Asianet Suvarna News Asianet Suvarna News

ಕೈಮುಗಿದು ಮಾತನಾಡುತ್ತ ವೃದ್ಧನ  ಬೂಟುಕಾಲಿನಿಂದ ಒದ್ದ ಪೊಲೀಸ್

* ಕೈಮುಗಿದು ಮಾತನಾಡುತ್ತಿದ್ದ ವೃದ್ಧನ ಮೇಲೆ ಹಲ್ಲೆ
* ಬೂಟುಕಾಲಿನಿಂದ ಒದ್ದ ಪೊಲೀಸ್
* ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ

UP policeman kicks an elderly person, video goes viral mah
Author
Bengaluru, First Published Feb 3, 2022, 12:29 AM IST | Last Updated Feb 3, 2022, 12:34 AM IST

ಬೆಂಗಳೂರು (ಫೆ. 03): ಅಂಗವಿಕಲ ಮಹಿಳೆಗೆ ಎಎಸ್‌ಐ ಮನಬಂದಂತೆ ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು.  ಅಂಗವಿಕಲೆ ಮಂಜುಲಾ ನೋ ಪಾರ್ಕಿಂಗ್‌ನಲ್ಲಿ ತಮ್ಮ ವಾಹನವನ್ನು ನಿಲ್ಲಿಸಿದ್ದರು. ಈ ಬಗ್ಗೆ ಪ್ರಶ್ನಿಸಿದ್ದ ಟೋಯಿಂಗ್ ಸಿಬ್ಬಂದಿ  ಜತೆ ಮಂಜುಳಾ ವಾಗ್ವಾದ ನಡೆಸಿದ್ದಾರೆ ಅಲ್ಲದೇ ಎಎಸ್‌ಐ ನಾರಾಯಣ್‌ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ.

ಇದರಿಂದ ಗಾಯಗೊಂಡ ಎಎಸ್‌ಐ ಕೋಪಗೊಂಡು ಮಹಿಳೆಗೆ ಶೂ ಕಾಲಿನಿಂದ ತುಳಿದಿದ್ದಾರೆ. ಸಾರ್ವಜನಿಕರು, ಸಿಬ್ಬಂದಿ ಮಧ್ಯಪ್ರವೇಶಿಸಿ ಗಲಾಟೆ ತಡೆದಿದ್ದಾರೆ.ಅಂಗವಿಕಲ ಮಹಿಳೆಯನ್ನು ಎಎಸ್‌ಐ ಮನಬಂದಂತೆ ಥಳಿಸಿದ್ದಾರೆವಿಕಲಾಂಗ ಮಹಿಳೆಯನ್ನು ಮನಬಂದಂತೆ ಥಳಿಸಿದ್ದಕ್ಕೆ ಎಎಸ್‌ಐ ನಾರಾಯಣ ಗೌಡ ಅಮಾನತು ಶಿಶ್ಷೆಗೆ ಗುರಿಯಾಗಿದ್ದರು.  ಈಗ ಅಂಥದ್ದೇ ಒಂದು ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಗಿದೆ. 

ಪೊಲೀಸರ ಮುಂದೆ ಕೈಮುಗಿದು ಮಾತನಾಡುತ್ತಿದ್ದ ವೃದ್ಧನ ಮೇಲೆ ಪೊಲೀಸರು (Police) ದರ್ಪ ಮೆರೆದಿದ್ದಾರೆ. ಬೂಟು ಕಾಲಿನಿಂದ ಒದ್ದಿದ್ದಾರೆ.  ಸೋಶಿಯಲ್ (Social Media)ಮೀಡಿಯಾದಲ್ಲಿಯೂ ವಿಡಿಯೋ ವೈರಲ್ ಆಗಿದ್ದು ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಜನರು ಆಗ್ರಹಿಸಿದ್ದಾರೆ.

Shivamogga Rape Case: 4 ವರ್ಷಗಳಿಂದ ಮಗಳ ಮೇಲೆಯೇ ರೇಪ್‌ ಮಾಡಿದ ಕಾಮುಕ ತಂದೆ

ಸಂತ್ರಸ್ತ  ವೃದ್ಧ ವಿಕಲಚೇನತ ಎನ್ನುವುದು ಗೊತ್ತಾಗಿದ್ದು ಮಾಜಿ ಪೊಲೀಸ್ ಅಧಿಕಾರಿ ಒಬ್ಬರು ಟ್ವಿಟರ್ ನಲ್ಲಿ ಈ ಘಟನೆಯನ್ನು ಹಂಚಿಕೊಂಡಿದ್ದಾರೆ.  ವಿಡಿಯೋ ವೈರಲ್ ಆಗುತ್ತಿದೆ. 

ಟೋಯಿಂಗ್ ನಿಲ್ಲಿಸಿದ ಬೆಂಗಳೂರು ಪೊಲೀಸರು:  ಟೋಯಿಂಗ್ ನಲ್ಲಿ ದೊಡ್ಡ ಮಟ್ಟದ ಗೋಲ್ ಮಾಲ್ ನಡೆಯುತ್ತಿದೆ ಎನ್ನುವ ವರದಿಗಳು ಮೇಲಿಂದ ಮೇಲೆ ಬಂದಿದ್ದವು. ಅಲ್ಲದೇ ಪೊಲೀಸರು ಜನರೊಂದಿಗೆ ಸರಿಯಾದ ವರ್ತನೆ ತೋರುತ್ತಿಲ್ಲ ಎಂಬ ವಿಡಿಯೋಗಳು ವೈರಲ್ ಆಗಿದ್ದವು.  ಅಂಶಗಳು ಗಂಭೀರ ರೂಪ ಪಡೆದುಕೊಂಡ ಕಾರಣಕ್ಕೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿ ಸದ್ಯಕ್ಕೆ ಟೋಯಿಂಗ್ ಇಲ್ಲ ಎಂಬುದನ್ನು ಹೇಳಿದ್ದರು. ಅಲ್ಲದೇ ಪೊಲೀಸರು ಜನರೊಂದಿಗೆ ದೌಹಾರ್ದಯುತವಾಗಿ ವರ್ತಿಸಬೇಕು ಎಂದು ತಿಳಿಸಿದ್ದರು .

ಕರ್ತವ್ಯ ಲೋಪ:   ಕರ್ತವ್ಯ ಲೋಪ ಹಿನ್ನೆಲೆ ಆರು ಮಂದಿ ಪೊಲೀಸರ (Karnataka POlice) ಅಮಾನತು (Suspend)ಮಾಡಲಾಗಿತ್ತು ಮಂಗಳುರು ಪಾಂಡೇಶ್ವರ ಮಹಿಳಾ (Woman) ಠಾಣೆ ಪಿಎಸ್ಸೈ ರೋಸಮ್ಮ ಸೇರಿ ಆರು ಮಂದಿ  ಸಿಬ್ಬಂದಿ ಅಮಾನತು ಮಾಡಲಾಗಿತ್ತು.

ಪೋಕ್ಸೋ ಪ್ರಕರಣ ದಾಖಲಿಸಲು ನಿರ್ಲಕ್ಷ್ಯ ತಾಳಿದ ಆರೋಪದಡಿ ಪಿಎಸ್ಸೈ ಸಸ್ಪೆಂಡ್ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ದವೇ ದೂರು ಬಂದಾಗ ನಿರ್ಲಕ್ಷ್ಯ ತಾಳಿದ್ದು ಪ್ರಕರಣದ ಮೂಲ. ಮತ್ತೊಂದು ‌ಪ್ರತ್ಯೇಕ ಪ್ರಕರಣದಲ್ಲಿ ಮಹಿಳಾ ಠಾಣೆಯ ಐವರನ್ನು ಅಮಾನತು ಮಾಡಲಾಗಿತ್ತು.. ಕರ್ತವ್ಯದ ಅವಧಿಯಲ್ಲಿ ಠಾಣೆಯಲ್ಲಿ ‌ಮದ್ಯಪಾನ ಮಾಡಿ ಅನುಚಿತ ವರ್ತನೆ ಹಿನ್ನೆಲೆ ‌ ಇನ್ನೊಬ್ಬ ಪುರುಷ ಸಿಬ್ಬಂದಿ ಶಿಕ್ಷೆಗೆ ಗುರಿಯಾಗಿದ್ದರು.

ಇಬ್ಬರು ಎಎಸ್ಸೈ, ಇಬ್ಬರು ಹೆಡ್ ಕಾನ್ಸ್‌ಟೇಬಲ್, ಒಬ್ಬ ಕಾನ್ಸ್‌ಟೇಬಲ್  ಶಿಕ್ಷೆಗೆ ಗುರಿಯಾಗಿದ್ದರು. ಸಿಸಿಟಿವಿ ದೃಶ್ಯಾವಳಿ ಮತ್ತು ಎಸಿಪಿ ಹಾಗೂ ಡಿಸಿಪಿ ವರದಿಯನ್ವಯ ಕ್ರಮ ತೆಗೆದುಕೊಳ್ಳಲಾಗಿತ್ತು.

ಚಾಮರಾಜನಗರ ಪ್ರಕರಣ:   ಜೂಜಾಟದಲ್ಲಿ ಸಿಕ್ಕಿ ಬಿದ್ದಿದ್ದ ಎಎಸ್ಐ (ASI) ಸೇರಿ ಮೂವರು ನೌಕರರು ಸೇವೆಯಿಂದ ಅಮಾನತಾಗಿದ್ದಾರೆ.   ಡಿ 21 ರಂದು ಜೂಜು ಅಡ್ಡೆ ಮೇಲೆ ದಾಳಿ ಮಾಡಿದ್ದ ವೇಳೆ  ಜೂಜಾಟವಾಡುತ್ತಿದ್ದ ಪೊಲೀಸರು (Police) ಸೇರಿ 17 ಮಂದಿಯನ್ನು ಬಂಧಿಸಲಾಗಿತ್ತು.  ಚಾಮರಾಜನಗರದ (Chamarajanagar) ಕರಿನಂಜನ ಪುರದಲ್ಲಿ ಜೂಜಾಟ ನಡೆಸಲಾಗಿತ್ತು.

ಇದೀಗ ಘಟನೆಗೆ ಸಂಬಂಧಿಸಿದಂತೆ ಎಎಸ್ಐ , ಹೆಡ್ ಕಾನ್ಸ್ ಟೇಬಲ್ , ತಹಶೀಲ್ದಾರ್  ಚಾಲಕನನ್ನು ಸಸ್ಪೆಂಡ್ ಮಾಡಲಾಗಿದೆ.  ಮೀಸಲು ಪಡೆಯ ಎಎಸ್ಐ (ASI) ಪ್ರದೀಪ್, ಹೆಡ್ ಕಾನ್ಸ್‌ ಟೇಬಲ್ ಮರಿಸ್ವಾಮಿ, ಚಾಮರಾಜನಗರ (Chamarajanagar) ತಹಶೀಲ್ದಾರ್ ಚಾಲಕ ಕಮಲೇಶ್ ಅವರನ್ನು ಅಮಾನತು ಮಾಡಲಾಗಿತ್ತು.

ಕಳ್ಳರ ಗ್ಯಾಂಗಿಗೆ ಪೊಲೀಸಪ್ಪನೇ ನಾಯಕ :  ಖಾಕಿ ತೊಟ್ಟು ಕಳ್ಳರ ಹಿಡಿಯಬೇಕಾದ ಪೊಲೀಸ್‌ ಕಾನ್‌ಸ್ಟೇಬಲ್‌ವೊಬ್ಬ(Police Constable), ಶೋಕಿ ಬದುಕಿನ ಮೋಹಕ್ಕೆ ಸಿಲುಕಿ ಇಬ್ಬರು ಅಪ್ರಾಪ್ತ ಹುಡುಗರನ್ನು ಒಳಗೊಂಡ ಬೈಕ್‌ ಕಳ್ಳರ ತಂಡಕ್ಕೆ ಬಾಸ್‌ ಆಗಿದ್ದ ಪೊಲೀಸಪ್ಪನ ಕತೆ ರೋಚಕ.

ಈಶಾನ್ಯ ವಿಭಾಗದ ಡಿಸಿಪಿ ಕಚೇರಿಯ ಕಾನ್‌ಸ್ಟೇಬಲ್‌ ಹೊನ್ನಪ್ಪ ದುರದಪ್ಪ ಮಾಳಗಿ ಅಲಿಯಾಸ್‌ ರವಿ ಎಂಬಾತನೇ ಬೈಕ್‌ ಕಳ್ಳರ ಗ್ಯಾಂಗ್‌(Gang of Thieves) ಸ್ಟಾರ್‌ ಆಗಿದ್ದು, ಕದ್ದ ಬೈಕ್‌ಗಳ ವಿಲೇವಾರಿಗೆ ಸಹಕರಿಸಿದ ಆರೋಪದ ಮೇರೆಗೆ ರಾಜಸ್ಥಾನ(Rajasthan) ಮೂಲದ ಚಿನ್ನಾಭರಣ ವ್ಯಾಪಾರಿ ರಮೇಶ್‌ ಕೂಡಾ ಜೈಲು ಸೇರಿದ್ದ.

 

 

Latest Videos
Follow Us:
Download App:
  • android
  • ios