕ್ಕಾಗಿ ವಾಗ್ವಾದ ನಡೆದಿದೆ. ಈ ವೇಳೆ ವ್ಯಕ್ತಿಯನ್ನು ಆ ಉದ್ಯಮಿಯ ತಂದೆ ಟೆರಸ್‌ನಿಂದಲೇ ಕೆಳಗೆ ತಳ್ಳಿದ್ದಾರೆ. ಘಟನೆಯ ಎಲ್ಲ ಘಟನೆಗಳು ಸಿಸಿಟಿಯಲ್ಲಿ ಸೆರೆಯಾಗಿದೆ. ಟೆರಸ್‌ನಿಂದ ಕೆಳಗೆ ಬಿದ್ದ ವ್ಯಕ್ತಿಯನ್ನು ಹೆಲ್ತ್‌ ಸೆಕ್ಟರ್‌ನಲ್ಲಿ ಉದ್ಯಮಿಯಾಗಿರುವ ಸಾರ್ಥಕ್‌ ಅಗರ್ವಾಲ್‌ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆನ್‌ಲೈನ್‌ನಲ್ಲಿ ಹೋಟೆಲ್‌ನ ಟೆರಸ್‌ ಮೇಲೆ ನಡೆದಿರುವ ಆಘಾತಕಾರಿ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್‌ ಆಗಿವೆ. ವೀಡಿಯೊದಲ್ಲಿ, ಆರೋಪಿ ಸಂಜೀವ್ ಅರೋರಾ, ವಾಗ್ವಾದದ ನಡುವೆ ಪ್ರವೇಶಿಸಿದ್ದನ್ನು ಕಾಣಬಹುದಾಗಿದೆ. ಸಾರ್ಥಕ್ ಅಗರವಾಲ್ ಅನ್ನು ಕಟ್ಟಡದಿಂದ ಕೆಳಗೆ ದೂಡುವ ಮೊದಲು, ಸಂಜೀವ್ ಅರೋರಾ ಅವರ ಕಾಲಿಗೆ ನಮಸ್ಕರಿಸುತ್ತಿರುವುದನ್ನೂ ಕಾಣಬಹುದಾಗಿದೆ.

ಸಾರ್ಥಕ್‌ ಅಗರ್ವಾಲ್‌ ಟೆರಸ್‌ನ ಮೇಲಿಂದ ಕೆಳಗೆ ಬಿದ್ದ ಬಳಿಕ, ಕೆಲವರು ಅವರನ್ನು ರಕ್ಷಣೆ ಮಾಡಲು ಮುಂದಾದರೆ, ಸಂಜೀವ್‌ ಅರೋರಾ ಮಾತ್ರ ಇನ್ನೊಬ್ಬ ವ್ಯಕ್ತಿಯೊಂದಿಗೆ ವಾಗ್ವಾದ ಮಾಡಲು ಆರಂಭಿಸಿದರು. ಆತನ ಮೇಲೂ ಸಂಜೀವ್‌ ಅರೋರಾ ಹಲ್ಲೆ ಮಾಡಿದ್ದಾನೆ.

ಆಗಿದ್ದೇನು?: ಸಾರ್ಥಕ್‌ ಅಗರ್ವಾಲ್‌ ತನ್ನ ಸ್ನೇಹಿತರೊಂದಿಗೆ ಹೋಟೆಲ್‌ನಲ್ಲಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ರಿಧಿಮ್‌ ಅರೋರಾ ಕೂಡ ಇದ್ದರು. ಈ ವೇಳೆ ಸಾರ್ಥಕ್‌ ಹಾಗೂ ರಿಧಿಮ್‌ ಅರೋರಾ ನಡುವೆ ಮಧ್ಯರಾತ್ರಿ 2 ಗಂಟೆಯ ವೇಳೆಗೆ ವಾಗ್ವಾದ ನಡೆದಿದೆ. ಈ ವೇಳೆ ಘಟನಾ ಸ್ಥಳದಲ್ಲಿದ್ದ ತನ್ನ ತಂದೆ, ಜವಳಿ ಉದ್ಯಮಿ ಸಂಜೀವ್‌ ಅರೋರಾಗೆ ಈ ಕುರಿತಾಗಿ ದೂರು ನೀಡಿದ್ದರು. ಸಂಜೀವ್‌ ಅರೋರಾ ಘಟನಾ ಸ್ಥಳಕ್ಕೆ ಬರುವ ಮುನ್ನ ಇಬ್ಬರ ನಡುವೆ ತೀಕ್ಷ್ಣವಾದ ಮಾತುಕತೆಯಾಗಿದೆ. ಸಂಜೀವ್‌ ಅರೋರಾ ಬಂದ ಬಿಕ ಸಾರ್ಥಕ್‌ ಅಗರ್ವಾಲ್‌ ಅವರ ಕಾಲು ಹಿಡಿದುಕೊಂಡಿದ್ದಾರೆ. ಆದರೆ, ಈತನ ಕಾಲರ್‌ ಹಿಡಿದ ಸಂಜೀವ್‌ಅರೋರಾ ಕೆನ್ನೆಗೆ ಬಾರಿಸಿದ್ದು ಮಾತ್ರವಲ್ಲದೆ, ಸಾರ್ಥಕ್‌ನನ್ನುಟೆರಸ್‌ನಿಂದ ಕೆಳಗೆ ದೂರಿಡಿದ್ದರು. ಸಂಜೀವ್‌ ಅರೋರಾ ಆ ಬಳಿಕ ಟೆರಸ್‌ ಮೇಲೆಯೇ ಇದ್ದ ಇನ್ನೊಬ್ಬ ವ್ಯಕ್ತಿಯ ಮೇಲೂ ಹಲ್ಲೆ ಮಾಡಿದ್ದಾರೆ.

'ಅತಿಯಾದ ಪೆಸ್ಟಿಸೈಡ್‌..' ಎವರೆಸ್ಟ್‌ ಫಿಶ್‌ ಕರಿ ಮಸಾಲಾ ವಿರುದ್ಧ ಸಿಂಗಾಪುರ ಕ್ರಮ!

ವರದಿಯ ಪ್ರಕಾರ ಸಂತ್ರಸ್ಥ ಸಾರ್ಥಕ್‌ ಅಗರ್ವಾಲ್‌ ತಂದೆ ಸಂಜಯ್ ಅಗರವಾಲ್ ಆರೋಪಿಗಳೊಂದಿಗಿನ ಯಾವುದೇ ಸಂಬಂಧವನ್ನು ನಿರಾಕರಿಸಿದ್ದಾರೆ. ಈ ವ್ಯಕ್ತಿಗಳು ಯಾರೆಂದು ನನ್ನ ಮಗನಿಗಾಗಲಿ ನನಗಾಗಲಿ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಎಫ್‌ಐಆರ್‌ ಪ್ರಕಾರ, ಆರೋಪಿಗಳು ಕುಡಿದ ಅಮಲಿನಲ್ಲಿ ಯಾವುದೇ ಪ್ರಚೋದನೆ ಇಲ್ಲದೆ ಸಾರ್ಥಕ್‌ನ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ ಆರೋಪದಡಿಯಲ್ಲಿ ಗಂಭೀರ ಹಾನಿಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Exclusive: ಲಂಡನ್‌ನ ಸ್ಟೋಕ್‌ಪಾರ್ಕ್‌ನಲ್ಲಿ ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಮದುವೆ

Scroll to load tweet…